ಬಹು ನಿರೀಕ್ಷಿತ ರಾಮಾಯಣ ಚಿತ್ರಕ್ಕಾಗಿ ಚಿತ್ರ ರಸಿಕರು ಕಾಯುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ರಾಮಾಯಣದಲ್ಲಿ ರಾವಣನಾಗಿ ಯಶ್ ರನ್ನ ನೋಡಲು ಕಾತುರರಾಗಿದ್ದಾರೆ. ಆದರೆ ನಿಮಗೆ ಗೊತ್ತಾ ಯಶ್‌ಗೂ ಮುನ್ನ ಹಿಂದಿಯಲ್ಲಿ ರಾವಣನಾಗಿ ಮತ್ತೋರ್ವ ಕನ್ನಡದ ನಟ ಅಬ್ಬರಿಸಿ ಮಿಂಚಿದ್ದರು.
ಬಾಲಿವುಡ್‌ನ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಆಗಿದ್ದು, ಇದರ ಮೇಕಿಂಗ್, ಗ್ರಾಫಿಕ್ಸ್, ಮ್ಯೂಸಿಕ್ ಎಲ್ಲವೂ ಭಾರತೀಯ ಚಿತ್ರರಂಗವೇ ದಂಗು ಬಡಿಯುವಂತಿದೆ. ಅದರಲ್ಲಿಯೂ ರಾಮಾಯಣದಲ್ಲಿ ರಾಮನಾಗಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಆದರೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಲು ಕಾರಣ ರಾವಣನಾಗಿ ನಟಿಸುತ್ತಿರುವ ಯಶ್ ಅವರಿಂದ ಎಂದೇ ಹೇಳಲಾಗುತ್ತಿದೆ. ಗ್ಲಿಂಪ್ಸ್ ಬಿಡುಗಡೆ ಆದಾಗಿನಿಂದ ರಾಮಾಯಣ ಎನ್ನುವುದಕ್ಕಿಂತ ಸಿನಿಪ್ರೇಮಿಗಳು ರಾವಣನಾಗಿ ಯಶ್ ಅವರನ್ನು ನೋಡಲು ಕಾತುರರಾಗಿದ್ದಾರೆ. ಕನ್ನಡದ ಒಬ್ಬ ನಟ ದೇಶಮಟ್ಟದಲ್ಲಿ ಇಷ್ಟೊಂದು ಹೈಪ್ ಕ್ರಿಯೇಟ್ ಮಾಡಿರುವುದು ಕನ್ನಡಿಗರ ಹೆಮ್ಮೆಯಾಗಿದೆ. ಆದರೆ ನಿಮಗೆ ಗೊತ್ತಾ? ಯಶ್‌ಗೂ ಮುನ್ನ ಹಿಂದಿಯಲ್ಲಿ ರಾವಣನಾಗಿ ಮತ್ತೋರ್ವ ಕನ್ನಡದ ನಟ ಅಬ್ಬರಿಸಿ ಮಿಂಚಿದ್ದರು.
ಹಿಂದಿಯಲ್ಲಿ ರಾವಣನಾಗಿ ಜೆಕೆ:
ಹೌದು, ಕನ್ನಡ ಕಿರುತೆರೆ ಹಾಗೂ ಸಿನಿರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಜೆಕೆ ಅಲಿಯಾ ಕಾರ್ತಿಕ್ ಜಯರಾಮ್ ಅವರು ಯಶ್ ಅವರಿಗಿಂತ ಮೊದಲೇ ಹಿಂದಿಯಲ್ಲಿ ರಾವಣನಾಗಿ ಅಭಿನಯಿಸಿದ್ದರು. ಹೌದು, ಜೆಕೆ ಸಿನಿಮಾದಲ್ಲಿ ರಾವಣನಾಗಿ ಅಭಿನಯಿಸಿಲ್ಲ. ಬದಲಿಗೆ ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ಕಾಣಿಸಿಕೊಂಡಿದ್ದರು. 2015ರ ನವೆಂಬರ್‌ನಿಂದ 2016ರ ನವೆಂಬರ್‌ವರೆಗೆ ಪ್ರಸಾರವಾದ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ಕಾರ್ತಿಕ್ ಜಯರಾಮ್ ರಾವಣನಾಗಿ ನಟಿಸಿ ಎಲ್ಲರ ಮನಗೆದ್ದಿದ್ದರು.
ಹಿಂದಿಯಲ್ಲಿ ಅಬ್ಬರಿಸಿದ್ದ ಕನ್ನಡಿಗ:
ನಿರ್ದೇಶಕ ನಿಖಿಲ್ ಸಿನ್ಹಾ ನಿರ್ದೇಶನದ ಸಿಯಾ ಕೆ ರಾಮ್ ಸೀರಿಯಲ್‌ನಲ್ಲಿ ರಾವಣನ ಪಾತ್ರಕ್ಕಾಗಿ ಬರೋಬ್ಬರಿ 4 ಸಾವಿರಕ್ಕೂ ಹೆಚ್ಚಿನ ಜನರನ್ನು ಆಡೀಶನ್ ಮಾಡಿದ ನಂತರ ಕನ್ನಡಿಗ ಜೆಕೆ ರಾವಣ ಪಾತ್ರಕ್ಕೆ ಆಯ್ಕೆ ಆಗಿದ್ದರಂತೆ. ಅಂದಿಗೆ 80 ಕೆಜಿ ತೂಕವಿದ್ದ ಅವರು ಈ ಪಾತ್ರಕ್ಕಾಗಿ ಸಿಕ್ಸ್ ಫ್ಯಾಕ್ ಮಾಡಿ ಬರೋಬ್ಬರಿ 96 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರಂತೆ. ಅಲ್ಲದೇ ಅದರಲ್ಲಿ ಜೆಕೆ ಅವರ ರಾವಣನ ಕ್ಯಾರೆಕ್ಟರ್‌ಗಾಗಿ ಧರಿಸಿದ್ದ ಕಿರೀಟ ಬರೋಬ್ಬರಿ 8 ಕೆಜಿ ಇತ್ತಂತೆ.
ರಾಮಾಯಣ ಚಿತ್ರದ ಬಜೆಟ್ ಕೇಳಿ ದಂಗಾದ ಭಾರತೀಯ ಚಿತ್ರರಂಗ! ಮಹಾಕಾವ್ಯಕ್ಕಾಗಿ ಖರ್ಚಾದ ಹಣ ಎಷ್ಟು ಸಾವಿರ ಕೋಟಿ ಗೊತ್ತಾ?ಅಲ್ಲದೇ ಮೈಮೇಲೆ ಹಾಕಿದ್ದ ಒಟ್ಟಾರೆ ವಸ್ತ್ರ, ಆಭರಣಗಳ ತೂಕ ಸೇರಿದರೆ ಹೆಚ್ಚುವರಿಯಾಗಿ 30 ಕೆಜಿ ತೂಗುತ್ತಿತ್ತಂತೆ. ಅಲ್ಲದೇ ಶಿವ ತಾಂಡವ ನೃತ್ಯಕ್ಕಾಗಿ 2 ತಿಂಗಳು ತರಭೇತಿ ಪಡೆದಿದ್ದರು ಎಂದು ಅವರೇ ಹೇಳಿಕೊಂಡಿದ್ದರು. ಒಟ್ಟಾರೆಯಾಗಿ ಯಶ್ ರಾವಣನಾಗಿ ನಟಿಸುವ ಮೊದಲೇ ಮತ್ತೋರ್ವ ಕನ್ನಡಿಗ ಹಿಂದಿಯಲ್ಲಿ ರಾವಣನಾಗಿ ನಟಿಸಿ ಮೆಚ್ಚುಗೆ ಪಡೆದಿದ್ದರು. ಇದೀಗ ಯಶ್ ಸಹ ಇದೇ ರೀತಿ ರಾವಣನಾಗಿ ನಟಿಸುತ್ತಿದ್ದು, ಅವರನ್ನು ರಾವಣಾವತಾರದಲ್ಲಿ ನೋಡಿ ಈ ಬಾರಿ ವಿಶ್ವವೇ ಕಾದುಕುಳಿತಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



