Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»ನ್ಯಾಯದಲ್ಲಿ ರಾಜಿ ಬೇಡ: ಪೊಲೀಸರಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ
ರಾಜ್ಯ

ನ್ಯಾಯದಲ್ಲಿ ರಾಜಿ ಬೇಡ: ಪೊಲೀಸರಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 29, 2026Updated:March 29, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ನ್ಯಾಯದಲ್ಲಿ ರಾಜಿ ಬೇಡ: ಪೊಲೀಸರಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

ಟಿಒಬಿ ನ್ಯೂಸ್ ಮೈಸೂರು

ನ್ಯಾಯವಿತರಣೆಯಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮೈಸೂರು ಘಟಕದ 46ನೇ ಬ್ಯಾಚ್ ಸಿವಿಲ್ ಪೊಲೀಸ್ ಉಪನಿರೀಕ್ಷಕರ ಪಾಸಿಂಗ್ ಔಟ್ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ ಮತ್ತು ಮಾನವೀಯತೆ ಅತ್ಯಂತ ಮುಖ್ಯವೆಂದು ಹೇಳಿದರು.

ಸಮಾಜದಲ್ಲಿನ ದೀನ ದಲಿತರು, ಮಹಿಳೆಯರು ಹಾಗೂ ದುರ್ಬಲ ವರ್ಗಗಳ ರಕ್ಷಣೆ ಪೊಲೀಸರ ಮುಖ್ಯ ಜವಾಬ್ದಾರಿಯಾಗಿದೆ.
ಗಾಂಧೀಜಿ ಅವರ ಮಾತುಗಳನ್ನು ಉಲ್ಲೇಖಿಸಿ, ಮಧ್ಯರಾತ್ರಿ ಮಹಿಳೆಯರು ಭಯವಿಲ್ಲದೆ ಓಡಾಡುವಂತಾದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರೆಯುತ್ತದೆ ಎಂದು ಹೇಳಿದರು.
ಈ ವೇಳೆ 377 ಮಂದಿ ಸಬ್ ಇನ್ಸ್ಪೆಕ್ಟರ್‌ಗಳು ಸೇವೆಗೆ ಸೇರ್ಪಡೆಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ 4911 ಹುದ್ದೆಗಳು ಭರ್ತಿಯಾಗಿವೆ. ಇನ್ನೂ 8000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವುದಾಗಿ ತಿಳಿಸಿದರು. ಸರ್ಕಾರ ಸದಾ ಪೊಲೀಸರ ಬೆಂಬಲದಲ್ಲಿರುತ್ತದೆ ಎಂದು ಭರವಸೆ ನೀಡಿದರು.

ಮಾದಕವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡಿ, ಠಾಣಾ ಮಟ್ಟದಲ್ಲೇ ಮಾದಕವಸ್ತು ತಯಾರಿ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಯುವಜನಾಂಗದ ಮೇಲೆ ಇದರ ಪರಿಣಾಮ ಗಂಭೀರವಾಗಿದ್ದು, ಸಮಾಜದ ಆರೋಗ್ಯ ಕಾಪಾಡಲು ಇದನ್ನು ನಿರ್ಮೂಲನೆ ಮಾಡುವುದು ಅಗತ್ಯವೆಂದರು.
ಪೊಲೀಸರು ಮಾನವೀಯತೆಯಿಂದ ವರ್ತಿಸಿ, ಸಾರ್ವಜನಿಕರೊಂದಿಗೆ ಸ್ನೇಹಪೂರ್ಣ ಸಂಬಂಧ ಹೊಂದಬೇಕು. ನಿರಪರಾಧಿಗಳಿಗೆ ಕರುಣೆ ತೋರಬೇಕು, ಆದರೆ ಅಪರಾಧಿಗಳ ವಿರುದ್ಧ ಯಾವುದೇ ಸಡಿಲಿಕೆ ತೋರಬಾರದು ಎಂದು ಹೇಳಿದರು. ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ನೀಡಿರುವ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಅಂಬೇಡ್ಕರ್ ಅವರ ಉಲ್ಲೇಖ ನೀಡಿ, ಅಧಿಕಾರ ಮತ್ತು ಹಣಬಲದ ದುರುಪಯೋಗಕ್ಕೆ ಒಳಗಾಗದೆ ಧೈರ್ಯದಿಂದ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಕಿವಿಮಾತು ಹೇಳಿದರು.

goverment karanataka ಕರ್ನಾಟಕ ಚುನಾವಣೆ ಬೆಂಗಳೂರು ಸಿದ್ದರಾಮಯ್ಯ
Follow on Facebook Follow on Instagram
Share. Facebook Twitter WhatsApp Telegram
Previous Articleಜಾತಿಗಿಂತ ಪ್ರೀತಿ ದೊಡ್ಡದು; ಕುಂಚಿಟಿಗ ಮಠದಲ್ಲಿ ಜಾತ್ಯತೀತ ವಿವಾಹ ಕ್ರಾಂತಿ
Next Article ಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

March 29, 2026

ಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ

March 29, 2026

ಜಾತಿಗಿಂತ ಪ್ರೀತಿ ದೊಡ್ಡದು; ಕುಂಚಿಟಿಗ ಮಠದಲ್ಲಿ ಜಾತ್ಯತೀತ ವಿವಾಹ ಕ್ರಾಂತಿ

March 29, 2026
Add A Comment
Leave A Reply Cancel Reply

Advertisement
Latest Posts

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.