ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಗೆ ಮಾತೃ ವಿಯೋಗ
ಚಿತ್ರದುರ್ಗ: ನಗರದ ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಸಂದೀಪ್ ಅವರ ತಾಯಿ ಪುಟ್ಟಮ್ಮ (67) ಮಂಗಳವಾರ ನಿಧನರಾದರು.
ಚಳ್ಳಕೆರೆ ನಗರದ ಎಸ್.ಆರ್. ರೋಡ್ ನಿವಾಸಿಯಾಗಿದ್ದ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗಕ್ಕೆ ಕರೆತರುತ್ತಿರುವ ವೇಳೆ ದಾರಿ ಮಧ್ಯೆ ಅಸುನೀಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪತಿ ಬ್ಯಾಂಕ್ ಸೂರನಾಯಕ, ಪುತ್ರರಾದ ಸಂದೀಪ್, ಸಾಗರ್, ಸುಹಾಸ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಜರ್ಮನಿಯಲ್ಲಿ ಇರುವ ಪುತ್ರ ಸುಹಾಸ್ ಆಗಮನದ ಬಳಿಕ, ಬುಧವಾರ ನೇರಲಗುಂಟೆ ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
