ಕಾಂಗ್ರೆಸ್ಸಲ್ಲಿ ಕುಟುಂಬ ರಾಜಕಾರಣ, ಓಲೈಕೆ ಪರಾಕಾಷ್ಠೆಗೆ: ಪ್ರಲ್ಲಾದ ಜೋಶಿ
ದಾವಣಗೆರೆ: ಕಾಂಗ್ರೆಸ್ನಲ್ಲಿ ಭ್ರಷ್ಟಾಚಾರ, ದುರಾಡಳಿತ ಸರ್ವೇ ಸಾಮಾನ್ಯ. ಕುಟುಂಬ ರಾಜಕಾರಣ, ಓಲೈಕೆ ಪರಾಕಾಷ್ಠೆ ತಲುಪಿದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಲ್ಲೂ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲಾದ ಜೋಶಿ ಟೀಕಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಕುಟುಂಬ ರಾಜಕಾರಣ ದಿಂದ ಪ್ರಜಾಪ್ರಭುತ್ವ ನಿರ್ನಾಮವಾಗಲಿದೆ. ಒಂದೇ ಕುಟುಂಬಕ್ಕೆ ಯಾಕೆ ಮನ್ನಣೆ ನೀಡಬೇಕು ಎಂದು ಯೋ ಸಿರುವಮತದಾರರು ಬಿಜೆಪಿಗೆ ಮತ ನೀಡುವ ಮೂಲಕ ಆಶೀರ್ವದಿಸಲಿದ್ದಾರೆ. ಕೇಂದ್ರ ಕೊಟ್ಟ ಅಕ್ಕಿಗೆ ನಿಮ್ಮ ಅನ್ನಭಾಗ್ಯದೇ ಹೆಸರಿಟ್ಟಿದ್ದೀರಿ. ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ತಪ್ಪುದಾರಿಗೆ ಎಳೆಯುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಉತ್ತರ-ದಕ್ಷಿಣ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು
