ಯಶ್ ತಾಯಿ ಪುಷ್ಪಾ ಅವರು ‘ಕೊತ್ತಲವಾಡಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದರು. ಈ ಚಿತ್ರ ಹೆಚ್ಚು ಸದ್ದು ಮಾಡಿತೋ ಇಲ್ಲವೋ, ಪುಷ್ಪಾ ಅವರು ನೀಡಿದ ಸಂದರ್ಶನಗಳು ಮಾತ್ರ ಸಾಕಷ್ಟು ವೈರಲ್ ಆದವು. ಸಿನಿಮಾ ರಿಲೀಸ್ಗೂ ಮೊದಲೇ ಅವರು ಸಾಕಷ್ಟು ಸಂದರ್ಶನಗಳನ್ನು ನೀಡಿದ್ದರು. ಈಗ ಸಿನಿಮಾ ರಿಲೀಸ್ ಬಳಿಕವೂ ಒಂದಷ್ಟು ಸಂದರ್ಶನ ನೀಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಅವರ ಮಾತು ಎಲ್ಲೆ ಮೀರಿದೆ. ಇದಕ್ಕೆ ಅಂಕುಶ ಹಾಕಲು ಯಶ್ ಬರಬೇಕಿದೆ ಎಂದು ಅನೇಕರು ಆಗ್ರಹಿಸಿದ್ದಾರೆ.ದೀಪಿಕಾ ದಾಸ್ ಬಗ್ಗೆ ಪುಷ್ಪಾ ಅವರು ಮಾತನಾಡಿದ್ದಾರೆ. ‘ದೀಪಿಕಾ ಚಿತ್ರರಂಗದಲ್ಲಿ ಮಾಡಿದ ಸಾಧನೆ ಏನು’ ಎಂಬ ರೀತಿಯಲ್ಲಿ ಪುಷ್ಪಾ ಪ್ರಶ್ನೆ ಇತ್ತು. ಈ ಹೇಳಿಕೆ ವೈರಲ್ ಆಗಿದೆ. ಪುಷ್ಪಾ ಅವರು ದೀಪಿಕಾಗೆ ದೊಡ್ಡಮ್ಮ ಆಗಬೇಕು. ಯಶ್ಗೆ ತಂಗಿ ಆಗಬೇಕು. ಕುಟುಂಬದವರ ಬಗ್ಗೆಯೇ ಪುಷ್ಪಾ ಈ ರೀತಿ ಹೇಳಿಕೆ ನೀಡೋದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.
ಪುಷ್ಪಾ ಅವರಿಗೆ ಯಶ್ ಕಿವಿಮಾತು ಹೇಳುವ ಸಮಯ ಬಂದಿದೆ ಎಂದು ಅನೇಕರು ಹೇಳಿದ್ದಾರೆ. ಪುಷ್ಪಾ ಅವರ ಕಡೆಯಿಂದ ನಿತ್ಯವೂ ಒಂದೊಂದು ರೀತಿಯ ಹೇಳಿಕೆ ಬರುತ್ತಿದೆ. ಈ ರೀತಿಯ ಮಾತುಗಳಿಂದ ಅನೇಕರಿಗೆ ಬೇಸರ ಆಗುತ್ತಿದೆ. ದೀಪಿಕಾ ದಾಸ್ ಅಭಿಮಾನಿಗಳಿಗೂ ಪುಷ್ಪಾ ನೀಡಿದ್ದ ಹೇಳಿಕೆ ಬಗ್ಗೆ ಅಸಮಾಧಾನ ಇದೆ. ಹೀಗಾಗಿ, ಯಶ್ ಎಲ್ಲಿದ್ದೀರಾ ಎಂದು ದೀಪಿಕಾ ದಾಸ್ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.ಒಂದೊಮ್ಮೆ ಯಶ್ ಅವರು ಈಗ ತಾಯಿಗೆ ಈ ಬಗ್ಗೆ ಹೇಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಹೇಳಿಕೆಗಳನ್ನು ನಿಡಿ ಅವಾಂತರಗಳು ಮತ್ತಷ್ಟು ಹೆಚ್ಚಬಹುದು. ಇದರಿಂದ ಯಶ್ ಹೆಸರಿಗೂ ಕಳಂಕ ಬರಬಹುದು ಎಂಬುದು ಯಶ್ ಅಭಿಮಾನಿಗಳ ಆತಂಕ ಕೂಡ ಹೌದು. ಹೀಗಾಗಿ, ಈ ವಿಚಾರದಲ್ಲಿ ಯಶ್ ಮಧ್ಯಸ್ಥಿಕೆ ವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.‘ಕೊತ್ತಲವಾಡಿ’ ಸಿನಿಮಾ ಅಂದುಕೊಂಡ ರೀತಿಯಲ್ಲಿ ಯಶಸ್ಸು ಕಂಡಿಲ್ಲ. ಈ ವಿಚಾರವನ್ನು ಪುಷ್ಪಾ ಅವರೇ ಪರೋಕ್ಷವಾಗಿ ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದಾರೆ. ಸಿನಿಮಾ ಸೋಲಿಗೆ ಕಾರಣರಾದವರ ಬಗ್ಗೆಯೂ ಅವರಿಗೆ ಅಸಮಾಧಾನ ಇದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







