🏏 ಚಿತ್ರದುರ್ಗದಲ್ಲಿ ಕ್ರಿಕೆಟ್ ಪ್ರತಿಭೆಗಳ ಆಯ್ಕೆ ಶಿಬಿರ
ಚಿತ್ರದುರ್ಗ, ಮಾ.30:
ಗ್ರಾಮಾಂತರ ಪ್ರದೇಶದ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ತುಮಕೂರು ವಲಯದ ಆಶ್ರಯದಲ್ಲಿ ಜಿಲ್ಲೆಯ ಮಟ್ಟದಲ್ಲಿ ಕ್ರಿಕೆಟ್ ತರಬೇತಿ ಶಿಬಿರ ಹಾಗೂ ಆಟಗಾರರ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚಿತ್ರದುರ್ಗ ಅಕಾಡಮಿ ಟರ್ಫ್ ಗ್ರೌಂಡ್ ನಲ್ಲಿ ಬೆಳಗ್ಗೆ 9 ಗಂಟೆಗೆ ಆಯ್ಕೆ ನಡೆಯಲಿದೆ. ಆಸಕ್ತ ಆಟಗಾರರು ಕ್ರಿಕೆಟ್ ಸಮವಸ್ತ್ರ, ವಯಸ್ಸಿನ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಹಾಗೂ ಕಿಟ್‌ಗಳೊಂದಿಗೆ ಭಾಗವಹಿಸಲು ಸೂಚಿಸಲಾಗಿದೆ.
ಆಯ್ಕೆ ವೇಳಾಪಟ್ಟಿ:
ಏಪ್ರಿಲ್ 1: 14 ವರ್ಷದೊಳಗಿನವರು
ಏಪ್ರಿಲ್ 7: 16 ವರ್ಷದೊಳಗಿನವರು
ಏಪ್ರಿಲ್ 8: 19 ವರ್ಷದೊಳಗಿನವರು
ಮಹಿಳೆ ಹಾಗೂ ಬಾಲಕಿಯರಿಗೂ ಪ್ರತ್ಯೇಕವಾಗಿ ಜಿಲ್ಲಾ ತಂಡಕ್ಕೆ ಆಯ್ಕೆ ನಡೆಯಲಿದೆ. ಆಯ್ಕೆಯಾದ ತಂಡಗಳು ದಾವಣಗೆರೆ, ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗಳ ವಿರುದ್ಧ ಅಂತರ್ ಜಿಲ್ಲಾ ಪಂದ್ಯಗಳನ್ನು ಆಡಲಿವೆ.
ಈ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಮುಂದಿನ ಹಂತದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ಎಂ. ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯುವ 30 ದಿನಗಳ ವಿಶೇಷ ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಲಾಗುತ್ತದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಸಂಚಾಲಕ ಎನ್. ಅಶೋಕ್, ಜಿಲ್ಲೆಯ ಎಲ್ಲಾ ಯುವ ಕ್ರಿಕೆಟ್ ಆಟಗಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
📞 ಸಂಪರ್ಕ: 9741738564, 6360411015
