Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

28/05/2026 ರ ನಿತ್ಯ ಭವಿಷ್ಯ

27/05/2026 ರ ನಿತ್ಯ ಭವಿಷ್ಯ – ಬುಧವಾರ

26/05/2026 ರ ನಿತ್ಯ ಭವಿಷ್ಯ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ವಿದ್ಯಾಲಯ»*ಡಾ.ಬಿ.ಆರ್.ಅಂಬೇಡ್ಕರ್ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ*
ವಿದ್ಯಾಲಯ

*ಡಾ.ಬಿ.ಆರ್.ಅಂಬೇಡ್ಕರ್ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ*

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 2, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

*ಡಾ.ಬಿ.ಆರ್.ಅಂಬೇಡ್ಕರ್ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧ*

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಆಡಳಿತ,ಪೊಲೀಸ್ ಇಲಾಖೆ,ಶಿಕ್ಷಣ ಇಲಾಖೆಗಳು ಸ್ಥಳೀಯ ದಲಿತ,ಕನ್ನಡ ಪರ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ಯ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ.ಸ್ಪರ್ಧೆಯು ಏಪ್ರೀಲ್ 12 ರಂದು ಬೆಳಿಗ್ಗೆ 9 ಗಂಟೆಗೆ ಕುಷ್ಟಗಿ ಪಟ್ಟಣದ ಕ್ರೈಸ್ಟ್ ದಿ ಕಿಂಗ್ ಶಾಲೆಯಲ್ಲಿ ನಡೆಯಲಿದೆ.

 

ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ ,ವಿದ್ಯಾರ್ಹತೆಯ ನಿರ್ಬಂಧ ಇರುವುದಿಲ್ಲ,ಎಲ್ಲ ಆಸಕ್ತರಿಗೂ ಮುಕ್ತ ಅವಕಾಶವಿರುತ್ತದೆ.ರಾಜ್ಯದ ಯಾವುದೇ ಜಿಲ್ಲೆಗಳ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡಿನ ನಕಲು ಪ್ರತಿ ಒದಗಿಸಿ ಭಾಗವಹಿಸಬಹುದು.ಮೊದಲ ಸುತ್ತಿನಲ್ಲಿ 50 ಅಂಕಗಳ ಬಹುಆಯ್ಕೆ ಮಾದರಿಯ ಸುತ್ತು , ಈ ಸುತ್ತಿನಲ್ಲಿ ಅತಿಹೆಚ್ಚು ಅಂಕಗಳಿಸಿದ ಮೊದಲ 12 ಅಭ್ಯರ್ಥಿಗಳು ಎರಡನೇ ಸುತ್ತಿಗೆ ಆಯ್ಕೆಯಾಗುತ್ತಾರೆ. ಈ 12 ಅಭ್ಯರ್ಥಿಗಳನ್ನು 6 ತಂಡಗಳಾಗಿ ವಿಂಗಡಿಸಿ ಎರಡನೇ ಹಂತದ ಮೌಖಿಕ ಸುತ್ತು ನಡೆಸಲಾಗುವುದು.ವಿಜೇತ ತಂಡಗಳಿಗೆ 50 ಸಾವಿರ ರೂ. ಪ್ರಥಮ ಬಹುಮಾನ ,30 ಸಾವಿರ ರೂ.ದ್ವಿತೀಯ ಬಹುಮಾನ ಹಾಗೂ 20 ಸಾವಿರ ರೂ.ಗಳ ತೃತೀಯ ಬಹುಮಾನ ನೀಡಲಾಗುವುದು.ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

 

*ರಸಪ್ರಶ್ನೆ ಸ್ಪರ್ಧೆಯ ಪಠ್ಯ*

ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಶಿಕ್ಷಣ, ರಾಷ್ಟ್ರೀಯ ಹೋರಾಟ,ಭಾರತ ಸಂವಿಧಾನ ರಚನೆ,ಶಿಕ್ಷಣ, ಸಂಘಟನೆ,ಹೋರಾಟ ತತ್ವಗಳು,ಚಿಂತನೆಗಳು,ಮೀಸಲಾತಿ,ಮಹಿಳಾ ಹಕ್ಕುಗಳು,ಜಾಗತಿಕ ಮಹಾನಾಯಕರಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರಸ್ತುತ ದಿನಮಾನ.

 

ಆಸಕ್ತರು ಏಪ್ರಿಲ್ 11 ರ ಒಳಗಾಗಿ ಈ ಮೊಬೈಲ್ ನಂಬರುಗಳ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.ಎಸ್.ಎಸ್.ತೆಮಿನಾಳ-9740421421,ಶ್ರೀನಿವಾಸ ದೇಸಾಯಿ-9845808941,ಸುರೇಶ್ ಅಂಕೋಲಿ-9901797951,ಅಮರೇಗೌಡ-9902180043 ಅಥವಾ ಭರಮಪ್ಪ ಪಿ-9731799080 ಮೂಲಕ ಸಂಪರ್ಕಿಸಬಹುದು ಎಂದು ಕುಷ್ಟಗಿ ವೃತ್ತದ ಪೊಲೀಸ್ ಇನ್ಸಪೆಕ್ಟರ್ ವಿಶ್ವನಾಥ ಹಿರೇಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

https://timesofbayaluseeme.com/

Compition Dr br Ambedkar Quiz ಡಾ.ಬಿ.ಆರ್.ಅಂಬೇಡ್ಕರ್ ರಸಪ್ರಶ್ನೆ ಸ್ಪರ್ಧ
Follow on Facebook Follow on Instagram
Share. Facebook Twitter WhatsApp Telegram
Previous Articleನಿತ್ಯ ಭವಿಷ್ಯ – 03/04/2026
Next Article ಮುರುಘಾ ಮಠದಲ್ಲಿ ಅಕ್ಕಮಹಾದೇವಿ ಶರಣೋತ್ಸವ; ಸ್ತ್ರೀಕುಲದ ಅಸ್ಮಿತೆ ಅಕ್ಕ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಪಿಯು ಫಲಿತಾಂಶ ; ಇತಿಹಾಸ ಸೃಷ್ಟಿಸಿದ ವಿದ್ಯಾರ್ಥಿನಿಯರು

April 9, 2026

ದ್ವಿತೀಯ ಪಿಯುಸಿ ದಾಖಲೆ ಫಲಿತಾಂಶ; ಶೇ. 86 ವಿದ್ಯಾರ್ಥಿಗಳು ಪಾಸ್ 

April 9, 2026

ದ್ವಿತೀಯ ಪಿಯು ಫಲಿತಾಂಶ ಪ್ರಕಟಣೆಗೆ ಕೌಂಟ್ ಡೌನ್ ; ಹಲವು ವಿಶೇಷ

April 8, 2026
Add A Comment
Leave A Reply Cancel Reply

Advertisement
Latest Posts

28/05/2026 ರ ನಿತ್ಯ ಭವಿಷ್ಯ

27/05/2026 ರ ನಿತ್ಯ ಭವಿಷ್ಯ – ಬುಧವಾರ

26/05/2026 ರ ನಿತ್ಯ ಭವಿಷ್ಯ

ಬಳ್ಳಾರಿ ಜನರೇ ಗಮನಿಸಿ: ಮೇ 26 ರಂದು ನಗರದ ಈ ಭಾಗಗಳಲ್ಲಿ 7 ಗಂಟೆ ವಿದ್ಯುತ್ ಕಡಿತ!

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.