ಉಗ್ರ ದಾವೂದ್ ಹೆಸರಿದ್ದ ಬಸ್ ಚಿಕ್ಕಮಗಳೂರು ಪೊಲೀಸ್ ವಶಕ್ಕೆ
ಚಿಕ್ಕಮಗಳೂರು: ಭಯೋತ್ಪಾದಕ ದಾವೂದ್ ಇಬ್ರಾಹಿಂನನ್ನು ಹೀರೋ ರೀತಿ ಬಿಂಬಿಸಿ ಆತನ ಹೆಸರು ಹಾಗೂ ಹೊಗಳಿಕೆಯ ಬರಹದ ಸ್ಟಿಕ್ಟರ್‌ಗಳನ್ನು ಅಂಟಿಸಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ ಅನ್ನು ಹಿಡಿದು ಹಿಂದೂ ಸಂಘಟನೆಗಳ ಕಾಠ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿ ಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದಿದೆ. ತಮಿಳುನಾಡು ನೋಂದಣಿ ಬನ್ನೊಂದು ಗುರುವಾರ ಚಿಕ್ಕಮ ಗಳೂರಿಗೆ ಆಗಮಿಸಿತ್ತು. ಈ ಬಸ್ಸಿನ ಮೇಲೆ ಮುಂಬೈ ಸರಣಿ ಸ್ಪೋಟದ ಸಂಚುಕೋರ ದಾವೂದ್ ಹೆಸರು ಹಾಗೂ ಆತನನ್ನು ವೈಭವಿಕರಿಸುವ ಬರಹ ಇದ್ದವು. ಇದನ್ನು ಗಮನಿಸಿದ ಹಿಂದೂ ಸಂಘಟನೆ ಕಾರ್ಯಕರ್ತ ರು ನಗರದ ಎಸ್‌ಎಂಸಿ ಸರ್ಕಲ್ ಬಳಿ ಬಸ್ಸನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೊಲೀಸರು, ಬಸ್ಸನ್ನು ವಶಕ್ಕೆ ಪಡೆದರು.
