Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

₹449 ಕೋಟಿ ಆದಾಯದ ಐತಿಹಾಸಿಕ ಮೈಲಿಗಲ್ಲು; ಮೈಸೂರು ರೈಲ್ವೆ ವಿಭಾಗದ ಭರ್ಜರಿ ದಾಖಲ

ಮಕ್ಕಳಿಗೆ ಭಾಷಾ ಕೌಶಲದ ಸಾಮರ್ಥ್ಯ ಬೆಳೆಸಿ; ಎಂ. ನಾಸಿರುದ್ದೀನ್

ಜಿಲ್ಲಾಧಿಕಾರಿ ಬಂಧನಕ್ಕೆ ವಾರಂಟ್ ; ಜಮೀನು ವ್ಯಾಜ್ಯ ಪ್ರಕರಣ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»₹449 ಕೋಟಿ ಆದಾಯದ ಐತಿಹಾಸಿಕ ಮೈಲಿಗಲ್ಲು; ಮೈಸೂರು ರೈಲ್ವೆ ವಿಭಾಗದ ಭರ್ಜರಿ ದಾಖಲ
ರಾಜ್ಯ

₹449 ಕೋಟಿ ಆದಾಯದ ಐತಿಹಾಸಿಕ ಮೈಲಿಗಲ್ಲು; ಮೈಸೂರು ರೈಲ್ವೆ ವಿಭಾಗದ ಭರ್ಜರಿ ದಾಖಲ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 4, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

₹449 ಕೋಟಿ ಆದಾಯದ ಐತಿಹಾಸಿಕ ಮೈಲಿಗಲ್ಲು; ಮೈಸೂರು ರೈಲ್ವೆ ವಿಭಾಗದ ಭರ್ಜರಿ ದಾಖಲ

ಮೈಸೂರು: ಮೈಸೂರು ರೈಲ್ವೆ ವಿಭಾಗ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ₹449.13 ಕೋಟಿ ಪ್ರಯಾಣಿಕ ಆದಾಯ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ. ಹಿಂದಿನ ₹419.89 ಕೋಟಿ ದಾಖಲೆಯನ್ನು ಧೂಳಿಪಟ ಮಾಡಿರುವ ವಿಭಾಗ, 2025-26 ಹಣಕಾಸು ವರ್ಷದಲ್ಲಿ ಹಲವು ವಲಯಗಳಲ್ಲಿ ಅಪೂರ್ವ ಸಾಧನೆ ಮೆರೆದಿದೆ.

ಪ್ರಯಾಣಿಕರಿಂದ ಮಾತ್ರವಲ್ಲದೆ ಟಿಕೆಟ್ ಪರಿಶೀಲನೆ ಕಾರ್ಯಾಚರಣೆಗಳಿಂದಲೇ ₹9.75 ಕೋಟಿ ದಂಡ ಮತ್ತು ಆದಾಯ ಸಂಗ್ರಹವಾಗಿದ್ದು, ಇದು ವಾರ್ಷಿಕ ಗುರಿಯನ್ನೂ ಮೀರಿದ ಸಾಧನೆ ಎನ್ನಲಾಗಿದೆ.

ಇನ್ನೊಂದೆಡೆ ನಾನ್-ಫೇರ್ ಆದಾಯ ವಲಯದಲ್ಲೂ ಮೈಸೂರು ವಿಭಾಗ ಭರ್ಜರಿ ಪ್ರದರ್ಶನ ನೀಡಿದೆ.

ಜಾಹೀರಾತುಗಳಿಂದ ₹3.17 ಕೋಟಿ, ಪಾರ್ಕಿಂಗ್‌ನಿಂದ ₹4.02 ಕೋಟಿ, ಆಹಾರ ಪೂರೈಕೆಯಿಂದ ₹2.61 ಕೋಟಿ ಆದಾಯ ಹರಿದು ಬಂದಿದೆ.

ಸರಕು ಸಾಗಣೆ ವಿಭಾಗದಲ್ಲಿ ₹900.19 ಕೋಟಿ ಆದಾಯ ದಾಖಲಾಗಿದ್ದು, ಇದು ವಿಭಾಗದ ಎರಡನೇ ಅತಿ ದೊಡ್ಡ ಸಾಧನೆ. ಜೊತೆಗೆ 8.665 ಮಿಲಿಯನ್ ಟನ್ ಕಬ್ಬಿಣದ ಅದಿರು ಲೋಡಿಂಗ್ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ.

ಪಾರ್ಸೆಲ್ ವಿಭಾಗದಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದ್ದು, ಒಟ್ಟು ₹11.81 ಕೋಟಿ ಆದಾಯ ಗಳಿಸಲಾಗಿದೆ. ಸೀಟಿಂಗ್-ಕಮ್-ಲಗೇಜ್ ರೇಕ್ ಮತ್ತು ಹೈ ಕ್ಯಾಪಾಸಿಟಿ ಪಾರ್ಸೆಲ್ ವ್ಯಾನ್ ಲೀಸಿಂಗ್ ಮೂಲಕವೇ ₹5.85 ಕೋಟಿ ಗಳಿಕೆ ಸಾಧಿಸಲಾಗಿದೆ.

ಪ್ರಯಾಣಿಕ ಸೇವಾ ವಲಯದಲ್ಲಿ ಮೈಸೂರಿನ ಕುವೆಂಪು ನಗರದಲ್ಲಿರುವ ನಾನ್-ರೈಲು ಹೆಡ್ ಕಾಯ್ದಿರಿಸುವ ಕೇಂದ್ರ ಭಾರತೀಯ ರೈಲ್ವೆಯಲ್ಲೇ ಮೊದಲ ಬಾರಿಗೆ ಡಿಜಿಟಲ್ ಹಾಗೂ ಕ್ಯಾಶ್‌ಲೆಸ್ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಹೊಂದಿದ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭದ್ರತಾ ಕ್ರಮಗಳ ಭಾಗವಾಗಿ ವಿವಿಧ ನಿಲ್ದಾಣಗಳು, ಪಾರ್ಸೆಲ್ ಕಚೇರಿಗಳು ಮತ್ತು ಪ್ಯಾಂಟ್ರಿ ಕಾರುಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗಿದ್ದು, ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ.

ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ, ಆದಾಯ ವೃದ್ಧಿ, ಪ್ರಯಾಣಿಕ ಸೇವೆ ಮತ್ತು ಭದ್ರತೆಯಲ್ಲಿ ಮೈಸೂರು ವಿಭಾಗ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.

ನಿತ್ಯ ಭವಿಷ್ಯ – 04/04/2026 (ಶನಿವಾರ)

ಐತಿಹಾಸಿಕ ಮೈಸೂರು ರೈಲ್ವೆ ₹449 ಕೋಟಿ
Follow on Facebook Follow on Instagram
Share. Facebook Twitter WhatsApp Telegram
Previous Articleಮಕ್ಕಳಿಗೆ ಭಾಷಾ ಕೌಶಲದ ಸಾಮರ್ಥ್ಯ ಬೆಳೆಸಿ; ಎಂ. ನಾಸಿರುದ್ದೀನ್
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಜಿಲ್ಲಾಧಿಕಾರಿ ಬಂಧನಕ್ಕೆ ವಾರಂಟ್ ; ಜಮೀನು ವ್ಯಾಜ್ಯ ಪ್ರಕರಣ

April 4, 2026

ಪ್ರಿ-ವೆಡ್ಡಿಂಗ್ ಶೂಟ್ ಕ್ರೇಜ್‌ಗೆ ಬ್ರೇಕ್ ! ; ಹೊರಬಿತ್ತು ಹೊಸ ರೂಲ್ಸ್

April 3, 2026

ಅಪ್ಪನ ವಚನಗಳು:- ಶಿವಯೋಗಿಗಳಿಗೆ ಬಸವಣ್ಣನವರು ಎಲ್ಲ ವಿಧದಲ್ಲಿಯೂ ಮೇಲ್ಪಂಕ್ತಿ ಆಗಿದ್ದರು.

April 2, 2026
Add A Comment
Leave A Reply Cancel Reply

Advertisement
Latest Posts

₹449 ಕೋಟಿ ಆದಾಯದ ಐತಿಹಾಸಿಕ ಮೈಲಿಗಲ್ಲು; ಮೈಸೂರು ರೈಲ್ವೆ ವಿಭಾಗದ ಭರ್ಜರಿ ದಾಖಲ

ಮಕ್ಕಳಿಗೆ ಭಾಷಾ ಕೌಶಲದ ಸಾಮರ್ಥ್ಯ ಬೆಳೆಸಿ; ಎಂ. ನಾಸಿರುದ್ದೀನ್

ಜಿಲ್ಲಾಧಿಕಾರಿ ಬಂಧನಕ್ಕೆ ವಾರಂಟ್ ; ಜಮೀನು ವ್ಯಾಜ್ಯ ಪ್ರಕರಣ

ನಿತ್ಯ ಭವಿಷ್ಯ – 04/04/2026 (ಶನಿವಾರ)

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.