ತರಾತುರಿ ಸಮೀಕ್ಷೆಯಲ್ಲಿ ಪ್ರಮಾದ ಎಸಗಲಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಮಂಗಳವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಹಮ್ಮಿಕೊಂಡ `ಬೆಂಗಳೂರು ಚಲೋ’ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಸಮುದಾಯಗಳ ರಾಜಕೀಯ ನಾಯಕರು, ಮುಖಂಡರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸಲು ಪಡಿತರ ಚೀಟಿಯನ್ನು ಒಂದು ಮಾನದಂಡವಾಗಿ ಬಳಸಲಾಗಿದೆ. ಆದರೆ ವರದಿಯಲ್ಲಿ ತಿಳಿಸಿರುವಂತೆ ಸುಮಾರು 7 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳು ಪಡಿತರ ಚೀಟಿಯೇ ಹೊಂದಿಲ್ಲ (ಪುಟ ಸಂಖ್ಯೆ 98) ಅಂದ ಮೇಲೆ ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸುವಲ್ಲಿ ಲೋಪವಾಗಿ ಸುಮಾರು 30 ಲಕ್ಷ ಜನರನ್ನು ಕೈ ಬಿಡಲಾಗಿದೆ ಹಾಗೂ ಭೋವಿ ಜನಾಂಗದ ಸುಮಾರು 3.5 ಲಕ್ಷ ಜನರನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ ಎಂದು ಹೇಳಿದರು.
ಭೋವಿ ಸಮಾಜವು 2026ರಲ್ಲಿ ಕೇಂದ್ರ ಸರ್ಕಾರ ನಡೆಸುವ ಜನಗಣತಿ ಆದಾರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳ ಆಧಾರದ ಮೇಲೆ ಒಳಮೀಸಲಾತಿಯನ್ನು ಕಲ್ಪಿಸಲು ಒತ್ತಾಯಿಸುತ್ತದೆ. ಹಾಗೂ ದೋಷ ಪೂರಿತ ನ್ಯಾ.ನಾಗಮೋಹನದಾಸ್ ವರದಿಯನ್ನು ತಿರಸ್ಕರಿಸಲು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಒಳಮೀಸಲಾತಿ ನೀಡುವ ಸಮಯದಲ್ಲಿ ನಿಖರವಾದ ವೈಜ್ಞಾನಿಕ ಅಂಕಿಅಂಶಗಳನ್ನು ಪಡೆದು ಭೋವಿ ಸಮಾಜವನ್ನು ಪ್ರತ್ಯೇಕ ಗುಂಪಾಗಿ ಸೃಜಿಸಲು ವಿನಂತಿಸುತ್ತೇವೆ ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳ ೧೦೧ ಜಾತಿಗಳ ಐಕ್ಯತೆಗೆ, ಸಮಗ್ರತೆಗೆ ಧಕ್ಕೆ ಮಾಡುವ ನ್ಯಾ.ನಾಗಮೋಹನ್‌ದಾಸ್ ವರದಿಯ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು ಎಂದು ‘ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ’ವು ಆಗ್ರಹಿಸಿದೆ.
ರಾಜ್ಯ ಸರಕಾರ ಮಾ.೨೭ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಸಂಬAಧ ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಸಮುದಾಯಗಳಿಗೆ ಅನ್ಯಾಯವೆಸಗುವ ರೀತಿಯಲ್ಲಿ ತಪ್ಪು ನಿರ್ಧಾರಗಳನ್ನು ಕೈಗೊಂಡರೆ ನಾಲ್ಕು ಸಮುದಾಯಗಳು ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸುತ್ತದೆ ಎಂದು ಒಕ್ಕೂಟದ ಮುಖಂಡರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ‘ಪರಿಶಿಷ್ಟ ಜಾತಿಯ ೧೦೧ ಸಮುದಾಯಗಳ ಒಳಮೀಸಲಾತಿಗೆ ಸಂಬAಸಿದAತೆ ನಾಗಮೋಹನ್ ದಾಸ್ ವರದಿ ಹೇಳಿರುವುದೇ ಬೇರೆ. ಸರಕಾರ ಹೊಸ ರೋಸ್ಟರ್ ಮಾಡಿರುವುದೇ ಬೇರೆ. ಎ,ಬಿ,ಸಿ ಎಂಬ ವರ್ಗಿಕರಣ ಮಾಡಿ, `ಎ’ ವರ್ಗಕ್ಕಷ್ಟೇ ಆದ್ಯತೆ ನೀಡಿ, ಉಳಿದ ವರ್ಗಗಳ ಕತ್ತು ಹಿಸುಕಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾ.೨೭ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾರಾ ಒತ್ತಡಕ್ಕೆ ಮಣಿದು, ರಾಜ್ಯ ಸರಕಾರ ತಪ್ಪು ಹೆಜ್ಜೆ ಇಟ್ಟು, ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಸಮುದಾಯಗಳಿಗೆ ಅನ್ಯಾಯ ಮಾಡಿದರೆ, ಸರಕಾರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಅರವಿಂದ ಲಿಂಬಾವಳಿ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದÀರು.
ಮಾಜಿ ಶಾಸಕ ಭೀಮಾ ನಾಯ್ಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸಲಾಗುತ್ತಿದೆ. ಎ ಬಿ ಸಿ ವರ್ಗೀಕರಣ ಮೀಸಲಾತಿಯಿಂದ ನಮ್ಮ ಸಮುದಾಯಗಳ ಮಕ್ಕಳಿಗೆ ಉದ್ಯೋಗ ಸಿಗುವುದಿಲ್ಲ, ಅನ್ಯಾಯವಾಗುತ್ತದೆ. ಹಾಗಾಗಿ, ಸರಕಾರ ನಮಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ, ನಾವು ಸಮುದಾಯದ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.
ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿ, ಕೇಂದ್ರ ಸರಕಾರ ನಡೆಸುವ ಜಾತಿ ಜನಗಣತಿಯ ವರದಿ ಬಂದ ಮೇಲೆ ಅಲ್ಲಿನ ವಸ್ತುನಿಷ್ಠ ಸಂಖ್ಯೆಗಳ ಆಧಾರದ ಮೇಲೆ ಒಳಮೀಸಲಾತಿಗೆ ಕ್ರಮವಹಿಸಲಿ. ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಸಮುದಾಯಗಳು ಏಕರೂಪದ ಸಂಸತತಿ ಹೊಂದಿರುವುದರಿAದ ಈ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡಲಿ ಎಂದು ಒತ್ತಾಯಿಸಿದರು.
ಭೋವಿ ಗುರುಪೀಠದ ಇಮ್ಮಡಿ ಶ್ರೀಸಿದರಾಮೇಶ್ವರ ಸ್ವಾಮೀಜಿ, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಾಸಕರಾದ ಚಂದ್ರಪ್ಪ, ಶಾರದ ಪರ‍್ಯಾನಾಯ್ಕ್, ಚಂದ್ರು ಲಮಾಣಿ, ಕೃಷ್ಣ ನಾಯ್ಕ, ಮಾನಪ್ಪ ವಜ್ಜಲ್, ಮಾಜಿ ಸಂಸದರಾದ ಉಮೇಶ್ ಜಾಧವ್, ಜನಾರ್ಧನಸ್ವಾಮಿ, ರೇವುನಾಯಕ್ ಬೆಳಮಗಿ, ಆದರ್ಶ್ ಯಲ್ಲಪ್ಪ, ಕಿರಣ್ ಕುಮಾರ್ ಕೊತ್ತಗೆರೆ, ಶ್ರೀಧರ್, ರುದ್ರಪುನಿತ್, ರವಿಮಾಕಳಿ, ಅನಂತ ನಾಯಕ್, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಸೇರಿದಂತೆ ನಾಲ್ಕು ಸಮುದಾಯದ ಹಿರಿಯ ಹೋರಾಟಗಾರರು, ಮುಖಂಡರು ಭಾಗವಹಿಸಿದ್ದರು.
ಹಕ್ಕೊತ್ತಾಯಗಳು:
•೫೪ ಸಾವಿರ ಹುದ್ದೆಗಳ ನೇಮಕಾತಿ ಮತ್ತು ಬ್ಯಾಕ್‌ಲಾಗ್ ಹಳೆಯ ಶೇ.೫೦ರ ಮೀಸಲಾತಿ ಅನ್ವಯಿಸಿ, ನೇಮಕಾತಿ ನಡೆಸಲು ಕೂಡಲೇ ಸೂಚನೆ ಹೊರಡಿಸಬೇಕು.
•೧೦೧ ಜಾತಿಗಳ ಐಕ್ಯತೆಗೆ, ಸಮಗ್ರತೆಗೆ ಧಕ್ಕೆ ಮಾಡುವ ನಾಗಮೋಹನ್‌ದಾಸ್ ವರದಿಯ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು. ಕೇಂದ್ರ ಸರಕಾರ ೨೦೨೭ರ ಸಮಗ್ರ ಜಾತಿ ಜನಗಣತಿ ನಡೆಸಲಿದ್ದು, ಈ ವಸ್ತುನಿಷ್ಠ ವರದಿಯನ್ನು ಆಧರಿಸಿ, ನಂತರ ಪ್ರಾಯೋಗಿಕ ದತ್ತಾಂಶ ಸಂಗ್ರಹಿಸಿ ನಂತರ ಒಳಮೀಸಲಾತಿಗೆ ಕ್ರಮವಹಿಸಬೇಕು.
•ಒಳಮೀಸಲಾತಿ ಅನ್ವಯದ ಈಗಿನ ರೋಸ್ಟರ್ ಪದ್ದತಿಯನ್ನು ಬದಲಾಯಿಸಬೇಕು. ಹಳೆಯ ರೋಸ್ಟರ್ ಅನ್ವಯ ನೇಮಕಾತಿ ಆಗಬೇಕು. ಪ.ಜಾತಿ ಮತ್ತು ಪ.ಪಂಗಡ ಜನಸಂಖ್ಯೆಗೆ ಅನುಗುಣವಾಗಿ ಕ್ರಮವಾಗಿ ಶೇ.೧೭-ಶೇ.೭ರಷ್ಟು ಮೀಸಲಾತಿ ಜಾರಿ ಮಾಡಲು ಸಂವಿಧಾನ ಶೆಡ್ಯೂಲ್-೯ರಲ್ಲಿ ಸೇರಿಸಲು ರಾಜ್ಯ ಸರಕಾರ ಸರ್ವಪಕ್ಷಗಳ ನಿಯೋಗದ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹೇರಬೇಕು.
