ವಾಟ್ಸ್ಆಪ್ ಸಂದೇಶ ನಂಬಿದ ವೈದ್ಯನಿಗೆ ಉಂಡೆನಾಮ
ಅಲ್ಪಾವಧಿಯಲ್ಲಿ ಕೋಟ್ಯಾಧೀಶರಾಗಬಹುದು ಎಂಬ ಆಮಿಷವೊಡ್ಡಿ ವೈದ್ಯರೊಬ್ಬರಿಗೆ 25 ಲಕ್ಷ ವಂಚಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮೊಬೈಲ್ ಫೋನ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ಹಣ ಪಡೆಯಹುದು ಎಂಬ ವಾಟ್ಸ್ಆಪ್ಗೆ ಬಂದ ಸಂದೇಶವನ್ನು ನಂಬಿದ ಸರಸ್ವತಿ ಬಡಾವಣೆಯ ವೈದ್ಯ ಹಣ ಕಳೆದುಕೊಂಡಿದ್ದಾನೆ.
ವಾಟ್ಸ್ಆಪ್ಗೆ ಬಂದ ಸಂದೇಶದಲ್ಲಿ ಹಣ ಹೂಡಿಕೆ ಮಾಡುವಂತೆ ಉತ್ತೇಜಿಸಲಾಗಿದೆ. ಸಾಲ್ಡ್ಕ್ಯಾಮ್ ಆ್ಯಪ್ ಡೌನ್ಲೋಡ್ ಮಾಡಿಕೊಂಡ ವೈದ್ಯ, ವಂಚಕರು ಹೇಳಿದಂತೆ ಹಣ ಹೂಡಿಕೆ ಮಾಡಿದ್ದಾರೆ.
ಫೆ.27ರಿಂದ ಮಾರ್ಚ್ 20ರವರೆಗೆ 25 ಲಕ್ಷವನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ಅಪರಾಧಗಳ ಸಹಾಯವಾಣಿ 1930 ಸಂಪರ್ಕಿಸಿ ವಿಚಾರಿಸಿದಾಗ ಮೋಸ ಹೋಗಿದ್ದು ಖಚಿತವಾಗಿದೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
