Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಎ.ಎಚ್.ಭಾನುಮೂರ್ತಿ ನಿಧನ 

ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ
ಜಿಲ್ಲಾ ಸುದ್ದಿ

ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 1, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ

ಟಿಒಬಿ ನ್ಯೂಸ್ ಚಿತ್ರದುರ್ಗ

ನಮ್ಮ ಇಂದಿನ ನೀರಿನ ಮಿತಬಳಕೆ ನಾಳೆಯ ಭವಿಷ್ಯದ ಬದುಕಿಗೆ ಭರವಸೆಯಾಗುತ್ತದೆ ಎಂದು ವೀನಸ್ ಅಕಾಡೆಮಿ ಶೈಕ್ಷಣಿಕ ನಿರ್ದೇಶಕ ಡಾ. ಹೆಚ್.ಎನ್.ಪ್ರದೀಪ್ ಅಭಿಪ್ರಾಯಪಟ್ಟರು.

ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೀರಿನ ಮಹತ್ವ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ದಿನವೇ ವಿಶ್ವ ಜಲ ದಿನ. ಇಂದು ಕುಡಿಯುವ ನೀರಿಗೂ ಹಾಹಾಕಾರ ಹೆಚ್ಚಾಗುತ್ತಿದೆ. ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ಇಲ್ಲವಾದಲ್ಲಿ ಶಾಶ್ವತವಾಗಿ ನಮ್ಮ ಅಳಿವು ಶತಸಿದ್ಧ ಎಂದು ತಿಳಿಸಿದರು.

 

ವಿಶೇಷ ಉಪನ್ಯಾಸ ನೀಡಿದ ವೈಜ್ಞಾನಿಕ ಚಿಂತಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ವಿಶೇಷವಾಗಿ ಶಿಕ್ಷಕರಿಗೆ ಈ ರೀತಿಯ ಜ್ಞಾನ ಒದಗಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಶಿಕ್ಷಕರು ಎಲ್ಲಾ ರೀತಿಯ ಹೊಣೆಗಾರಿಕೆಯನ್ನು ನಿಭಾಯಿಸಬಲ್ಲರು. ಆದರೆ ಇಂದು ಶಿಕ್ಷಣ ಕ್ಷೇತ್ರವೂ ಸಹ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭೂಮಿಯ ಮೇಲೆ ಕುಡಿಯುವ ನೀರಿನ ಲಭ್ಯತೆ ಕೇವಲ 0.003 ರಷ್ಟು ಮಾತ್ರ. ಜಾಗತಿಕ ತಾಪಮಾನದ ಏರಿಕೆಯಿಂದ ನೀರ್ಗಲ್ಲುಗಳು ಕರಗಿಹೋಗುತ್ತಿವೆ. ಇಂತಹ ಸ್ಥಿತಿಯಲ್ಲಿ ಉಪ್ಪು ನೀರನ್ನು ಶುದ್ಧ ಕುಡಿಯುವ ನೀರನ್ನಾಗಿ ಮಾಡುವುದು ಸವಾಲಾಗಿ ಪರಿಣಮಿಸುತ್ತಿದೆ. ಸಂಪನ್ಮೂಲಗಳ ಕೊರತೆ ಹೆಚ್ಚಾಗುತ್ತಿದೆ ಎಂದರು.

ಅತಿ ಬೋರ್ವೆಲ್ ಗಳ ಕೊರೆಯುವಿಕೆಯಿಂದಲೂ, ಜಲಸಂಪನ್ಮೂಲದ ಅಭಾವ ಎದ್ದು ಕಾಣುತ್ತಿದೆ. ಜಲಜನಕ ಮತ್ತು ಆಮ್ಲಜನಕಗಳ ಸಂಯೋಜನೆಯಿಂದ ಉಂಟಾಗಿರುವ ಜೀವಜಲವನ್ನು ಸಂರಕ್ಷಿಸಿ ಉಳಿಸಬೇಕಿದೆ. ಭವಿಷ್ಯದ ಪೀಳಿಗೆಗೆ ಜಲಸಂಪನ್ಮೂಲ ಸಮರ್ಥ ಬಳಕೆ ಆಗಬೇಕಿದೆ ಎಂದು ತಿಳಿಸಿದರು.

ನೀರಿನ ಅಭಾವವನ್ನು ತಡೆಗಟ್ಟಲು ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಅಗತ್ಯ. ಭವಿಷ್ಯದ ದೃಷ್ಟಿಯಿಂದ ನೀರನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಕೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕಾಗಿದೆ ಎಂದರು.

ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ. ಪಿ.ನಾಗಭೂಷಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ಹಿರಿಯ ಪತ್ರಕರ್ತ ಚಳ್ಳಕೆರೆ ಯರ್ರಿಸ್ವಾಮಿ, ಈ.ರುದ್ರಮುನಿ, ಉಪನ್ಯಾಸಕರಾದ ಡಾ.ಜಿ. ಪಿ.ರಾಜು, ಆರ್.ಎಸ್.ರಾಜು, ನಾಗಲಿಂಗರೆಡ್ಡಿ, ಭಾರ್ಗವಿ, ಸ್ನೇಹ ಇದ್ದರು.

chitradurga karanataka Summer Water ಕರ್ನಾಟಕ ಚಿತ್ರದುರ್ಗ
Follow on Facebook Follow on Instagram
Share. Facebook Twitter WhatsApp Telegram
Previous Articleಡಿಜಿಟಲ್ ಜಗತ್ತು ಅವಕಾಶಗಳ ಮಹಾಸಾಗರ; ಬಳಕೆಯಲ್ಲಿ ಇರಲಿ ಎಚ್ಚರ
Next Article ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಎ.ಎಚ್.ಭಾನುಮೂರ್ತಿ ನಿಧನ 

April 1, 2026

ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 

April 1, 2026

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

April 1, 2026
Add A Comment
Leave A Reply Cancel Reply

Advertisement
Latest Posts

ಎ.ಎಚ್.ಭಾನುಮೂರ್ತಿ ನಿಧನ 

ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.