ಅಂದು ನಕ್ಕವರಿಗೆ ಇಂದು ಟಾಂಗ್ ; ಅಚ್ಚರಿ ಮೂಡಿಸಿದ ಮಲ್ಯ ಟ್ವೀಟ್
ಲಂಡನ್: ವಿಜಯ್ ಮಲ್ಯ ಅವರು ಆರ್‌ಸಿಬಿ ತಂಡದ ಭಾರೀ ಮೌಲ್ಯ ಏರಿಕೆಯನ್ನು ಉಲ್ಲೇಖಿಸಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
2008ರಲ್ಲಿ ಐಪಿಎಲ್ ಆರಂಭದ ವೇಳೆ 450 ಕೋಟಿ ರೂ. ನೀಡಿ ತಂಡವನ್ನು ಖರೀದಿಸಿದ್ದಾಗ ತಮ್ಮ ನಿರ್ಧಾರವನ್ನು ಹಲವರು ಹಾಸ್ಯ ಮಾಡಿದ್ದರು ಎಂದು ಮಲ್ಯ ನೆನೆಸಿಕೊಂಡಿದ್ದಾರೆ. ಅಂದು ನನ್ನ ಮೇಲೆ ನಕ್ಕವರು, ನನ್ನ ಹೂಡಿಕೆ ವ್ಯರ್ಥವಾಗುತ್ತದೆ ಎಂದು ಟೀಕಿಸಿದವರು, ಇಂದು ತಂಡದ ಮೌಲ್ಯ ₹16,500 ಕೋಟಿಗೆ ಏರಿರುವುದನ್ನು ನೋಡಿ ಮೌನವಾಗಿದ್ದಾರೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ‘ರಾಯಲ್ ಚಾಲೆಂಜರ್ಸ್’ ಎಂಬ ಹೆಸರು ತಮ್ಮ ಸಂಸ್ಥೆಯ ಮದ್ಯ ಬ್ರಾಂಡ್ ವಿಸ್ತರಣೆ ಉದ್ದೇಶದಿಂದ ಇಡಲಾಗಿತ್ತು ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.
ಹೊಸ ಮಾಲಿಕರಿಗೆ ಶುಭಾಶಯ ಕೋರಿದ ಮಲ್ಯ, ಆರ್‌ಸಿಬಿ ತಂಡದ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
