ರಾತ್ರಿ ಮಲಗಿದಾಗ ಹಲವರಿಗೆ ಕಾಲಿನ ನೋವು, ಸ್ನಾಯುಗಳು ಬಿಗಿಯಾಗಿ ಒಂದು ರೀತಿಯ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದರಿಂದ ಇಡೀ ರಾತ್ರಿಯ ನೆಮ್ಮದಿಯ ನಿದ್ರೆ ಕಳೆದುಕೊಳ್ಳಬೇಕಾಗುತ್ತದೆ. ಕಾಲು ಹಾಗೂ ತೊಡೆಯ ಸ್ನಾಯುಗಳಲ್ಲಿ ಹೆಚ್ಚಾಗಿ ಈ ನೋವು ಕಾಣಿಸಿಕೊಳ್ಳುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.40% ರಷ್ಟು ಜನರಲ್ಲಿ ಈ ರೀತಿಯ ಕಾಲು ನೋವು ರಾತ್ರಿ ಸಮಯದಲ್ಲಿ ಕಂಡುಬರುತ್ತವೆ.ಈ ರೀತಿಯ ಕಾಲು ನೋವು ಯಾಕೆ ರಾತ್ರಿಯ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ? ಇದು ಯಾವುದಾದರೂ ಆರೋಗ್ಯ ಸಮಸ್ಯೆಯ ಲಕ್ಷಣವೇ ಅಥವಾ ಕೇವಲ ಸ್ನಾಯುಗಳು ಸೋತಾಗ ಉಂಟಾಗುವ ನೋವೇ..? ಇಲ್ಲಿದೆ ಮಾಹಿತಿ
ಸ್ನಾಯು ಸೆಳೆತಕ್ಕೆ ಕಾರಣವೇನು?
ಅಧಿಕ ವಾಕಿಂಗ್ ಅಥವಾ ಓಟದಿಂದ ಕಾಲಿನ ಕೆಳ ಸ್ನಾಯುಗಳ ಮೇಲೆ ಒತ್ತಡ ಬೀಳುವುದರಿಂದ ಈ ರೀತಿಯ ನೋವು ಕಾಣಿಸಿಕೊಳ್ಳಬಹುದು.ಸಾಮಾನ್ಯವಾಗಿ ವಾರದಲ್ಲಿ ಕನಿಷ್ಠ ಮೂರು ಬಾರಿ ಈ ರೀತಿ ಸೆಳೆತದ ನೋವು ಉಂಟಾಗುತ್ತದೆ. ಕೆಲವರಲ್ಲಿ ನಿತ್ಯ ಕಾಲು ಸೆಳೆತ ಉಂಟಾಗುವುದು ಕೂಡ ಸಾಧ್ಯ. ಸ್ನಾಯುಗಳಿಗೆ ಕೊಂಚ ವ್ಯಾಯಾಮ ನೀಡಿದಾಗ, ಸ್ಟ್ರೆಂಚಿಂಗ್ ನಿಂದ ನೋವು ಕಡಿಮೆಯಾಗಬಹುದು. ಆದರೆ ಈ ರೀತಿ ಕಾಡುವ ಕಾಲಿನ ಸೆಳೆತ ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಯ ಕಾರಣವೂ ಆಗಿರುತ್ತದೆ.
ಯಾವಾಗ ವೈದ್ಯರನ್ನ ಕಾಣಬೇಕು?
ರಾತ್ರಿಯಲ್ಲಿ ಕಾಡುವ ಕಾಲು ಸೆಳೆತ ಸಾಮಾನ್ಯವಾಗಿ ಗಂಭೀರ ಸಮಸ್ಯೆಯಾಗಿರುವುದಿಲ್ಲ. ಆದರೆ ಕೆಲವು ಆರೋಗ್ಯ ಸಮಸ್ಯೆಯ ಲಕ್ಷಣಗಳ ಜೊತೆ ಗೋಚರಿಸುತ್ತವೆ. ಮೊಟಾರ್ ನ್ಯೂರೊನ್ ಹಾಗೂ ಕೆಲವು ವಿಧದ ಪೆರಿಫೆರಲ್ ನ್ಯೂರೊಪತಿ ಸಮಸ್ಯೆ ಇದ್ದಾಗಲೂ ರಾತ್ರಿ ಸಮಯದಲ್ಲಿ ಕಾಲಿನ ಸಮಸ್ಯೆ ಉಂಟಾಗುತ್ತದೆ. ಆದರೆ ಇದು ಪ್ರಾಥಮಿಕ ರೋಗ ಲಕ್ಷಣವಾಗಿರುವುದಿಲ್ಲ. ಪೆರಿಫೆರಲ್ ನ್ಯೂರೊಪಥಿಯಲ್ಲಿ ಕಾಲುಗಳು ಅಶಕ್ತಗೊಳ್ಳುತ್ತವೆ ಅಥವಾ ಸಂವೇದನೆ ಕಳೆದುಕೊೆಳ್ಳುತ್ತವೆ. ಇದರಿಂದ ನಡೆದಾಡುವಾಗ ಸಮತೋಲನ ತಪ್ಪುವ ಸಮಸ್ಯೆ ಉಂಟಾಗುತ್ತದೆ. ಮೊಟಾರ್ ನ್ಯೂರಾನ್ ರೋಗದಲ್ಲಿ ಕಾಲುಗಳು ಸಣ್ಣದಾಗುವ ಹಾಗೂ ಸ್ನಾಯುಗಳಲ್ಲಿ ಸೆಳೆತ ಕಂಡುಬರುತ್ತದೆ. ಪಿಎಲ್ಎಮ್‌ಎಸ್ ನಂತಹ ನಿದ್ರಾಹೀನತೆ ಸಮಸ್ಯೆಯಲ್ಲೂ ಕಾಲು ನೋವು ಕಾಣಿಸಿಕೊಳ್ಲುತ್ತದೆ. ಹೀಗಾಗಿ ರೋಗಿಯ ಸಂಪೂರ್ಣ ಆರೋಗ್ಯ ಮಾಹಿತಿ ಹಾಗೂ ಪರೀಕ್ಷೆಯ ಬಳಿಕ ಸಮಸ್ಯೆಯನ್ನು ಖಚಿತವಾಗಿ ಪತ್ತೆಹಚ್ಚಬಹುದು.
ಯಾವೆಲ್ಲ ರೀತಿಯ ವೈದ್ಯಕೀಯ ಪರೀಕ್ಷೆ ಅಗತ್ಯ*
ರೋಗಿಯ ನಿದ್ರೆಯ ವಿಧಾನವನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಜೊತೆಗೆ ಕ್ಯಾಲ್ಶಿಯಮ್, ಮ್ಯಾಗ್ನೇಶಿಯಮ್ ಪ್ರಮಾಣವನ್ನು ಮತ್ತು ಥೈರಾಯ್ಡ್ ಹಾರ್ಮೋನ್‌ನ್ನು ಕೂಡ ಪರೀಕ್ಷಿಸಲಾಗುತ್ತದೆ.
ಚಿಕಿತ್ಸೆ ಹೇಗೆ…?
ಆರಂಭಿಕ ಹಂತದಲ್ಲಿ ಕೆಲವು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುವಂತೆ ಸೂಚಿಸಲಾಗುತ್ತದೆ. ಜೊತೆಗೆ ಆಲ್ಕೋಹಾಲ್ ಮತ್ತು ಕೆಫೆನ್ ಸೇವನೆಯನ್ನು ನಿಲ್ಲಿಸುವಂತೆ ಸಲಹೆ ನೀಡಲಾಗುತ್ತದೆ. ವಿಟಮಿನ್ ಇ, ಗಬಾಪೆನ್‌ಟಿನ್ , ಕಾರ್ಬಾಮಜೆಪೈನ್ ಡ್ರಗ್‌ಗಳಿಗೆ ಸ್ಪಂದಿಸದ ರೋಗಿಗಳಿಗೆ ಲಿಯೊಫೆನ್ ಬಳಕೆ ಮಾಡಲಾಗುತ್ತದೆ. ಚಿಕಿತ್ಸೆಯು ರೋಗಿಯ ನರವೈಜ್ಞಾನಿಕ ಸಮಸ್ಯೆಯನ್ನು ಆಧರಿಸಿರುತ್ತದೆ. ಆದರೆ ಈ ರೀತಿ ಕಾಲು ಸೆಳೆತ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯು ಕಳಪೆ ಗುಣಮಟ್ಟದ ನಿದ್ರೆಯನ್ನು ಹೊಂದಿರುತ್ತಾನೆ. ಹೀಗಾಗಿ ಪದೇ ಪದೇ ಈ ರೀತಿ ರಾತ್ರಿ ಸಮಯದಲ್ಲಿ ಕಾಲು ನೋಉ ಕಾಡುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆಗೆ ಒಳಪಡುವುದು ಮುಖ್ಯ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



