*ಆರೋಗ್ಯವನ್ನು ಆಲಸ್ಯತನದಿಂದ ಹಾಳು ಮಾಡಿಕೊಳ್ಳಬೇಡಿ ಕಾಯಕಯೋಗಿ ಜಗದ್ಗುರು ಶ್ರೀ ಶಾಂತಿವೀರ ಸ್ವಾಮೀಜಿ*
ಹೊಸದುರ್ಗ:::: ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು
ಆಧುನಿಕ ಸಮಾಜದಲ್ಲಿ ಹಣಕ್ಕಿಂತ ಆರೋಗ್ಯವೇ ಶ್ರೇಷ್ಠವಾಗಿದೆ ಆರೋಗ್ಯ ವಿದ್ದರೆ ಹಣವನ್ನು ಸಂಪಾದಿಸಬಹುದು ಅಧಿಕಾರವನ್ನು ಹಿಡಿಯಬಹುದು ಆರೋಗ್ಯವೇ ಇಲ್ಲದಿದ್ದರೆ ಉತ್ಸಾಹ ಕಳೆದುಕೊಂಡು ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚಾಗಿದೆ ಹಾಗಾಗಿ ಇವತ್ತಿನ ಯುವಕರು ಮೊಬೈಲ್ ಗಿಳಿಯಿಂದ ಸಾಮಾಜಿಕ ಜಾಲತಾಣಗಳಾದ ಸೋಶಿಯಲ್ ಮೀಡಿಯಾದಿಂದ ದೂರವಿದ್ದು ವ್ಯಾಯಾಮ ವಾಯುವಿವಾಹರ ಕರಾಟೆ ಕುಸ್ತಿ ಕ್ರೀಡೆಗಳಲ್ಲಿ ತೊಡಗಿಸಿ ಕೊಂಡಾಗ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಮಾನಸಿಕ ಬಲವನ್ನು ಸಂಪಾದಿಸಲು ಸಾಧ್ಯವಾಗುತ್ತದೆ ವೈದ್ಯರೆಂದರೆ ದೇಹದ ಬಾಧೆಗಳನ್ನು ಹಾಗೂ ಕಾಯಿಲೆಗಳನ್ನು ದೂರ ಮಾಡುವ ಶ್ರೇಷ್ಠ ಸೇವಕರು ವೈದ್ಯರನ್ನು ಗೌರವದಿಂದ ಪ್ರೀತಿಯಿಂದ ಕಾಣುವ ಮೂಲಕ ಅವರ ವೃತ್ತಿಗೆ ಗೌರವಿಸಬೇಕು ಹಾಗೂ ವೈದ್ಯರು ಕೂಡ ತಾಯಿತನದ ಅಂತಃಕರಣದಿಂದ ರೋಗಿಗಳನ್ನು ನೋಡಿದಾಗ ಬೇಗ ಗುಣಮುಖರಾಗಲು ಸಾಧ್ಯ ಸಿಡುಕು ಕೋಪಗಳ ಮೂಲಕ ರೋಗಿಗಳಿಗೆ ಭಯಪಡಿಸದೆ ಪ್ರೀತಿ ವಿಶ್ವಾಸದ ಮೂಲಕ ಭರವಸೆಯ ಮಾತುಗಳನ್ನಾಡಿ ಧೈರ್ಯ ತುಂಬಿದರೆ ರೋಗಗಳು ದೂರವಾಗುತ್ತವೆ
ವೈದ್ಯೋ ನಾರಾಯಣ ಹರಿ ಎಂಬ ನುಡಿಮುತ್ತನ್ನು ವೈದ್ಯರೆಂದರೆ ದೇವರೆಂದು ನಂಬಿರುವ ಸಮಾಜಕ್ಕೆ ದೇವರಾಗಿ ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಕಿವಿಮಾತು ಹೇಳಿದರು
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಡಾ.ಸತೀಶ್ ರವರು ಮಠಗಳು ಈ ರೀತಿಯಾದ ಸತ್ಸಂಗ ಸುಜ್ಞಾನ ಸಂಗಮ ಹಾಗೂ ಧಾರ್ಮಿಕ ಸಭೆ ಸಮಾರಂಭವನ್ನು ಮಾಡುವ ಮೂಲಕ ಸಮಾಜದ ಕೊಳೆಯನ್ನು ಕೊಳೆ ತೊಳೆದು ಸರ್ವರು ನಮ್ಮವರಿದ್ದು ಪ್ರೀತಿಸುವ ವಾತಾವರಣ ನಿರ್ಮಾಣವಾಗುತ್ತಿದೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು
ಉಪನ್ಯಾಸ ನೀಡಿ
ಮಾತನಾಡಿದ ಮಕ್ಕಳ ತಜ್ಞ ರವಿ ಕ್ಲಿನಿಕ್ ನ ಡಾ.ರವಿರವರು ನಮ್ಮನ್ನು ಸರಿದಾರಿಯಲ್ಲಿ ನಡೆಸುವವರು ಗುರುಗಳು ಸಮಾಜಕ್ಕೆ ಪ್ರತಿಯೊಬ್ಬ ವ್ಯಕ್ತಿಗೆ ಮಾರ್ಗದರ್ಶನ ಮಾಡುವವರು ಗುರುಗಳು ಒಬ್ಬ ವ್ಯಕ್ತಿಗೆ ಕಾಯಿಲೆ ಬಂದಾಗ ಚಿಕಿತ್ಸೆ ನೀಡುವುದು ವೈದ್ಯರೇ ಕರ್ತವ್ಯ ಸಮಾಜಕ್ಕೆ ಅನಾರೋಗ್ಯವಾದಾಗ ದಾರಿ ತಪ್ಪಿದಾಗ ಮಾರ್ಗದರ್ಶನ ಮಾಡುವುದು ಗುರುಗಳ ಕರ್ತವ್ಯ ಸಾಧು ಸಂತರು ಮಠಮಾನ್ಯಗಳು, ಸಮಾಜದ ಆರೋಗ್ಯವನ್ನು ಕಾಪಾಡುತ್ತಿದ್ದಾರೆ
ಸಮಾಜದಲ್ಲಿ ಸಮಾನತೆ ಎಂಬ ಹೂವು ಇದ್ದರೂ ಕೂಡ ಚುನಾವಣೆಗಳಲ್ಲಿ ಮತ ಬ್ಯಾಂಕಿಗಳಿಗಾಗಿ ಸಮಾಜಗಳು ಚಿದ್ರ ಚಿದ್ರವಾಗುತ್ತಿದೆ ದುಡ್ಡಿನ ಆಸೆಗಾಗಿ ಹಣ ಗಳಿಕೆಯೇ ಇವತ್ತು ಎಲ್ಲಾ ರಂಗಗಳಲ್ಲಿ ಸ್ಪರ್ಧೆಗಳಿದಂತೆ ಹಣ ಗಳಿಸಲು ಅಪಹಪಿಸುತ್ತಿರುವುದು ಸಮಾಜದ ಅನಾರೋಗ್ಯಕ್ಕೆ ಕಾರಣವಾಗಿದೆ ವೈದ್ಯರುತ್ತಿನು ಕೂಡ ವಾಣಿಜ್ಯ ರೂಪ ಪಡೆದಿರುವುದು ವಿಷಾದನೀಯ ಯಾವುದೇ ವೃತ್ತಿ ನಿರ್ವಹಿಸುವಾಗ ಮಾನವೀಯತೆ ಇರಬೇಕು
ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಹೆಂಡತಿ ತಾಯಿಯ ಮಾತನ್ನು ಕೇಳಿದರೆ ಅರ್ಧ ಆರೋಗ್ಯ ವೃದ್ಧಿಸುತ್ತದೆ ಹೆಂಡತಿ ಮತ್ತು ತಾಯಿ ಸಂಜೆ ನಡೆಯುವ ವ್ಯವಹಾರಕ್ಕೆ ಕಡಿವಾಣ ಹಾಕುವುದರಿಂದ ಅವರನ್ನು ಅವರ ಮಾತನ್ನು ಕೇಳಿದರೆ ದುಶ್ಚಟಕ್ಕೆ ದಾಸರ ಆಗುವುದಿಲ್ಲ ಶಾಂತವೀರ ಸ್ವಾಮೀಜಿ ಅವರಿಂದ ಕಲಿಯುವಂತದ್ದು ತುಂಬಾ ಇದೆ ಒಂದು ಕಾರ್ಯವನ್ನು ಮಾಡಲು ಸಂಕಲ್ಪ ತೊಟ್ಟರೆ ಸಾಧಿಸುವ ತನಕ ಹೋರಾಡುತ್ತಾರೆ ಮತ್ತು ಮಾಡಿ ತೋರಿಸುತ್ತಾರೆ ಯಾವ ದಾರಿಯಲ್ಲಿ ಹೋದರೆ ಯಾವ ಕೆಲಸವಾಗುತ್ತದೆ ಎಂಬ ಸ್ಪಷ್ಟ ನಿಲುವು ಮತ್ತು ನಿರ್ಧಾರಗಳನ್ನು ಶಾಂತವೀರ ಶ್ರೀಗಳು ಕೈಗೊಂಡಿದ್ದರಿಂದ ಮಠ ಈ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಕ್ಲಿನಿಕ್ಕಿನ ಕೃಪೆಶ್ರವರು ಮಾತನಾಡಿ ಸಮಾಜ ಮತ್ತು ಸಂಘಟನೆ ಸರಿದಾರಿಯಲ್ಲಿ ನಡೆಯಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯಂತ ಅವಶ್ಯಕ ಕ್ರಾಂತಿವೀರ ಶ್ರೀಗಳು ನಮ್ಮ ಸಮಾಜದ ಗುರುಗಳಾಗಿ ಬಂದ ನಂತರ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ ಎಲ್ಲ ಬಡವರ ಪರವಾಗಿ ನಿಲ್ಲುವವರ ಗುಣ ಸಂಕಷ್ಟ ಎಂದರೆ ಸ್ಪಂದಿಸುವ ಅವರ ನಿಲುವು ಬಯಲಿಗೆ ಮಠಾಧೀಶರಾಗಿ ನೂರಾರು ಕೋಟಿ ಆಸ್ತಿ ಗಳಿಸಿರುವ ಅವರ ಬದ್ಧತೆ ಕಳೆದ 28 ವರ್ಷಗಳಿಂದ ನಮ್ಮ ಸಮಾಜಕ್ಕೆ ಮಾಡಿರುವ ಅವರ ಸೇವೆ ಅನನ್ಯ ಎಂದು ಹರ್ಷ ವ್ಯಕ್ತಪಡಿಸಿದರು
ಮುಖ್ಯ ಅತಿಥಿಗಳಾಗಿ
ಶ್ರೀನಿಧಿ ಕ್ಲಿನಿಕ್ ನ ಡಾ.ನಿಧಿ
ವಿಜ್ಞೇಶ್ವರ ಕ್ಲಿನಿಕ್ಕಿನ ಡಾ.ಪುನೀತ್.
ಜಾನಕಲ್ ಶ್ರೀನಿವಾಸ್ ಕ್ಲಿನಿಕ್ ಡಾ.ಅಜಯ್. ದೇವಿಗೆರೆ ವಿಘ್ನೇಶ್ವರ ಕ್ಲಿನಿಕ್ ಡಾ. ಪೂಜಾ.
ಹೊಂಬಾಳೆ ಕ್ಲಿನಿಕ್ ಉಷಾಆನಂದಮೂರ್ತಿ. ಸಂಜಯ್ ಕ್ಲಿನಿಕ್ ಡಾ. ಹರ್ಷಿತ್.
ಪ್ರತಿಭಾವಂತ ವಿದ್ಯಾರ್ಥಿ ವಿಭೂಷಣ್ ರವರನ್ನು ಸನ್ಮಾನಿಸಲಾಯಿತು
ಭಜನಾ ಸೇವೆಯನ್ನು ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘದ ಪದಾಧಿಕಾರಿಗಳು ನೆರವೇರಿಸಿದರು
ಶ್ರೀ ಸಂಗಮೇಶ್ವರ ಸಮುದಾಯ ಭವನ ಸಮಿತಿ.
ಶ್ರೀ ಸಂಗಮೇಶ್ವರ ನೌಕರರ ಸಂಘ.
ಶ್ರೀ ಸಂಗಮೇಶ್ವರ ಯುವಕ ಸಂಘ
ಶ್ರೀ ಸಂಗಮೇಶ್ವರ ಮಹಿಳಾ ಸಂಘ.
ಹಾಗೂ ಕುಂಚಿಟಿಗ ಸಮಾಜದ ಪದಾಧಿಕಾರಿಗಳು ಭಕ್ತವೃಂದ ಭಾಗವಹಿಸಿದ್ದರು
