12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕಿದೆ
ಚಿತ್ರದುರ್ಗ ಜ. 28
12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕಿದೆ, ಮಹಿಳೆ ಯಾವುದರಲ್ಲೂ ಸಹಾ ಕಡಿಮೆ ಇಲ್ಲ ಎಲ್ಲದರಲ್ಲೂ ಸಹಾ ಸಾಧನೆ ಮಾಡಿದ್ದಾಳೆ, ಅವರಿವರ ಮಾತನ್ನು ಕೇಳದೆ ತಮ್ಮ ಸ್ವಂತಿಕೆ ಯಿಂದ ಬುದ್ದಿಯನ್ನು ಚಲಾಯಿಸಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ಖಂಡಿಮಠ ಮಹಿಳೆಯರಿಗೆ ಕರೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾ(ರಿ)ಜಿಲ್ಲಾ ಮಹಿಳಾ ಘಟಕದವತಿಯಿಂದ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ನಡೆದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಕುಟುಂಬದಲ್ಲಿ ಮಹಿಳೆಯ ಪಾತ್ರ ಅತಿ ಮುಖ್ಯವಾಗಿದೆ ಯಾವ ಕುಟುಂಬದಲ್ಲೂ ಸಹಾ ಮಹಿಳೆ ಇಲ್ಲದೆ ಆ ಕುಟುಂಬ ನಡೆಯಲು ಸಾಧ್ಯವಿಲ್ಲ, ಹೆಣ್ಣು ಪುರುಷನ ಬದುಕಿಗೆ ಮುಖ್ಯವಾಗಿದ್ದಾಳೆ, ವಚನ ಸಾಹಿತ್ಯದಲ್ಲಿ ಗಂಡು, ಹೆಣ್ಣು ಎಂಬ ಬೇಧ ಇಲ್ಲದೆ ಎಲ್ಲರನ್ನು ಸಮನಾಗಿ ಕಾಣಲಾಗಿದೆ. ನಮಗೆ ಶರಣರ ಸಾಹಿತ್ಯ ಪ್ರೇರಣೆಯಾಗಬೇಕಿದೆ. ಸಂವಿಧಾನ ನೀಡಿದ ಅಭೀವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕಿದೆ . ನಮಗೆ ಬೇಕಾದದ್ದನ್ನು ಅನುಸರಿಸಬೇಕಿದೆ ಬೇರೆಯವರಿಗೆ ಟೀಕೆ ಮಾಡುವುದು ಸರಿಯಲ್ಲ ಎಂದರು.
ಮಾನವನಾಗಿ ಬಂದ ಮೇಲೆ ಬರೀ ಸುಖವನ್ನು ಅನುಭವಿಸುವುದು ಮಾತ್ರವಲ್ಲ , ಮೋಕ್ಷದ ದಾರಿಯನ್ನು ಕಂಡುಕೊಳ್ಳಬೇಕಿದೆ. ಈ ಹಿನ್ನಲೆಯಲ್ಲಿ ನಮಗೆ ಶರಣರ ವಚನಗಳು ದಾರಿ ದೀಪನಾಗಿವೆ. ಮಹಿಳೆಯರ ಕೀಳೀರಿಮೆಯನ್ನು ಬಿಡುವುದರ ಮೂಲಕ ಸಮಾಜದಲ್ಲಿ ತನ್ನನ್ನು ತಾನು ಪ್ರತಿಬಿಂಬಿಸಿಕೊಳ್ಳಬೇಕಿದೆ. ಹೆಣ್ಣಿಗೆ ಅಭೀವೃದ್ದಿಯ ಶಕ್ತಿಯನ್ನು ಪ್ರಕೃತಿ ನೀಡಿದೆ. ಪುರುಷನ ಶಕ್ತಿಯನ್ನು ಜಗತ್ತಿಗೆ ತೋರಿಸುವ ಶಕ್ತಿಯನ್ನು ಹೊಂದಿರುವವಳು ಹೆಣ್ಣು ಆಗಿದ್ದಾಳೆ. ಗೃಹಣಿಗೆ ಸಮಾರ್ಥಕವಾದ ಪದ ಇನ್ನೂಂದು ಇಲ್ಲವಾಗಿದೆ, ಬೇರೆ ಎಲ್ಲಾ ಕೆಲಸವನ್ನು ನಿರ್ವಹಿಸಬಹುದು ಆದರೆ ಗೃಹಣಿಯ ಕೆಲಸವನ್ನು ಮಾಡುವುದು ಮಾತ್ರ ಕಷ್ಠವಾಗುತ್ತದೆ ನಮ್ಮ ದೇಶ ಭಾರತೀಯ ಸಂಸ್ಕøತಿಯನ್ನು ಹೊಂದಿರುವುದು ರಾಜಕೀಯ ನಾಯಕರಿಂದ ಅಲ್ಲ ನಮ್ಮ ನಾರಿಯರಿಂದ ಕುಟುಂಬ ಚನ್ನಾಗಿ ಇದ್ದರೆ ಜಿಲ್ಲೆ, ರಾಜ್ಯ ದೇಶ ಚನ್ನಾಗಿ ಇರುತ್ತದೆ, ಅದು ದಾರಿ ತಪ್ಪಿದರೆ ಎಲ್ಲವೂ ಸಹಾ ದಾರಿ ತಪ್ಪುತ್ತದೆ. ಮಹಿಳೆ ತನ್ನ ಎಲ್ಲಾ ಕೆಲಸಗಳನ್ನು ಯಾವುದೇ ಸ್ವಾರ್ಥ ಇಲ್ಲದೆ ನಿಸ್ವಾರ್ಥವಾಗಿ ಮಾಡುತ್ತಾಳೆ ಎಂದು ಖಂಡಿಮಠ ತಿಳಿಸಿದರು.
ಉದ್ಘಾಟನೆಯನ್ನು ನೇರವೇರಿಸಿದ ಬಸವಮಂಟಪದ ಶರಣೆ ದಾನೇಶ್ವರಿ ಮಾತಾಜಿ ಮಾತನಾಡಿ ಇಂದಿನ ದಿನಮಾನದಲ್ಲಿ ಮಹಿಳೆ ಎಲ್ಲಾ ಕಡೆಯಲ್ಲಿಯೂ ಸಹಾ ಪ್ರಗತಿಯನ್ನು ಸಾಧಿಸಿದ್ದಾಳೆ, ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸಿದ್ದಾಳೆ, ಮಹಿಳೆಯರಿಗಾಗಿ ಮೊಟ್ಟ ಮೊದಲ ಬಾರಿಗೆ ಪೀಠವನ್ನು ಸ್ಥಾಪಿಸಿದ್ದು, ಮಾತೆ ಮಹಾದೇವಿಯವರು ಇವರು ಆಂದು ಸ್ಥಾಪಿಸಿದ ಪೀಠ ಇಂದು ಹೆಮ್ಮರವಾಗಿ ಬೆಳೆದಿದೆ. ಲಿಂಗಾಯತರಾದವರು ದೇಹದ ಮೇಲೆ ಲಿಂಗ ಇರಬೇಕು, ರುದ್ರಾಕ್ಷಿಯನ್ನು ಧರಿಸಿರಬೇಕು, ಹಣೆಗೆ ವಿಭೂತಿ ಧಾರಣೆಯಾಗಿರಬೇಕು, ಇದರ ಬದಲು ಬಂಗಾರ ನಮ್ಮ ದೇಹದ ಮೇಲೆ ಇದ್ದರೆ ಯಾರೂ ಬೇಕಾದರೂ ಸಹಾ ಕಳ್ಳತನ ಮಾಡಬಹುದಾಗಿದೆ ನಮ್ಮಲ್ಲಿ ಇವುಗಳು ಇದ್ದರೆ ಯಾರು ಸಹಾ ಇದನ್ನು ಕೇಳುವುದಿಲ್ಲ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಘಟಕ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಶ್ರೀಮತಿ ಆರ್. ಶೈಲಜಬಾಬು ವಹಿಸಿದ್ದರು.ಕಾರ್ಯಕ್ರಮದಲ್ಲಿ ದಾವಣಗೆರೆಯ ಶಾಮನೂರಿನ ಜ್ಞಾನಧಾರೆ ಪುನರುತ್ಥಾನ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ.ಶಶಿಕಲಾ ಸುರೇಶ್‍ರವರನ್ನು ಸನ್ಮಾನಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕೆಂಚವೀರಪ್ಪ, ಹೊಸದುರ್ಗ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಮಲ್ಲೇಶ್ ಮಾತನಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ(ರಿ)ಜಿಲ್ಲಾ ಮಹಿಳಾ ಘಟಕದ ಸದಸ್ಯನಿಯರಿಂದ ಪಾರ್ಥಿಸಿದರೆ, ಉಮಾ ರಮೇಶ್ ಸ್ವಾಗತಿಸಿದರು. ಕೆ.ಟಿ.ಶಾಂತಮ್ಮ ಪ್ರಸ್ತಾವಿಕವಾಗಿ ಮಾತನಾಡಿದರು, ಜಯಶೀಲಾ ವಿರಣ್ಣ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ದೇವಕಿ ವಂದಿಸಿದರೆ ಗೀತಾ ರುದ್ರೇಶ್ ಕಾರ್ಯಕ್ರಮ ನಿರೂಪಿಸಿದರು. ಕು.ನಿಖಿತಾ ಸ್ವಾಗತ ನೃತ್ಯವನ್ನು ಮಾಡಿದರು
