ಜಾಮೀನು ರದ್ದು ಕೋರಿ ಇ.ಡಿ. ಅರ್ಜಿ: ಶಾಸಕ ಪಪ್ಪಿಗೆ ನೋಟಿಸ್
ಬೆಂಗಳೂರು: ಆನ್‌ಲೈನ್, ಆಫ್‌ಲೈನ್ ಬೆಟ್ಟಿಂಗ್ ಸಂಬಂಧ ಅಕ್ರಮ ಹಣ
ವರ್ಗಾವಣೆ ಕಾಯ್ದೆಯಡಿ ಬಂಧಿತರಾಗಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಜಾಮೀನು ರದ್ದು ಕೋರಿ ಜಾರಿ ನಿರ್ದೇಶನಾ ಲಯ ಸಲ್ಲಿಸಿರುವ ಅರ್ಜಿ ಕುರಿತಂತೆ ವೀರೇಂದ್ರ ಅವ ರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರಕರಣ ದಲ್ಲಿ ವೀರೇಂದ್ರ ಅವರಿಗೆ ಜನಪ್ರತಿ ನಿಧಿಗಳ ಕೋರ್ಟ್ 2025ರ ಡಿ.30ರಂದು ಜಾಮೀನು ನೀಡಿರುವ ಆದೇಶ ರದ್ದು ಕೋರಿ ಇ.ಡಿ. ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದೆ. ಗುರುವಾರ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ನ್ಯಾಯಪೀಠ ವೀರೇಂದ್ರ ಅವರಿಗೆ ನೋಟಿಸ್ ನೀಡಿ ವಿಚಾರಣೆ ಫೆ.26ಕ್ಕೆ ಮುಂದೂಡಿತು.
