ದಾವಣಗೆರೆ ಜೂ.24, ನಗರದ ಆದರ್ಶ ಯೋಗ
ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ
ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕರಾದ
ಯೋಗಾಚಾರ್ಯ ಶ್ರೀ ಡಾ|| ರಾಘವೇಂದ್ರ ಗುರೂಜಿಯವರಿಗೆ
ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟ (ರಿ), ಮೈಸೂರು
ವತಿಯಿಂದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ನಿಮಿತ್ತವಾಗಿ ಜೂನ್ 22, 2025 ರ ಭಾನುವಾರದಂದು ಮೈಸೂರಿನಲ್ಲಿ
ಹಮ್ಮಿಕೊಳ್ಳಲಾಗಿದ್ದ ದ್ವಿತೀಯ ರಾಜ್ಯಮಟ್ಟದ ಯೋಗ
ಸಮ್ಮೇಳನದಲ್ಲಿ ಯೋಗ ಕ್ಷೇತ್ರದಲ್ಲಿ ಗಣನೀಯ
ಸಾಧನೆಗೈದಿರುವ ನಾಡಿನ ಹಿರಿಯ ಯೋಗ ಗುರು, ಯೋಗ
ತಜ್ಞ ಡಾ|| ರಾಘವೇಂದ್ರ ಗುರೂಜಿಯವರಿಗೆ “ಯೋಗ
ರತ್ನಾಕರ” ಎಂಬ ಅತ್ಯುನ್ನತವಾದ ಬಿರುದು ಪ್ರದಾನ
ಮಾಡಲಾಯಿತು.
ಯೋಗ ನಗರಿ ಮೈಸೂರಿನ ಕಲಾ ಮಂದಿರದಲ್ಲಿ ಯೋಗ
ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ನೀಡಿರುವ ಡಾ||
ರಾಘವೇಂದ್ರ ಗುರೂಜಿಯವರಿಗೆ ಸಮ್ಮೇಳನದ
ಸರ್ವಾಧ್ಯಕ್ಷರು ಆದ ಪ್ರೊ|| ರಾಮಚಂದ್ರ ಜಿ. ಭಟ್
ಕೋಟೆಮನೆ, ವೇದ ವಿಜ್ಞಾನ ಗುರುಕುಲ ಬೆಂಗಳೂರು,
ವೈದ್ಯ ಸಾಹಿತಿ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ||
ಎಸ್.ಪಿ. ಯೋಗಣ್ಣ, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ
ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ|| ಭಗವಾನ್ ಬಿ.ಸಿ.,
ಸಂಸ್ಥಾಪಕರು ಭಾರತೀ ಯೋಗಧಾಮದ ಡಾ|| ಕೆ.ಎಲ್.
ಶಂಕರನಾರಾಯಣ ಜೋಯಿಸ್, ಭರತ ಯೋಗ
ಗುರುಕುಲಂನ ಸಂಸ್ಥಾಪಕರಾದ ಶ್ರೀ ಭರತ್ ಶೆಟ್ಟಿ,
ಮೈಸೂರು ವಿಶ್ವವಿದ್ಯಾನಿಲಯದ ಪ್ರೊ|| ಲೋಕನಾಥ್ ಎನ್.ಕೆ.
ನಂಜನಗೂರು ಶಾಸಕರಾದ ಶ್ರೀ ದರ್ಶನ್ ಧೃವನಾರಾಯಣ್,
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.
ನಂಜುಂಡಸ್ವಾಮಿ ಹಾಗೂ ಯೋಗ ಸಮ್ಮೇಳನದ ಪ್ರಧಾನ
ಸಂಚಾಲಕರಾದ ಶ್ರೀ ಎನ್. ಅನಂತ ಇವರುಗಳ ದಿವ್ಯ
ಉಪಸ್ಥಿತಿಯಲ್ಲಿ ‘ಯೋಗ ರತ್ನಾಕರ’ ಎಂಬ ಶ್ರೇಷ್ಠವಾದ
ಬಿರುದನ್ನು ಪ್ರದಾನ ಮಾಡಲಾಯಿತು.
ರಾಜ್ಯಮಟ್ಟದ ದ್ವಿತೀಯ ಯೋಗ ಸಮ್ಮೇಳನದಲ್ಲಿ
ಯೋಗಕ್ಷೇತ್ರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ
ಕೊಡುಗೆಯಾಗಿ, ಪರಂಪರೆಯನ್ನು ಮುನ್ನಡೆಸಲು
ಬೇಕಾಗುವ ಹಲವು ಬೇಡಿಕೆಗಳನ್ನು ಮುಂದಿಟ್ಟು 5
ನಿರ್ಣಯಗಳನ್ನು ಈಡೇರಿಸುವಂತೆ ಸಮ್ಮೇಳನಾಧ್ಯಕ್ಷರು
ಕರ್ನಾಟಕ-ಘನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯೋಗವನ್ನು ಒಳಗೊಂಡ ಅಧ್ಯಾತಿಕ ಕೇಂದ್ರ
ಸ್ಥಾಪನೆ (2) ಯೋಗ ಶಿಕ್ಷಕರಿಗೆ ರಾಷ್ಟ್ರೀಯ ಹಾಗೂ
ವೈಜ್ಞಾನಿಕವಾಗಿ ಯೋಗದ ಅರಿವು ಮೂಡಿಸುವ ತರಬೇತಿ (3)
ಯೋಗದ ಶಾಸ್ತ್ರೀಯ ಅಧ್ಯಯನ ಕೇಂದ್ರದ ಸ್ಥಾಪನೆಗೆ
ಘನ ಸರ್ಕಾರಕ್ಕೆ ಪ್ರಸ್ತಾವನೆ (4) ಮೈಸೂರಿನಲ್ಲಿ ಯೋಗ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



