ಗೃಹ ಸಚಿವರ ಆಪ್ತನ ಮೇಲೆ ಅಟ್ಯಾಕ್; ಗೋವಾ ಗ್ಯಾಂಗ್ ಶಂಕೆ
ಅಂಕೋಲಾ: ಗೃಹ ಸಚಿವರ ಆಪ್ತ ಗೋಪಾಲಕೃಷ್ಣ ನಾಯಕ್ ಮೇಲೆ ದುಷ್ಕರ್ಮಿಗಳ ಗುಂಪು ಅಟ್ಯಾಕ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ನಡೆದಿದೆ.
ಚಾಕುವಿನಿಂದ ಹೊಟ್ಟೆ ಮತ್ತು ತಲೆಗೆ ಚಾಕು ಇರಿದು ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಅವರ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿಗೂ ಚಾಕು ಇರಿತವಾಗಿದೆ.
ಗೋವಾ ನೋಂದಣಿಯ ಕಾರ್‌ನಲ್ಲಿ ಬಂದ ಆರು ಅಪರಿಚಿತರು ಗೋಪಾಲಕೃಷ್ಣ ನಾಯಕ್ ಅವರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಕೋರರು ಚಾಕು ಬಳಸಿ ಹೊಟ್ಟೆ ಮತ್ತು ತಲೆಗೆ ಇರಿದಿದ್ದಾರೆ. ಗಾಯಗಳು ತೀವ್ರವಾಗಿರುವುದರಿಂದ ಗೋಪಾಲಕೃಷ್ಣ ನಾಯಕ್ ಅವರನ್ನು ಅಂಕೋಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜೊತೆಗಿದ್ದ ವ್ಯಕ್ತಿಗೂ ಚಾಕು ಇರಿತವಾಗಿದ್ದು, ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ತಕ್ಷಣ ತಲುಪಿದ ಅಂಕೋಲಾ ಪೊಲೀಸರು ಘಟನೆಯ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಬೆನ್ನಟ್ಟಿದ್ದಾರೆ.
