ಮತ್ತೆ ಲಾಕ್‌ಡೌನ್ ? ಮರುಕಳಿಸುತ್ತಾ ಕೊರೊನಾ ಕರಾಳ ದಿನ
ಟಿಒಬಿ ನ್ಯೂಸ್ ನವದೆಹಲಿ
ಕೊರೊನಾ ಕಾಲದ ಆ ಕರಾಳ ದಿನಗಳನ್ನು ನೆನಪಿಸುವಂತೆ ಮತ್ತೆ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ವದಂತಿಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿವೆ.
ವಾಟ್ಸಾಪ್ ಮತ್ತು ಫೇಸ್‌ಬುಕ್‌ನಂತಹ ಜಾಲತಾಣಗಳಲ್ಲಿ ಮತ್ತೆ ಶಾಲೆ-ಕಾಲೇಜುಗಳು ಬಂದ್ ಆಗಲಿವೆ, ರೈಲು ಮತ್ತು ವಿಮಾನ ಸಂಚಾರ ಸ್ಥಗಿತಗೊಳ್ಳಲಿದೆ ಎಂಬ ಸಂದೇಶಗಳು ವೈರಲ್ ಆಗಿವೆ. ಇದು ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲು ಶುರು ಮಾಡಿತ್ತು. ಈ ಸುದ್ದಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.
ಶಾಲೆ-ಕಾಲೇಜುಗಳನ್ನು ತಕ್ಷಣ ಬಂದ್ ಮಾಡಲಾಗುತ್ತಾ, ರೈಲು ಮತ್ತು ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಾ, ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂಬ ಚರ್ಚೆ ಶುರುವಾಗಿವೆ.
ದೇಶದಲ್ಲಿ ಸದ್ಯಕ್ಕೆ ಲಾಕ್‌ಡೌನ್ ಹೇರುವ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಅಥವಾ ಆಧಾರರಹಿತ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಸ್ವತಃ ಮುಂದೆ ಬಂದು ದೇಶದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ದೇಶದ ಆರ್ಥಿಕತೆ ಈಗಷ್ಟೇ ಸುಧಾರಿಸುತ್ತಿರುವಾಗ ಮತ್ತೆ ಕಠಿಣ ನಿರ್ಬಂಧಗಳನ್ನು ಹೇರುವ ಅವಶ್ಯಕತೆ ಇಲ್ಲ ಎಂಬುದು ಸರ್ಕಾರದ ನಿಲುವು ಎಂದು ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ.
