ಶಾಸಕಿ ಕರೆಮ್ಮಗೆ ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ: ಪರಮೇಶ್ವರ್
ವಿಧಾನಸಭೆ: ರಾಜ್ಯದ ಎಲ್ಲ ಶಾಸಕರ ರಕ್ಷಣೆ ನಮ್ಮ ಹೊಣೆ. ಜೆಡಿಎಸ್ ಶಾಸಕಿ ಕರೆಮ್ಮ ಅವರಿಗೆ ಮರಳು ದಂಧೆಕೋರರಿಂದ ಬೆದರಿಕೆ ಬಂದಿರುವ ಕುರಿತು ತನಿಖೆ ನಡೆಸಿ, ಎಷ್ಟೇ ದೊಡ್ಡವರಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು. ಪ್ರಶೋತ್ತರ ಕಲಾಪದಲ್ಲಿ ಉತ್ತರಿಸಿದ ಡಾ.ಪರಮೇಶ್ವರ್, ಯಾವುದೇ ಶಾಸಕರಿಗೂ ಸಮಸ್ಯೆಯಾಗಲು ಬಿಡುವುದಿಲ್ಲ. ರಕ್ಷಣೆ ನೀಡುವುದು ನಮ್ಮ ಪೊಲೀಸರ ಕರ್ತವ್ಯ. ದೇವದುರ್ಗ ಮಾತ್ರವಲ್ಲದೆ ರಾಜ್ಯದಲ್ಲಿ ಮರಳು ದಂಧೆ ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅದಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಇಷ್ಟಾದರೂ ಮರಳು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ಕರೆಮ್ಮ ಅವರಿಗೆ ಬೆದರಿಕೆ ಹಾಕಿದವರ ಸ ವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
