ಕನ್ನಡದ ‘ಹುಡುಗರು’ ಚಿತ್ರದ ‘ಬೋರ್ಡ್ ಇಲ್ಲದ ಬಸ್’ ಸಾಂಗ್ ನಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವಂತೆಯೇ ದೇಶದಲ್ಲಿ ಯುವ ಜನತೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ಮಾತಿಗೆ ಮತ್ತಷ್ಟು ಇಂಬು ನೀಡಿದೆ. ಪುನೀತ್ ರಾಜ್ ಕುಮಾರ್ ಕೂಡಾ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದರು.ಫಿಟ್ ಆಗಿ ಕಾಣಬೇಕು ಎಂಬ ಮನೋಭಾವವುಳ್ಳ ಯುವ ಜನರಲ್ಲಿ ಹೃದಯಾಘಾತ ರಕ್ತನಾಳದಂತಹ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಅಲ್ಲದೇ ಫಿಟ್ ನೆಸ್ , ವರ್ಕೌಟ್ ಗಳೇ ಇದಕ್ಕೆ ಕಾರಣನಾ.? ಎಂಬಂತಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೃದಯಾಘಾತಕ್ಕೆ ಪ್ರಮುಖ ಕಾರಣಗಳು:
ಸೆಲೆಬ್ರಿಟಿಗಳಲ್ಲಿ ಫಿಟ್ ಆಗಿ ಕಾಣುವ ಮನೋಭಾವ, ನಿದ್ರೆಯ ಕೊರತೆಸೆಲೆಬ್ರಿಟಿಯಾಗಲೀ ಅಥವಾ ಸಾಮಾನ್ಯ ವ್ಯಕ್ತಿಯಾಗಲೀ ದೇಹದ ನಿಯಮಗಳನ್ನು ಪಾಲಿಸದಿದ್ದರೆ ಎಲ್ಲರಿಗೂ ಸಮಸ್ಯೆಗಳು ಬರುತ್ತವೆ. ಸೆಲೆಬ್ರಿಟಿಗಳಲ್ಲಿ ಎಲ್ಲರೂ ಫಿಟ್ ಆಗಿ ಕಾಣಿಸಿಕೊಳ್ಳಲು ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಏನು ಮಾಡುತ್ತಾರೇ ಎಂಬುದು ಗೊತ್ತಿಲ್ಲ. ಸರಿಯಾಗಿ ನಿದ್ರೆ ಮಾಡದಿರುವುದು ಕೂಡಾ ಹೃದಯಾಘಾತಕ್ಕೆ ಕಾರಣವಾಗಲಿದೆ. ಅನೇಕ ಸೆಲೆಬ್ರಿಟಿಗಳು ಇಡೀ ರಾತ್ರಿ ಎಚ್ಚರವಾಗಿರುತ್ತಾರೆ ಎಂದು ಅವರು ಹೇಳಿದರು.
ಮಹಿಳೆಯರಲ್ಲಿ ಹಾರ್ಮೋನ್ ಥೆರಪಿಯೂ ಪ್ರಮುಖ ಕಾರಣ
ಸ್ಟೀರಾಯ್ಡ್ ಗಳು, ಮಿತಿ ಮೀರಿದ ಔಷಧ ಬಳಕೆ ಮಹಿಳೆಯರಲ್ಲಿ ಹಾರ್ಮೋನು ಥೆರಪಿ, ಹಾರ್ಮೋನು ಬದಲಾವಣೆ ಥೆರಪಿ, ಗರ್ಭನಿರೋಧಕ ಮಾತ್ರೆ, ಔಷಧ ಸೇವಿಸುವುದು ಹೃದಯಾಘಾತದ ಅಪಾಯಕ್ಕೆ ಕಾರಣವಾಗಬಹುದು ಎಂದು ಡಾ.ಸಿಂಘಾನಿಯಾ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆಯಿಂದಲೂ ಹೃದಯಾಘಾತ
ಅಲ್ಲದೇ ಹೆಚ್ಚಾದ ಮಾನಸಿಕ ಒತ್ತಡ ಮತ್ತು ಸೋಶಿಯಲ್ ಮೀಡಿಯಾ ಬಳಕೆ ಚಟ ಕೂಡಾ ರಕ್ತದೊತ್ತಡ ಮತ್ತು ಕಾರ್ಟಿಸೋಲ್ ಮಟ್ಟ ಹೆಚ್ಚಾಗಲು ಕೊಡುಗೆ ನೀಡುತ್ತದೆ. ಇದು ಅಂತಿಮವಾಗಿ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.ಇತ್ತೀಚೆಗೆ ಹೃದಯಾಘಾತದಿಂದ ಬದುಕುಳಿದ 36 ವರ್ಷದ ವ್ಯಕ್ತಿಯ coronary ಆಂಜಿಯೋಗ್ರಫಿಯನ್ನು ಡಾ ಸಿಂಘಾನಿಯಾ ತೋರಿಸಿದರು. ಆತನಿಗೆ ಯಾವುದೇ ಧೂಮಪಾನ, ಮಧ್ಯಪಾನದ ಚಟ ಇರಲಿಲ್ಲ. ವೈದ್ಯಕೀಯ ಚಿಕಿತ್ಸೆ ಕೂಡಾ ಪಡೆಯುತ್ತಿರಲಿಲ್ಲ. ಆದರೂ ಹೃದಯಾಘಾತವಾಗಿತ್ತು. ಇದರಿಂದ ಹೊರಬರಲು ಈಗಲೂ ಪ್ರಾರ್ಥಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



