ವಿವಾಹಿತೆಗೆ ಪ್ರೇಮಿ ಜೊತೆ ಹೋಗಲು ಕೋರ್ಟ್ ಅಸ್ತು
40 ವರ್ಷದ ಪತಿ ಬೇಡ ಎಂದಿದ್ದ 19ರ ತರುಣಿ
ಭೋಪಾಲ್: ‘ನನ್ನ ಗಂಡನಿಗೆ 40 ವರ್ಷ. ನನಗೆ 19 ವರ್ಷ. 21 ವರ್ಷ ವಯಸ್ಸಿನ ಅಂತರದ ಕಾರಣ ನಮ್ಮಿಬ್ಬರ ದಾಂಪತ್ಯ ಸರಿ ಹೊಂದುತ್ತಿಲ್ಲ. ಹಾಗಾಗಿ ಪ್ರಿಯತಮನ ಜೊತೆ ಜೀವನ ಮಾಡುತ್ತೇನೆ’ ಎಂದ ಯುವತಿಗೆ ಮಧ್ಯಪ್ರದೇಶ ಗಂಡನನ್ನು ಹೈಕೋರ್ಟ್ ಬಿಟ್ಟು ಪ್ರೇಮಿ ಜೊತೆ ತೆರಳಲು ಅನುವು ಮಾಡಿಕೊಟ್ಟ ಪ್ರಸಂಗ ನಡೆದಿದೆ.
ಏನಿದು ಪ್ರಕರಣ?: ವರ್ಷದ ಹಿಂದೆ 40 ವರ್ಷದ ಅವಧೇಶ್ ಎಂಬಾತ 19ರ ‘ಯುವತಿಯ ಜೊತೆ ವಿವಾಹವಾಗಿದ್ದ. ಇತ್ತೀಚೆಗೆ, ಅನುಜ್ ಕುಮಾರ್ ಎಂಬಾತ ತನ್ನ ಪತ್ನಿಯನ್ನು ಅಕ್ರಮವಾಗಿ ಸೆರೆಹಿಡಿ ದಿಟ್ಟುಕೊಂಡಿದ್ದಾನೆ ಎಂದು ಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಕೋರ್ಟ್ ಆದೇಶದಂತೆ ಪೊಲೀಸರು
ಯುವತಿಯನ್ನು ಹುಡುಕಿ ತಂದಿದ್ದಾರೆ.
ವಿಚಾರಣೆ ವೇಳೆ ಯುವತಿ ತನ್ನ ಪತಿ. ಪಾಲಕರು ಹಾಗೂ ಪ್ರೇಮಿ ಉಪಸ್ಥಿತರಿರುವಾಗಲೇ, ‘ನನ್ನ ಮತ್ತು ಗಂಡನ ನಡುವೆ 21 ವರ್ಷ ಅಂತರವಿದೆ. ನಮ್ಮಿಬ್ಬರ ಸಂಬಂಧ ಸರಿ ಬರುತ್ತಿಲ್ಲ. ಆತನ ಜೊ ನಾನು ಖುಷಿಯಾಗಿಲ್ಲ. ಹಾಗಾಗಿ ಪ್ರಿಯತಮನ ಜೊತೆಗೇ ಬಾಳುತ್ತೇನೆ’ ಎಂದಿದ್ದಾಳೆ. d
ಯುವತಿಯ ವಾದವನ್ನು ಆಲಿಸಿದ ಪೀಠ, ‘ಅವಳು ಯಾವುದೇ ಕಾನೂನು ಬಾಹಿರ ನಿರ್ಬಂಧದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ. ವಯಸ್ಕ ವ್ಯಕ್ತಿಗೆ ಎಲ್ಲಿ ಮತ್ತು ಯಾರೊಂದಿಗೆ ವಾಸಿಸಬೇಕೆಂದು ನಿರ್ಧರ ಸುವ ಹಕ್ಕಿದೆ. ಆಕೆ ಪ್ರಿಯತಮನ ಜೊತೆ ಬದುಕಬಹುದು’ ಎಂದು ತೀರ್ಪಿತ್ತಿದೆ
