Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

28/05/2026 ರ ನಿತ್ಯ ಭವಿಷ್ಯ

27/05/2026 ರ ನಿತ್ಯ ಭವಿಷ್ಯ – ಬುಧವಾರ

26/05/2026 ರ ನಿತ್ಯ ಭವಿಷ್ಯ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಬಾಬೂಜಿ ದೇಶದ ದಕ್ಷ ಆಡಳಿತಗಾರ; ಎಚ್.ಆಂಜನೇಯ*
ಜಿಲ್ಲಾ ಸುದ್ದಿ

ಬಾಬೂಜಿ ದೇಶದ ದಕ್ಷ ಆಡಳಿತಗಾರ; ಎಚ್.ಆಂಜನೇಯ*

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 5, 2026Updated:April 6, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

*ಬಾಬೂಜಿ ದೇಶದ ದಕ್ಷ ಆಡಳಿತಗಾರ; ಎಚ್.ಆಂಜನೇಯ*

*ಚಿತ್ರದುರ್ಗ, ಏ.5:*
ಅಂಬೇಡ್ಕರ್ ನಿಧನದ ಬಳಿಕ ಶೋಷಿತರು, ಅಸ್ಪೃಶ್ಯ ರು, ದುರ್ಬಲರಲ್ಲಿ ಮನೆ ಮಾಡಿದ್ದ ಅನಾಥ ಪ್ರಜ್ಞೆ ದೂರಗೊಳಿಸಿ, ಅವರನ್ನು ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಿದ ಮಹಾನ್ ನಾಯಕ ಬಾಬು ಜಗಜೀವನ ರಾಂ ಎಂದು ಮಾಜಿ ಸಚಿವ ಎಚ್.ಆಂಜನೇಯ ಸ್ಮರಿಸಿದರು.

ತಾಲೂಕಿನ ಸೀಬಾರದ ತಮ್ಮ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಬಾಬು ಜಗಜೀವನ ರಾಂ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

1956ರಲ್ಲಿ ಅಂಬೇಡ್ಕರ್ ಅಗಲಿಕೆ ದೇಶದ ಪರಿಶಿಷ್ಟ ಸಮುದಾಯದ ಜನರಲ್ಲಿ ಕತ್ತಲು ಆವರಿಸಿಕೊಂಡಿತ್ತು. ಈ ವೇಳೆ ಸಂವಿಧಾನದ ಆಶಯಗಳನ್ನು ಸರ್ಕಾರದಲ್ಲಿ ಮಂತ್ರಿಯಾಗಿದ್ದುಕೊಂಡು ಸಮರ್ಥವಾಗಿ ಅನುಷ್ಠಾನಗೊಳಿಸಿ ಜನರ ಮನಗೆದ್ದ ನಿಜನಾಯಕ ಬಾಬು ಜಗಜೀವನ ರಾಂ ಎಂದು ಬಣ್ಣಿಸಿದರು.

ಮೀಸಲಾತಿ ಅನುಷ್ಠಾನದ ಜೊತೆಗೆ ರೈಲ್ವೆ ಸೇರಿ ವಿವಿಧ ಇಲಾಖೆಯಲ್ಲಿ ಬಡ್ತಿ ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತರ ಬದುಕಿನಲ್ಲಿ ಆಶಾಕಿರಣರಾಗಿ ವಿಜೃಂಭಿಸಿದರು. ನೆಹರೂ, ಇಂದಿರಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವಧಿಯಲ್ಲಿ ಅನೇಕ ಖಾತೆಗಳ ಜೊತೆಗೆ ಒಮ್ಮೆ ಉಪ ಪ್ರಧಾನಿಯಾಗಿ ಆಡಳಿತ ನಡೆಸಿ ದೇಶದ ಗಮನವನ್ನೇ ತನ್ನಡೆಗೆ ಸೆಳೆದ ದಕ್ಷ ಆಡಳಿತಗಾರ ಎಂದು ಸ್ಮರಿಸಿದರು.

ಸುಧೀರ್ಘ 45 ವರ್ಷಗಳ ಸಂಸದೀಯ ಪಟು, ದಕ್ಷ ಆಡಳಿತಗಾರನಾಗಿ ಚುನಾವಣೆಯಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದ ಬಾಬು ಜಗಜೀವನ ರಾಂ ದೇಶದಲ್ಲಿ ಆಹಾರದ ಕೊರತೆ ಎದುರಾದ ವೇಳೆ ಹಸಿರು ಕ್ರಾಂತಿಯ ಮೂಲಕ ಹಸಿವು ನೀಗಿದ ಮಹಾತ್ಮ ಎಂದು ಹೇಳಿದರು.

ದಕ್ಷ ಆಡಳಿತಗಾರ, ಗೆಲುವಿನ ಸರದಾರ, ಉತ್ತಮ ಸಂಸದೀಯ ಪಟು ಆಗಿದ್ದ ಬಾಬು ಜಗಜೀವನ ರಾಂ ಪ್ರಧಾನಿ ಆಗಲು ಅಂದಿನ ಜಾತಿ ವ್ಯವಸ್ಥೆ ಅಡ್ಡಿಯಾಗಿದ್ದು ನೋವಿನ ವಿಷಯ. ಆದರೆ, ಅಂತಹ ಕಾಲಘಟ್ಟದಲ್ಲಿ ದಲಿತ ನಾಯಕನಿಗೆ ಎಐಸಿಸಿ ಅಧ್ಯಕ್ಷ ಸ್ಥಾನ, ಉಪ ಪ್ರಧಾನಿ, ರಕ್ಷಣಾ ಖಾತೆ, ಹೀಗೆ ವಿವಿಧ ಉನ್ನತ ಹುದ್ದೆಗಳನ್ನು ಕಾಂಗ್ರೆಸ್ ಪಕ್ಷ ನೀಡುವ ಮೂಲಕ ದಕ್ಷ ವ್ಯಕ್ತಿಗೆ ಗೌರವ ನೀಡಿತು ಎಂದರು.

ದಲಿತರ ಉದ್ಧಾರದ ಕನಸು ಕಂಡಿದ್ದ ಅವರು ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಸಮುದಾಯವನ್ನು ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಿದರು. ಅವರ ಆಶಯಗಳು, ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಾಗಿದರೆ ಅಭಿವೃದ್ಧಿಯ ಹಾದಿಯಲ್ಲಿ ಸಾಗಬೇಕು. ಈ ನಿಟ್ಟಿನಲ್ಲಿ ಯುವ ಪೀಳಿಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ದೇಶದ ಎರಡು ಕಣ್ಣಿದ್ದಂತೆ. ಅವರನ್ನು ನಾವು ಪ್ರತ್ಯೇಕಿಸಿ ನೋಡಲು ಸಾಧ್ಯವೇ ಇಲ್ಲ. ಇಬ್ಬರ ಚಿಂತನೆಯೂ ದೇಶ ಮತ್ತು ದಲಿತೋದ್ಧಾರ ಆಗಿತ್ತು ಎಂದರು.

ದೇಶಕ್ಕೆ ಈ ಇಬ್ಬರು ನಾಯಕರು ಅಪಾರ ಕೊಡುಗೆ ನೀಡಿದ್ದಾರೆ. ಇವರ ಸಾಧನೆಗೆ ಬೆನ್ನೆಲುಬು ಆಗಿ ನಿಂತು ತನ್ನ ಕರ್ತವ್ಯ ನಿರ್ವಹಿಸಿದ ಕಾಂಗ್ರೆಸ್ ಪಕ್ಷ ಮಾತ್ರ ದಲಿತರು, ಸಮರ್ಥರನ್ನು ಗುರುತಿಸಿ ಉನ್ನತ ಸ್ಥಾನ ಕಲ್ಪಿಸಲಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

ಮುಖಂಡರಾದ ಅನಿಲ್ ಕೋಟಿ, ಚೇತನ್ ಬೋರೇನಹಳ್ಳಿ ಇತರರಿದ್ದರು.

 

ನಿತ್ಯ ಭವಿಷ್ಯ – 06/04/2024 (ಶನಿವಾರ)

Follow on Facebook Follow on Instagram
Share. Facebook Twitter WhatsApp Telegram
Previous Articleನಿತ್ಯ ಭವಿಷ್ಯ – 05/04/2026 (ಭಾನುವಾರ)
Next Article ನಿತ್ಯ ಭವಿಷ್ಯ – 06/04/2024
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

28/05/2026 ರ ನಿತ್ಯ ಭವಿಷ್ಯ

May 28, 2026

27/05/2026 ರ ನಿತ್ಯ ಭವಿಷ್ಯ – ಬುಧವಾರ

May 27, 2026

26/05/2026 ರ ನಿತ್ಯ ಭವಿಷ್ಯ

May 26, 2026
Add A Comment
Leave A Reply Cancel Reply

Advertisement
Latest Posts

28/05/2026 ರ ನಿತ್ಯ ಭವಿಷ್ಯ

27/05/2026 ರ ನಿತ್ಯ ಭವಿಷ್ಯ – ಬುಧವಾರ

26/05/2026 ರ ನಿತ್ಯ ಭವಿಷ್ಯ

ಬಳ್ಳಾರಿ ಜನರೇ ಗಮನಿಸಿ: ಮೇ 26 ರಂದು ನಗರದ ಈ ಭಾಗಗಳಲ್ಲಿ 7 ಗಂಟೆ ವಿದ್ಯುತ್ ಕಡಿತ!

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.