Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಏಕನಾಥೇಶ್ವರಿ, ಬರಗೇರಮ್ಮ ದೇವಿ ವೈಭವದ ಮೆರವಣಿಗೆ

ಶಿವಲಿಂಗಪ್ಪ ಕೊಲೆ ಪ್ರಕರಣ; ಹಂತಕರ ಬಂಧನಕ್ಕೆ ಆಗ್ರಹ

ಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು 

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ದಾವಣಗೆರೆ»ಸಾಕ್ಷಾತ್ಕಾರಗೊಂಡ ವಿಶ್ವಬಂಧುವಿನ ವೈಭವದ ರಥಪರ್ವ
ದಾವಣಗೆರೆ

ಸಾಕ್ಷಾತ್ಕಾರಗೊಂಡ ವಿಶ್ವಬಂಧುವಿನ ವೈಭವದ ರಥಪರ್ವ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 3, 2026Updated:April 3, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಸಾಕ್ಷಾತ್ಕಾರಗೊಂಡ ವಿಶ್ವಬಂಧುವಿನ ವೈಭವದ ರಥಪರ್ವ

ದಾವಣಗೆರೆ: ತರಳಬಾಳು ಜಗದ್ಗುರು ಬೃಹನ್ಮಠದ ಮೂಲಪುರುಷನಾದ ಮರುಳಸಿದ್ಧರು ಈ ನಾಡು ಕಂಡ ಅಪೂರ್ವ ಯೋಗಿ. ರೇವಣಸಿದ್ಧರಿಂದ ದೀಕ್ಷಿತನಾದ ಮರುಳಸಿದ್ಧರು ಸಿದ್ಧ ಪರಂಪರೆಯಲ್ಲಿಯೇ ವಿಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವ ಹೊಂದಿದವರು.

ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಯೋಗಿ ಪುರುಷ. ತನ್ನ ಉದಾತ್ತ ಆಶಯಗಳನ್ನು ಮುಂದುವರಿಸಿಕೊಂಡು ಹೋಗಲು ತೆಲಗುಬಾಳು ಸಿದ್ಧನಿಗೆ ತರಳಾ.. ಬಾಳು ಎಂದು ಆಶೀರ್ವದಿಸಿದ ದೂರದೃಷ್ಟಿಯ ನೇತಾರ. ಅವರ ಸದಾಶಯಗಳ ಮುಂದುವರಿಕೆಯೇ ತರಳಬಾಳು ಗುರು ಪರಂಪರೆ. ಕನ್ನಡದ ಮೊದಲ ವಚನಕಾರ್ತಿ ಅಕ್ಕಮಹಾದೇವಿಗೆ ಲಿಂಗ ದೀಕ್ಷೆ ನೀಡಿ ಆಶೀರ್ವಾದಿಸಿದವರು ಗುರು ಮರುಳಸಿದ್ಧರು.

ಅಕ್ಕನ ಹುಣ್ಣಿಮೆ ಎಂದೇ ಆಚರಿಸುತ್ತಿರುವ ಚೈತ್ರಮಾಸದ ಸೀಗಿ ಹುಣ್ಣಿಮೆಯ ದಿನವೇ ಸುಕ್ಷೇತ್ರ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ. ಪ್ರತಿವರ್ಷದ ಪದ್ಧತಿಯಂತೆ ಗುರುವಾರ ಸಂಜೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮಠದ ಜಂಗಮರ ವಚನ , ಮಂತ್ರಘೋಶಗಳ ನಿನಾದದಲ್ಲಿ ಶ್ರೀ ಮರುಳಸಿದ್ಧರ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ವಿಶ್ವಬಂಧುವಿನ ರಥ ಸಾಗುವಾಗ ಹುಣ್ಣಿಮೆಯ ಚಂದ್ರನ ಉಪಸ್ಥಿತಿಯು ಹುಣ್ಣಿಮೆಗೂ ತರಳಬಾಳು ಮಠಕ್ಕೂ ದೈವೀ ಸಂಬಂಧದ ದಿವ್ಯ ಸಾಕ್ಷಾತ್ಕಾರವನ್ನು ಪುನಾರಾವರ್ತಿಸಿತು.

ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಗುರು ಮರುಳಸಿದ್ಧರ ದೇವಾಲಯವನ್ನು ಪ್ರದಕ್ಷಿಣೆ ಹಾಕಿ, ಗರ್ಭಗುಡಿಯನ್ನು ಪ್ರವೇಶಿಸಿ ವಿಶ್ವಬಂಧು ಮರುಳಸಿದ್ದೇಶ್ವರರಿಗೆ ಭಕ್ತಿ ಸಮರ್ಪಿಸಿದರು.

ಅಪಾರ ಭಕ್ತರ ಜಯಘೋಷಗಳೊಂದಿಗೆ ರಥದ ಅಂಗಳ ಪ್ರವೇಶಿಸಿ ರಥ ಪ್ರದಕ್ಷಿಣೆಗೈದು ರಥದ ಗಾಲಿಗೆ ಕಾಯಿ ಸಮರ್ಪಿಸಿದರು. ನಂತರ ರಥವನೇರಿದ ಶ್ರೀ ಜಗದ್ಗುರುಗಳವರು ಮರುಳಸಿದ್ದರ ಉತ್ಸವ ಮೂರ್ತಿಗೆ
ಪೂಜಾ ಕೈಂಕರ್ಯಗಳೊಂದಿಗೆ ಭಕ್ತಿ ಸಮರ್ಪಿಸಿ. ಪತ್ರೆ ಪುಷ್ಪಗಳನ್ನು ಭಕ್ತರಿಗೆ ಪ್ರೋಕ್ಷಿಸಿ ಆಶೀರ್ವಾದಿಸಿದರು.

ಅಪಾರ ಭಕ್ತರಿಂದ ಶ್ರೀ ತರಳಬಾಳು ಗುರುಪರಂಪರೆಗೆ ಜಯವಾಗಲಿ, ವಿಶ್ವಬಂಧು ಮರುಳಸಿದ್ದೇಶ್ವರರಿಗೆ ಜಯವಾಗಲಿ, ಶ್ರೀ ತರಳಬಾಳು ಜಗದ್ಗುರುಗಳವರಿಗೆ ಜಯವಾಗಲೆಂದು ಭಕ್ತಿ ಪೂರ್ಣ ಘೋಷಣೆಗಳು ಮುಗಿಲು ಮುಟ್ಟಿದವು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿದರು. ಸಂಗಮೇಶಗೌಡ, ಎಚ್‌.ಡಿ. ಮಹೇಶ್ವರಪ್ಪ, ಮಾಜಿ ಶಾಸಕ ಎಂ. ಬಸವರಾಜನಾಯ್ಕ, ಗಂಗನಕಟ್ಟೆ ಸಂಗಣ್ಣ, ಹೆದ್ನೆ ಮುರಿಗೇಶಪ್ಪ, ಹೆಮ್ಮನಬೇತೂರು ಶಶಿಧರ್, ಹೊನ್ನೂರು ಮುನಿಯಪ್ಪ, ಆನಗೋಡು ಕರಿಬಸಪ್ಪ, ರವಿಕುಮಾರ್, ಪ್ರಕಾಶ್, ವಸಂತಕುಮಾರ್, ಬುಳ್ಳಾಪುರ ವಿನಯ್ ಹಾಜರಿದ್ದರು.

 

ನಿತ್ಯ ಭವಿಷ್ಯ – 03/04/2026

karanataka ದಾವಣಗೆರೆ ರಥಪರ್ವ ವಿಶ್ವಬಂಧು ವೈಭವ ಸಾಕ್ಷಾತ್ಕಾರ
Follow on Facebook Follow on Instagram
Share. Facebook Twitter WhatsApp Telegram
Previous Articleಗರ್ಭಕಂಠದ ಕ್ಯಾನ್ಸರ್ ತಡೆಗೆ ‘ಹೆಚ್‍ಪಿವಿ’ ಲಸಿಕೆ ಶ್ರೀರಕ್ಷೆ
Next Article ಭಕ್ತಿಯ ತೈಲದ ಕೊರತೆ ಎಂದೂ ಆಗದು : ಡಾ. ಶಿವಮೂರ್ತಿ ಸ್ವಾಮೀಜಿ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಭಕ್ತಿಯ ತೈಲದ ಕೊರತೆ ಎಂದೂ ಆಗದು : ಡಾ. ಶಿವಮೂರ್ತಿ ಸ್ವಾಮೀಜಿ

April 3, 2026

ಪ್ರಿ-ವೆಡ್ಡಿಂಗ್ ಶೂಟ್ ಕ್ರೇಜ್‌ಗೆ ಬ್ರೇಕ್ ! ; ಹೊರಬಿತ್ತು ಹೊಸ ರೂಲ್ಸ್

April 3, 2026

ಪೂರ್ಣಗೊಂಡ ಮೌಲ್ಯಮಾಪನ ಕಾರ್ಯ; ಫಲಿತಾಂಶಕ್ಕೆ ದಿನಗಣನೆ ಶುರು

April 3, 2026
Add A Comment
Leave A Reply Cancel Reply

Advertisement
Latest Posts

ಏಕನಾಥೇಶ್ವರಿ, ಬರಗೇರಮ್ಮ ದೇವಿ ವೈಭವದ ಮೆರವಣಿಗೆ

ಶಿವಲಿಂಗಪ್ಪ ಕೊಲೆ ಪ್ರಕರಣ; ಹಂತಕರ ಬಂಧನಕ್ಕೆ ಆಗ್ರಹ

ಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು 

ಪರೀಕ್ಷೆ ಬಳಿಕ ಸಿಹಿ ಸಂಭ್ರಮ: ವಿದ್ಯಾರ್ಥಿಗಳ ಮೊಗದಲ್ಲಿ ನಗು

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.