ನವದೆಹಲಿ: ಒಡಿಶಾದ ಚಂಡೀಪುರದಲ್ಲಿ ನಿನ್ನೆ ಭಾರತ ಅಗ್ನಿ-5 ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ. ಇದು ಎಲ್ಲಾ ತಾಂತ್ರಿಕ ಮತ್ತು ಕಾರ್ಯಾತ್ಮಕ ಗುರಿ ಮತ್ತು ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದರೊಂದಿಗೆ ಭಾರತದ ಮಿಲಿಟರಿ ಬತ್ತಳಿಕೆಗೆ ಮಹೋನ್ನತ ಅಸ್ತ್ರವೊಂದು ಜೋಡಿತಗೊಳ್ಳುವುದು ನಿಶ್ಚಿತವಾಗಿದೆ. ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಈ ಕ್ಷಿಪಣಿ ಭಾರತದ ಪಾಲಿಗೆ ಅತಿದೊಡ್ಡ ರಕ್ಷಣಾಸ್ತ್ರವೆನಿಸಿದೆ.ಡಿಅರ್ಡಿಒ ಅಭಿವೃದ್ಧಿಪಡಿಸಿರುವ ಅಗ್ನಿ ಸರಣಿಯ ಐದನೇ ಕ್ಷಿಪಣಿಯಾದ ಇದು 5,000 ಕಿಮೀ ದೂರದ ಶ್ರೇಣಿ ಹೊಂದಿದೆ. ಇದೇ ಕ್ಷಿಪಣಿಯನ್ನು 8,000 ಕಿಮೀ ಶ್ರೇಣಿವರೆಗೆ ಹೋಗುವಂತೆ ಅಭಿವೃದ್ಧಪಡಿಸಲು ಅವಕಾಶ ಇದೆ.
ಎಂಐಆರ್ವಿ ಟೆಕ್ನಾಲಜಿ; ಒಂದೇ ಮಿಸೈಲ್ ಹಲವು ಗುರಿ…
ಅಗ್ನಿ-5 ಕ್ಷಿಪಣಿಯನ್ನು ಎಂಐಆರ್ವಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಮ್ಮೆ ಮಿಸೈಲ್ ಹಾರಿ ಬಿಟ್ಟರೆ ಇದು ತನ್ನಲ್ಲಿರುವ ವಿವಿಧ ಸಿಡಿತಲೆಗಳನ್ನು ಬಳಸಿ ಒಂದಕ್ಕಿಂತ ಹೆಚ್ಚು ಗುರಿಗಳನ್ನು ಹೊಡೆದುರುಳಿಸಬಲ್ಲುದು. ಅಗ್ನಿ-5 ಕ್ಷಿಪಣಿಯು ಒಟ್ಟು 1.5 ಟನ್ ತೂಕದ ಮೂರು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲುದು. ಮಿಸೈಲ್ನಲ್ಲಿರುವ ಒಂದೊಂದು ಸಿಡಿತಲೆಯೂ ಕೂಡ ಬೇರ್ಪಟ್ಟು ಪ್ರತ್ಯೇಕ ಟಾರ್ಗೆಟ್ ಅನ್ನು ಅಪ್ಪಳಿಸಬಲ್ಲುದು.ಭಾರತದ ನ್ಯಾವಿಗೇಶನ್ ಪರಿಕರವಾದ ನ್ಯಾವ್ಐಸಿ ಹಾಗೂ ಅಮೆರಿಕದ ಜಿಪಿಎಸ್ ನೆಟ್ವರ್ಕ್ ಅನ್ನು ಇದು ಬಳಸುತ್ತದೆ. ಜೊತೆಗೆ ಗೈರೋಸ್ಕೋಪ್ ಆಧಾರಿತ ಸೆನ್ಸಾರ್ಗಳನ್ನೂ ಇದು ಬಳಸುತ್ತದೆ. ಹೀಗಾಗಿ, ಇದು ನಿಖರವಾಗಿ ತನ್ನ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಿವು…
- ರಷ್ಯಾದ ಸತಾನ್-2: 18,000 ಕಿಮೀ ಶ್ರೇಣಿ
- ಚೀನಾದ ಡಿಎಫ್-41: 15,000 ಕಿಮೀ ಶ್ರೇಣಿ
- ಅಮೆರಿಕದ ಎಲ್ಜಿಎಂ-35: 15,000 ಕಿಮೀ ಶ್ರೇಣಿ
- ಅಮೆರಿಕ, ಬ್ರಿಟನ್ನ ಟ್ರೈಡೆಂಟ್-2 ಡಿ5: 13,000 ಕಿಮೀ ಶ್ರೇಣಿ
- ರಷ್ಯಾದ ಆರ್ಎಸ್-24 ಯಾರ್ಸ್: 12,000 ಕಿಮೀ ಶ್ರೇಣಿ
- ಫ್ರಾನ್ಸ್ನ ಎಂ51: 10,000 ಕಿಮೀ ಶ್ರೇಣಿ
- ರಷ್ಯಾದ ಆರ್-29ಆರ್ಎಂಯು2.1 ಲೇನರ್: 12,000 ಕಿಮೀ ಶ್ರೇಣಿ
- ಅಮೆರಿಕದ ಮೈನೂಟ್ಮ್ಯಾನ್: 10,000 ಕಿಮೀ ಶ್ರೇಣಿ
- ಚೀನಾದ ಜೆಎಲ್-2: 8,000 ಕಿಮೀ ಶ್ರೇಣಿ
- ಭಾರತದ ಅಗ್ನಿ-5: 8,000 ಕಿಮೀ ಶ್ರೇಣಿ
ಈ ಮೇಲಿನ ಎಲ್ಲವೂ ಕೂಡ ಎಂಐಆರ್ವಿ ಟೆಕ್ನಾಲಜಿ ಹೊಂದಿವೆ. ಅಂದರೆ, ಒಂದಕ್ಕಿಂತ ಹೆಚ್ಚು ಟಾರ್ಗೆಟ್ಗಳನ್ನು ಹೊಡೆಯಬಲ್ಲುವು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







