Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

28/05/2026 ರ ನಿತ್ಯ ಭವಿಷ್ಯ

27/05/2026 ರ ನಿತ್ಯ ಭವಿಷ್ಯ – ಬುಧವಾರ

26/05/2026 ರ ನಿತ್ಯ ಭವಿಷ್ಯ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಸಿನಿಮಾ»ನಟ ರಾಕ್ಷಸ ಡಾಲಿ ಧನಂಜಯ್ ಖುದ್ದು ತನ್ನ ಫ್ಯಾನ್ಸ್ ಗೆ ಹೊಸ ಸುದ್ದಿ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೊಸ ವಿಷಯ ಹಂಚಿಕೊಂಡಿದ್ದಾರೆ.
ಸಿನಿಮಾ

ನಟ ರಾಕ್ಷಸ ಡಾಲಿ ಧನಂಜಯ್ ಖುದ್ದು ತನ್ನ ಫ್ಯಾನ್ಸ್ ಗೆ ಹೊಸ ಸುದ್ದಿ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೊಸ ವಿಷಯ ಹಂಚಿಕೊಂಡಿದ್ದಾರೆ.

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 30, 2026Updated:March 30, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ನಟ ರಾಕ್ಷಸ ಡಾಲಿ ಧನಂಜಯ್ ಖುದ್ದು ತನ್ನ ಫ್ಯಾನ್ಸ್ ಗೆ ಹೊಸ ಸುದ್ದಿ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೊಸ ವಿಷಯ ಹಂಚಿಕೊಂಡಿದ್ದಾರೆ.

ಟಿಒಬಿ ನ್ಯೂಸ್ ಬೆಂಗಳೂರು

ಓವರ್ ಟು ಡಾಲಿ…   ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು!!

ಒಬ್ಬರಿಂದ ಚಿತ್ರಕಥೆ ಕೇಳುವುದು ಬಹಳ ಪ್ರಯಾಸದ ಕೆಲಸ. ಆದರೆ ನಮ್ಮ ಕೆಲಸವೇ ಕಥೆ ಕೇಳುವುದು. ಆದಷ್ಟು ಕೇಳುವುದನ್ನು ತಡೆದು, ‘ಓದುವೆ, ಬೌಂಡ್ ಸ್ಕ್ರಿಪ್ಟ್ ಕೊಟ್ಟು ಹೋಗಿ’ ಅಂತ ಕೇಳ್ತಿನಿ. ಓದೋ ಪ್ರಯತ್ನ ಮಾಡ್ತಿನಿ. ಓದಿಸಿಕೊಳ್ಳೋದು ಚಿತ್ರಕಥೆಯ ತಾಕತ್ತು.

ಹಾಗೆ ಓದುತ್ತಲೇ ನಕ್ಕು ನಗಿಸಿದ್ದು, ಕಣ್ತುಂಬಿಸಿದ್ದು, “ಬಡವ ರಾಸ್ಕಲ್” , “ಟಗರುಪಲ್ಯ” ಹಾಗೂ ಇನ್ನು ಬಿಡುಗಡೆಯಾಬೇಕಿರುವ ಪೂರ್ಣಚಂದ್ರ ನಟನೆಯ, ಅವಿನಾಶ್ ಬಲೆಕ್ಕಳ ನಿರ್ದೇಶನದ “ಹೆಗ್ಗಣ ಮುದ್ದು”.

ಈ ಮಧ್ಯೆ ಗೆಳೆಯ ಪೂರ್ಣ ಒಂದು ಕಥೆಯ ಮೇಲೆ ಕೆಲಸ ಮಾಡುತ್ತಿರುವುದು ಆಗಾಗ ಕಣ್ಣಿಗೆ ಬೀಳುತ್ತಿತ್ತು. ‘ಈ ಕಥೆ ಕೇಳು’ ಅಂತ ಹೇಳ್ತಾ ಇದ್ರೂ, ನನ್ನ ಕೆಲಸದ ಒತ್ತಡದಲ್ಲಿ ಕೇಳೋಕೆ ಆಗಿರಲಿಲ್ಲ. ‘ಪೂರ್ತಿ ಬರೆದು ಮುಗಿಸಿಕೊಡಿ ಓದ್ತೀನಿ’ ಅಂತ ಹೇಳಿ ನಾನೂ ಮರೆತು ಹೋದೆ.

ಸುಮಾರು 6 ತಿಂಗಳ ನಂತರ, ಒಂದು ದಿನ ಬಾಲ್ಕನಿ ಅಲ್ಲಿ ನಿಂತು ಮಾತಾಡ್ತಾ ನೆನಪಾಗಿ ಕೇಳ್ದೆ ‘ಬರಿತಿದ್ರಲ್ಲ ಏನಾಯ್ತು?’. ‘ಬರಿತಿದ್ವಿ, ಆದ್ರೆ .. ಅಲ್ಲೇ ಟೇಬಲ್ ಮೇಲಿದೆ ನೋಡು 6 ತಿಂಗಳಿಂದ… ಇದನ್ನ ಸಿನಿಮಾ ಮಾಡಬಹುದಾ ಇಲ್ವಾ ಗೊತ್ತಾಗಲಿಲ್ಲ, ಅದಿಕ್ಕೆ ನಿಲ್ಸಿದಿವಿ’ ಅಂತ ಹೇಳಿ ಹೋದ.

ಬದುಕು ಎಷ್ಟೇ ಹೆದರಿಸಿದ್ರೂ, ಯಾವಾಗಲೂ ನಗ್ತಾ ನಗಿಸ್ತಾ ತಮಾಷೆಯಾಗೆ ಇರೋ ಇವ್ನು, ಏನ್ ಬರೆದಿರಬಹುದು ಅನ್ನೋ ಕುತೂಹಲದಲ್ಲಿ ಅವತ್ತು ಆ ಚಿತ್ರಕಥೆನ ಓದಿದೆ. ಒಬ್ಬನೇ ನಗ್ತಾ ನಗ್ತಾ, ಎಲ್ಲ ಪಾತ್ರಗಳ ಜೊತೆ ಪ್ರಯಾಣ ಮಾಡ್ತಾ, ಓದು ಮುಗಿದಿದ್ದೇ ಗೊತ್ತಾಗ್ಲಿಲ್ಲ! ಇವತ್ತಿನ ಬೆಂಗಳೂರನ್ನ ಎಷ್ಟು ಅರ್ಥಪೂರ್ಣವಾಗಿ ಕಟ್ಟಿದ್ರು ಅಂದ್ರೆ, ಮಹಾನಗರಗಳ ಪಡಿಪಾಟಿಲುಗಳನ್ನ ನಗಿಸ್ತಾ ಮನ ಮುಟ್ಟೊ ಹಂಗೆ ಬರೆದಿದ್ರು. ಆದ್ರೆ ಚಿತ್ರಕಥೆ end ಆಗಿರಲಿಲ್ಲ.

ಕೂಡಲೇ ಪೂರ್ಣಂಗೆ ಕಾಲ್ ಮಾಡಿ, ‘ಇದನ್ನ ಯಾಕೆ complete ಮಾಡಿಲ್ಲ? ಮಾಡಿ, ನಾನೇ ನಿರ್ಮಾಣ ಮಾಡ್ತಿನಿ’ ಅಂದೆ. ‘ನೀನ್ ಆಕ್ಟಿಂಗ್ ನೂ ಮಾಡ್ಬೇಕು’ ಅಂದ. ‘ಮಾಡ್ತಿನಿ’ ಅಂದೆ.

ಶಶಾಂಕ್ ಸೋಗಾಲ್ ಗೆ ಕಾಲ್ ಮಾಡಿ ಓದು ಚೆನ್ನಾಗಿದೆ ಅಂದೆ. Already ನಿರ್ದೇಶಕ ಆಗಿ ಗೆದ್ದಿದ್ರು, ಈ project ಅಲ್ಲಿ ಪೂರ್ಣನ ಜೊತೆ ಇರ್ತಿನಿ ಅಂದ. ಕಥೆ complete ಮಾಡಿದ್ರು. Most lovable ending!

ನಿರ್ಮಾಣಕ್ಕೆ ಗೆಳೆಯ ಹರ್ಷ ಜೊತೆಯಾದ. ಜೇನುಕಲ್ ಸಿದ್ದಪ್ಪನಿಗೆ ಪೂಜೆ ಸಲ್ಲಿಸಿ ಕೆಲಸ ಶುರು ಮಾಡಿದ್ವಿ. ಹತ್ತು ಹಲವು ಹೊಸ ಅದ್ಭುತ ಪ್ರತಿಭೆಗಳನ್ನ, ಒಂದಷ್ಟು GenZ ಹುಡುಗರನ್ನ ಸೇರಿಸಿಕೊಂಡು, ಪೂರ್ಣಚಂದ್ರ ನಿರ್ದೇಶನದಲ್ಲಿ ಒಂದು ಒಳ್ಳೆ 100% entertainer ಸಿನಿಮಾ ಕಟ್ಟಿದಿವಿ.

ಇನ್ನು ನಿಮ್ಮ ಮುಂದೆ ಬರೋದಷ್ಟೇ ಬಾಕಿ. ಬಹಳ ಉತ್ಸುಕತೆಯಿಂದ post-production ಕೆಲಸ ನಡಿತಾ ಇದೆ. ಹಬ್ಬದ ಸೀಸನ್ ಗೆ ನಿಮ್ಮ ಮುಂದೆ ಸಿನಿಮಾ. ಸದ್ಯದಲ್ಲೇ Title Announcement ಎಂದು ತಿಳಿಸಿದ್ದಾರೆ.

Film kannada karanataka Sandalwood ಕರ್ನಾಟಕ ಡಾಲಿ ಧನಂಜಯ್ ಬೆಂಗಳೂರು
Follow on Facebook Follow on Instagram
Share. Facebook Twitter WhatsApp Telegram
Previous Articleಚಿತ್ರದುರ್ಗದಲ್ಲಿ ಕ್ರಿಕೆಟ್ ಪ್ರತಿಭೆಗಳ ಆಯ್ಕೆ ಶಿಬಿರ
Next Article ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಬದುಕಿನ ಜಂಜಡಗಳಿಗೆ ಸಂಗೀತದ ಸಂಜೀವಿನಿ: ಆಶಾ ಭೋಸ್ಲೆ ಎಂಬ ಸ್ವರದೇವತೆ

April 13, 2026

ಗಾನ ಕೋಗಿಲೆ ಆಶಾ ಭೋಂಸ್ಲೆ ಇನ್ನಿಲ್ಲ: 92ನೇ ವಯಸ್ಸಿನಲ್ಲಿ ಸಂಗೀತ ಸಾಮ್ರಾಜ್ಞಿ ವಿಧಿವಶ

April 12, 2026

ಗುಣಮಟ್ಟದ ಶಿಕ್ಷಣ ದೊಡ್ಡ ಕಟ್ಟಡಗಳಿಂದ ನಿರ್ಧಾರವಾಗಲ್ಲ; ಕೆ.ಜಿ.ಜಗದೀಶ್

April 10, 2026
Add A Comment
Leave A Reply Cancel Reply

Advertisement
Latest Posts

28/05/2026 ರ ನಿತ್ಯ ಭವಿಷ್ಯ

27/05/2026 ರ ನಿತ್ಯ ಭವಿಷ್ಯ – ಬುಧವಾರ

26/05/2026 ರ ನಿತ್ಯ ಭವಿಷ್ಯ

ಬಳ್ಳಾರಿ ಜನರೇ ಗಮನಿಸಿ: ಮೇ 26 ರಂದು ನಗರದ ಈ ಭಾಗಗಳಲ್ಲಿ 7 ಗಂಟೆ ವಿದ್ಯುತ್ ಕಡಿತ!

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.