ಪ್ರೀ-ವೆಡ್ಡಿಂಗ್ ಶೂಟ್‌ಗೆ ವೇಳೆ ದಾಳಿ: ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ
ಟಿಒಬಿ ನ್ಯೂಸ್ ಸಕಲೇಶಪುರ
ಪ್ರಸಿದ್ಧ ಪ್ರವಾಸಿ ತಾಣವಾದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಬಳಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ದಾಳಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾ ಉಪಕರಣಗಳನ್ನು ಧ್ವಂಸಗೊಳಿಸಲಾಗಿದ್ದು, ಚಿನ್ನದ ಸರ ಕಳವು ಆರೋಪವೂ ಕೇಳಿಬಂದಿದೆ.
ಹಾಸನದ ಫೋಟೋಗ್ರಾಫರ್ ನವೀನಂದನ್ ಕೆ.ಎಸ್. (21) ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಸಹೋದ್ಯೋಗಿ ಚೇತನ್ ಹಾಗೂ ಮದುವೆಯಾಗಲಿರುವ ಜೋಡಿಯೊಂದಿಗೆ ಬೆಳಿಗ್ಗೆ 7:30ಕ್ಕೆ ಸ್ಥಳಕ್ಕೆ ತೆರಳಿದ್ದರು. ಸುಮಾರು 8 ಗಂಟೆ ವೇಳೆಗೆ ಬೆಂಗಳೂರಿನ ಮತ್ತೊಂದು ಫೋಟೋಗ್ರಫಿ ತಂಡ ಅಲ್ಲಿಗೆ ಆಗಮಿಸಿದ್ದು, ಈ ವೇಳೆ ಸ್ಥಳೀಯ ವ್ಯಕ್ತಿ ಅಭಿ ಜಗಳಕ್ಕೆ ಮುಂದಾಗಿದ್ದಾನೆ. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಗುಂಪು ದಾಳಿ, ಲೂಟಿ ಆರೋಪ
ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಭಿ ತನ್ನ 7-8 ಮಂದಿ ಸಹಚರರೊಂದಿಗೆ ಎರಡು ಕಾರುಗಳಲ್ಲಿ ಸ್ಥಳಕ್ಕೆ ಬಂದು ಫೋಟೋಗ್ರಾಫರ್‌ಗಳ ಮೇಲೆ ದಾಳಿ ನಡೆಸಿದ ಆರೋಪ ಇದೆ. ಮರದ ದೊಣ್ಣೆ ಮತ್ತು ಕಲ್ಲುಗಳನ್ನು ಬಳಸಿ ಹಲ್ಲೆ ನಡೆಸಿ, ನವೀನಂದನ್ ಅವರ ಕುತ್ತಿಗೆಗೆ ಕೈ ಹಾಕಿ ಉಸಿರುಗಟ್ಟಿಸಲು ಯತ್ನಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಜೊತೆಗೆ ಅವರ ಚಿನ್ನದ ಸರ ಕಿತ್ತುಕೊಂಡಿರುವುದಾಗಿ ಆರೋಪಿಸಲಾಗಿದೆ.
ದಾಳಿಯಲ್ಲಿ ಸುಮಾರು ₹5 ಲಕ್ಷ ಮೌಲ್ಯದ ಕ್ಯಾಮೆರಾ ಮತ್ತು ಲೆನ್ಸ್‌ಗಳನ್ನು ಪುಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ದಾಖಲಾತಿ, ಪ್ರಕರಣ ದಾಖಲು
ಗಾಯಗೊಂಡ ಫೋಟೋಗ್ರಾಫರ್‌ಗಳು ಸಕಲೇಶಪುರ ಸರ್ಕಾರಿ ಆಸ್ಪತ್ರೆ ಹಾಗೂ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಂಟು ಮಂದಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಶೋಧ ಕಾರ್ಯ
ಪ್ರಕರಣ ಸಂಬಂಧ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರವಾಸಿ ತಾಣಗಳಲ್ಲಿ ಫೋಟೋಶೂಟ್ ಮಾಡುವವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಛಾಯಾಗ್ರಾಹಕರು ಆಗ್ರಹಿಸಿದ್ದಾರೆ.
