ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
ಪತಿ ಜತೆ ವಿಡಿಯೋ ಕಾಲ್ ವೇಳೆಯೇ ನೇಣಿಗೆ ಶರಣು
ಚೆನ್ನೈ: ತಮಿಳಿನ ಕಿರುತೆರೆ ನಟಿ, ಸುಭಾಷಿಣಿ ಅಲಿಯಾಸ್ ಸಾಲ್ವಬಾಲಾ (36) ಪತಿಯ ಜತೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿ ದ್ದಾಗಲೇ ನೇಣು ಬಿಗಿದುಕೊಂಡು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಕೌಟುಂಬಿಕ ಕಲಹವೇ ದುಡುಕಿನ ನಿರ್ಧಾರಕ್ಕೆ ಕಾರಣವಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಶ್ರೀಲಂಕಾ ಮೂಲದ ಸುಭಾಷಿಣಿ, ಬೆಂಗಳೂರಿನ ಬಿಪಿನ್ ಚಂದ್ರ ಎನ್ನುವವರನ್ನು 2 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇಬ್ಬರೂ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ಈ ಮಧ್ಯೆ ಸುಭಾಷಿಣಿ ಧಾರಾವಾಹಿ ಚಿತ್ರೀಕರಣಕ್ಕಾಗಿ ಚೆನ್ನೈಗೆ
ತೆರಳಿ ಪೋರೂರು ಬಳಿಯ ಅಯ್ಯಪ್ಪಂತಂಗಲ್ನ ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದರು.
ಭಾನುವಾರಪತಿಯ ಜತೆ ಜತೆವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದಾಗ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ನಟಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಪತಿ ಕೂಡಲೇ ಅಪಾರ್ಟ್ಮೆಂಟ್ ಭದ್ರತಾ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ನಟಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರೊಳಗೆ ಸುಭಾಷಿಣಿಸಾವನ್ನಪ್ಪಿದ್ದರು. ಎಂದು ತಿಳಿದುಬಂದಿದೆ.
