Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

11/05/2026 ರ ನಿತ್ಯ ಭವಿಷ್ಯ

ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ

ಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»ತರಾತುರಿ ಸಮೀಕ್ಷೆಯಲ್ಲಿ ಪ್ರಮಾದ ಎಸಗಲಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ರಾಜ್ಯ

ತರಾತುರಿ ಸಮೀಕ್ಷೆಯಲ್ಲಿ ಪ್ರಮಾದ ಎಸಗಲಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 25, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ತರಾತುರಿ ಸಮೀಕ್ಷೆಯಲ್ಲಿ ಪ್ರಮಾದ ಎಸಗಲಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ಮಂಗಳವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಹಮ್ಮಿಕೊಂಡ `ಬೆಂಗಳೂರು ಚಲೋ’ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಸಮುದಾಯಗಳ ರಾಜಕೀಯ ನಾಯಕರು, ಮುಖಂಡರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸಲು ಪಡಿತರ ಚೀಟಿಯನ್ನು ಒಂದು ಮಾನದಂಡವಾಗಿ ಬಳಸಲಾಗಿದೆ. ಆದರೆ ವರದಿಯಲ್ಲಿ ತಿಳಿಸಿರುವಂತೆ ಸುಮಾರು 7 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳು ಪಡಿತರ ಚೀಟಿಯೇ ಹೊಂದಿಲ್ಲ (ಪುಟ ಸಂಖ್ಯೆ 98) ಅಂದ ಮೇಲೆ ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸುವಲ್ಲಿ ಲೋಪವಾಗಿ ಸುಮಾರು 30 ಲಕ್ಷ ಜನರನ್ನು ಕೈ ಬಿಡಲಾಗಿದೆ ಹಾಗೂ ಭೋವಿ ಜನಾಂಗದ ಸುಮಾರು 3.5 ಲಕ್ಷ ಜನರನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ ಎಂದು ಹೇಳಿದರು.

ಭೋವಿ ಸಮಾಜವು 2026ರಲ್ಲಿ ಕೇಂದ್ರ ಸರ್ಕಾರ ನಡೆಸುವ ಜನಗಣತಿ ಆದಾರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳ ಆಧಾರದ ಮೇಲೆ ಒಳಮೀಸಲಾತಿಯನ್ನು ಕಲ್ಪಿಸಲು ಒತ್ತಾಯಿಸುತ್ತದೆ. ಹಾಗೂ ದೋಷ ಪೂರಿತ ನ್ಯಾ.ನಾಗಮೋಹನದಾಸ್ ವರದಿಯನ್ನು ತಿರಸ್ಕರಿಸಲು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಒಳಮೀಸಲಾತಿ ನೀಡುವ ಸಮಯದಲ್ಲಿ ನಿಖರವಾದ ವೈಜ್ಞಾನಿಕ ಅಂಕಿಅಂಶಗಳನ್ನು ಪಡೆದು ಭೋವಿ ಸಮಾಜವನ್ನು ಪ್ರತ್ಯೇಕ ಗುಂಪಾಗಿ ಸೃಜಿಸಲು ವಿನಂತಿಸುತ್ತೇವೆ ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳ ೧೦೧ ಜಾತಿಗಳ ಐಕ್ಯತೆಗೆ, ಸಮಗ್ರತೆಗೆ ಧಕ್ಕೆ ಮಾಡುವ ನ್ಯಾ.ನಾಗಮೋಹನ್‌ದಾಸ್ ವರದಿಯ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು ಎಂದು ‘ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ’ವು ಆಗ್ರಹಿಸಿದೆ.

ರಾಜ್ಯ ಸರಕಾರ ಮಾ.೨೭ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಸಂಬAಧ ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಸಮುದಾಯಗಳಿಗೆ ಅನ್ಯಾಯವೆಸಗುವ ರೀತಿಯಲ್ಲಿ ತಪ್ಪು ನಿರ್ಧಾರಗಳನ್ನು ಕೈಗೊಂಡರೆ ನಾಲ್ಕು ಸಮುದಾಯಗಳು ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸುತ್ತದೆ ಎಂದು ಒಕ್ಕೂಟದ ಮುಖಂಡರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ‘ಪರಿಶಿಷ್ಟ ಜಾತಿಯ ೧೦೧ ಸಮುದಾಯಗಳ ಒಳಮೀಸಲಾತಿಗೆ ಸಂಬAಸಿದAತೆ ನಾಗಮೋಹನ್ ದಾಸ್ ವರದಿ ಹೇಳಿರುವುದೇ ಬೇರೆ. ಸರಕಾರ ಹೊಸ ರೋಸ್ಟರ್ ಮಾಡಿರುವುದೇ ಬೇರೆ. ಎ,ಬಿ,ಸಿ ಎಂಬ ವರ್ಗಿಕರಣ ಮಾಡಿ, `ಎ’ ವರ್ಗಕ್ಕಷ್ಟೇ ಆದ್ಯತೆ ನೀಡಿ, ಉಳಿದ ವರ್ಗಗಳ ಕತ್ತು ಹಿಸುಕಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾ.೨೭ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾರಾ ಒತ್ತಡಕ್ಕೆ ಮಣಿದು, ರಾಜ್ಯ ಸರಕಾರ ತಪ್ಪು ಹೆಜ್ಜೆ ಇಟ್ಟು, ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಸಮುದಾಯಗಳಿಗೆ ಅನ್ಯಾಯ ಮಾಡಿದರೆ, ಸರಕಾರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಅರವಿಂದ ಲಿಂಬಾವಳಿ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದÀರು.
ಮಾಜಿ ಶಾಸಕ ಭೀಮಾ ನಾಯ್ಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸಲಾಗುತ್ತಿದೆ. ಎ ಬಿ ಸಿ ವರ್ಗೀಕರಣ ಮೀಸಲಾತಿಯಿಂದ ನಮ್ಮ ಸಮುದಾಯಗಳ ಮಕ್ಕಳಿಗೆ ಉದ್ಯೋಗ ಸಿಗುವುದಿಲ್ಲ, ಅನ್ಯಾಯವಾಗುತ್ತದೆ. ಹಾಗಾಗಿ, ಸರಕಾರ ನಮಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ, ನಾವು ಸಮುದಾಯದ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.
ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿ, ಕೇಂದ್ರ ಸರಕಾರ ನಡೆಸುವ ಜಾತಿ ಜನಗಣತಿಯ ವರದಿ ಬಂದ ಮೇಲೆ ಅಲ್ಲಿನ ವಸ್ತುನಿಷ್ಠ ಸಂಖ್ಯೆಗಳ ಆಧಾರದ ಮೇಲೆ ಒಳಮೀಸಲಾತಿಗೆ ಕ್ರಮವಹಿಸಲಿ. ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಸಮುದಾಯಗಳು ಏಕರೂಪದ ಸಂಸತತಿ ಹೊಂದಿರುವುದರಿAದ ಈ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡಲಿ ಎಂದು ಒತ್ತಾಯಿಸಿದರು.
ಭೋವಿ ಗುರುಪೀಠದ ಇಮ್ಮಡಿ ಶ್ರೀಸಿದರಾಮೇಶ್ವರ ಸ್ವಾಮೀಜಿ, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಾಸಕರಾದ ಚಂದ್ರಪ್ಪ, ಶಾರದ ಪರ‍್ಯಾನಾಯ್ಕ್, ಚಂದ್ರು ಲಮಾಣಿ, ಕೃಷ್ಣ ನಾಯ್ಕ, ಮಾನಪ್ಪ ವಜ್ಜಲ್, ಮಾಜಿ ಸಂಸದರಾದ ಉಮೇಶ್ ಜಾಧವ್, ಜನಾರ್ಧನಸ್ವಾಮಿ, ರೇವುನಾಯಕ್ ಬೆಳಮಗಿ, ಆದರ್ಶ್ ಯಲ್ಲಪ್ಪ, ಕಿರಣ್ ಕುಮಾರ್ ಕೊತ್ತಗೆರೆ, ಶ್ರೀಧರ್, ರುದ್ರಪುನಿತ್, ರವಿಮಾಕಳಿ, ಅನಂತ ನಾಯಕ್, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಸೇರಿದಂತೆ ನಾಲ್ಕು ಸಮುದಾಯದ ಹಿರಿಯ ಹೋರಾಟಗಾರರು, ಮುಖಂಡರು ಭಾಗವಹಿಸಿದ್ದರು.

ಹಕ್ಕೊತ್ತಾಯಗಳು:
•೫೪ ಸಾವಿರ ಹುದ್ದೆಗಳ ನೇಮಕಾತಿ ಮತ್ತು ಬ್ಯಾಕ್‌ಲಾಗ್ ಹಳೆಯ ಶೇ.೫೦ರ ಮೀಸಲಾತಿ ಅನ್ವಯಿಸಿ, ನೇಮಕಾತಿ ನಡೆಸಲು ಕೂಡಲೇ ಸೂಚನೆ ಹೊರಡಿಸಬೇಕು.
•೧೦೧ ಜಾತಿಗಳ ಐಕ್ಯತೆಗೆ, ಸಮಗ್ರತೆಗೆ ಧಕ್ಕೆ ಮಾಡುವ ನಾಗಮೋಹನ್‌ದಾಸ್ ವರದಿಯ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು. ಕೇಂದ್ರ ಸರಕಾರ ೨೦೨೭ರ ಸಮಗ್ರ ಜಾತಿ ಜನಗಣತಿ ನಡೆಸಲಿದ್ದು, ಈ ವಸ್ತುನಿಷ್ಠ ವರದಿಯನ್ನು ಆಧರಿಸಿ, ನಂತರ ಪ್ರಾಯೋಗಿಕ ದತ್ತಾಂಶ ಸಂಗ್ರಹಿಸಿ ನಂತರ ಒಳಮೀಸಲಾತಿಗೆ ಕ್ರಮವಹಿಸಬೇಕು.
•ಒಳಮೀಸಲಾತಿ ಅನ್ವಯದ ಈಗಿನ ರೋಸ್ಟರ್ ಪದ್ದತಿಯನ್ನು ಬದಲಾಯಿಸಬೇಕು. ಹಳೆಯ ರೋಸ್ಟರ್ ಅನ್ವಯ ನೇಮಕಾತಿ ಆಗಬೇಕು. ಪ.ಜಾತಿ ಮತ್ತು ಪ.ಪಂಗಡ ಜನಸಂಖ್ಯೆಗೆ ಅನುಗುಣವಾಗಿ ಕ್ರಮವಾಗಿ ಶೇ.೧೭-ಶೇ.೭ರಷ್ಟು ಮೀಸಲಾತಿ ಜಾರಿ ಮಾಡಲು ಸಂವಿಧಾನ ಶೆಡ್ಯೂಲ್-೯ರಲ್ಲಿ ಸೇರಿಸಲು ರಾಜ್ಯ ಸರಕಾರ ಸರ್ವಪಕ್ಷಗಳ ನಿಯೋಗದ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹೇರಬೇಕು.

Bangalore goverment karanataka ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತರಾತುರಿ ಫ್ರೀಡಂ ಪಾರ್ಕ್ನ ಬೆಂಗಳೂರು
Follow on Facebook Follow on Instagram
Share. Facebook Twitter WhatsApp Telegram
Previous Article16,000 ಕೋಟಿ ರೂ.ಗೆ ಆರ್‌ಸಿಬಿ ಮಾರಾಟ?
Next Article ಬೆಳ್ಳಿ-ಬಂಗಾರದ ದರದಲ್ಲಿ ಏರಿಳಿತ: ಇಂದಿನ ಮಾರುಕಟ್ಟೆ ದರ ಇಲ್ಲಿದೆ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಉದಯ: ಕನ್ನಡಿಗರ ಅಸ್ಮಿತೆ ಮತ್ತು ಪ್ರಾದೇಶಿಕ ಪಕ್ಷದ ಅನಿವಾರ್ಯತೆ

May 7, 2026

ರಾಸಲೀಲೆ ವಿಡಿಯೋ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ಅಮಾನತು ವಾಪಸ್.!

May 7, 2026

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ‘ಟಿವಿಕೆ’ ಅಲೆ: ದಳಪತಿಯನ್ನು ಗೆಲುವಿನತ್ತ ನಡಸಿದ ಆ 7 ಪ್ರಮುಖ ಗ್ಯಾರಂಟಿಗಳು ಇಲ್ಲಿವೆ!

May 4, 2026
Add A Comment
Leave A Reply Cancel Reply

Advertisement
Latest Posts

11/05/2026 ರ ನಿತ್ಯ ಭವಿಷ್ಯ

ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ

ಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ

10/05/2026 ರ ನಿತ್ಯ ಭವಿಷ್ಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.