ಅಂಜನಾದ್ರಿ: ₹31.30 ಲಕ್ಷ ಕಾಣಿಕೆ ಸಂಗ್ರಹ
ಗಂಗಾವತಿ (ಕೊಪ್ಪಳ): ತಾಲೂಕಿನ ಆನೆಗೊಂದಿ ಬಳಿಯ ಅಂಜನಾದ್ರಿ
ಆಂಜನೇಯ ದೇವಸ್ಥಾನಕ್ಕೆ ಕಳೆದ 51 ದಿನಗಳಲ್ಲಿ 31,30,730 ರೂ. ಕಾಣಿಕೆ ಸಲ್ಲಿಕೆಯಾಗಿದೆ. ಹುಂಡಿಗಳಲ್ಲಿ ಸಂಗ್ರಹವಾದ ಕಾಣಿಕೆಯನ್ನು ಗುರುವಾರ ಎಣಿಕೆ ಮಾಡಲಾಯಿತು. ದೇವಸ್ಥಾನ ಸಮಿತಿ ಕಾರ್ಯನಿರ್ವಹಣಾಧಿಕಾರಿಯೂ ಆದ ತಹಸೀಲ್ದಾರ್ ವಿಶ್ವನಾಥ್ ಮುರುಡಿ ಸಮ್ಮುಖದಲ್ಲಿ ಎಣಿಕೆ ಪ್ರಕ್ರಿಯೆ ನೆರವೇರಿಸಲಾ ಯಿತು. ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ಅಮೆರಿಕ, ದುಬೈ, ನೇಪಾಳದ ಕೆಲವು ನೋಟುಗಳೂ ಹುಂಡಿಯಲ್ಲಿ ಪತ್ತೆಯಾಗಿವೆ. ಇದೇ ವರ್ಷದ ಫೆ.3ರಂದು ನಡೆದ ಎಣಿಕೆ ವೇಳೆ 68,85, 965ರೂ. ಕಾಣಿಕೆ ಸಂಗ್ರಹವಾಗಿತ್ತು.
