ಕಾಂಗ್ರೆಸ್‌ಗೆ ಅದೃಶ್ಯ ಮತದಾರರಿದ್ದು 2 ಕ್ಷೇತ್ರದಲ್ಲೂ ಗೆಲ್ಲೇವೆ: ರಾಜಣ್ಣ
ತುಮಕೂರು: ಕಾಂಗ್ರೆಸ್‌ಗೆ ಅದೃಶ್ಯ ಮತದಾರರಿದ್ದು ಎರಡೂ ಕ್ಷೇತ್ರಗಳಲ್ಲಿಗೆಲ್ಲುತ್ತೇವೆಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಜೊತೆಗೆ ನಿಲ್ಲುವವರು ಎಲ್ಲರೂ ಬಹಳ ಬಡವರು. ಯಾವತ್ತು ಕೂಡ ಉಪಕಾರ ಸ್ಮರಣೆ ಇಟ್ಟುಕೊಂಡವರು. ನಾವು ಗ್ಯಾರಂಟಿಗಳನ್ನು ಏನು ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುವ ಎರಡು ಕಡೆಗೂ ನಾವು ಗೆಲ್ಲುತ್ತೇವೆ ಎಂದರು. ಒಳಮೀಸಲಾತಿ ಒಂದು ರೀತಿ ಗೊಂದಲದ ಗೂಡಾಗಿದೆ. ಯಾರೊಬ್ಬರು ಕೂಡ ಅದರಿಂದ ಸಮಾಧಾನ ಆದ ಹಾಗೆ ಅನ್ನಿಸುತ್ತಿಲ್ಲ. ಎಡ, ಬಲ ಮತ್ತು ಇತರೆ ಆಗಲಿ ಗೊಂದಲ ಇದೆ ಎಂದು ಹೇಳಿದರು.
