Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ಕುಸಿತವಾಗುತ್ತಿದೆ ಹೆಣ್ಣು ಮಕ್ಕಳ ಸಂಖ್ಯೆ; ಗಡಿ ಭಾಗದ ಮೇಲೆ ನಿಗಾ
ಮುಖಪುಟ

ಕುಸಿತವಾಗುತ್ತಿದೆ ಹೆಣ್ಣು ಮಕ್ಕಳ ಸಂಖ್ಯೆ; ಗಡಿ ಭಾಗದ ಮೇಲೆ ನಿಗಾ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 28, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಕುಸಿತವಾಗುತ್ತಿದೆ ಹೆಣ್ಣು ಮಕ್ಕಳ ಸಂಖ್ಯೆ; ಗಡಿ ಭಾಗದ ಮೇಲೆ ನಿಗಾ

ಟಿಒಬಿ ನ್ಯೂಸ್ ಚಿತ್ರದುರ್ಗ

ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಮತ್ತು ಲಿಂಗಾನುಪಾತವನ್ನು ಸುಧಾರಿಸಲು ಪಿಸಿಪಿಎನ್‍ಡಿಟಿ ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪಿಸಿಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಪರಿಶೀಲನಾ ಮತ್ತು ತಪಾಸಣಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಜಿಲ್ಲೆಯ ಲಿಂಗ ಅನುಪಾತದ ಏರಿಳಿತದ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಪಿಸಿಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷೆ ಡಾ.ಎಸ್.ಸೌಮ್ಯ ಮಾತನಾಡಿ, ಜಿಲ್ಲೆಯ ಪರಶುರಾಂಪುರ ಮತ್ತು ಮೊಳಕಾಲ್ಮೂರು ಭಾಗದ ಕೆಲವು ಗರ್ಭಿಣಿಯರು ಲಿಂಗ ಪತ್ತೆ ಪರೀಕ್ಷೆಗಾಗಿ ಪಕ್ಕದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗಡಿ ಪ್ರದೇಶಗಳಿಗೆ ಹೋಗಿ, ಅಲ್ಲಿನ ಕೆಲವು ಅನಧಿಕೃತ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಂತಹ ಪ್ರಕರಣಗಳನ್ನು ಪತ್ತೆಹಚ್ಚಲು ವಿಶೇಷ ನಿಗಾ ಇಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ವಿಶೇಷವಾಗಿ ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸಮಿತಿ ಸದಸ್ಯೆ ಕೆ.ಪಿ.ಮೀನಾಕ್ಷಿ, ಗರ್ಭಾವಸ್ಥೆಯ ಆರಂಭದಿಂದಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಗಾ ವಹಿಸಬೇಕು. ಆಶಾ ಕಾರ್ಯಕರ್ತೆಯರು ಗರ್ಭಿಣಿಯರ ನೋಂದಣಿ ಹಾಗೂ ಅವರ ಚಲನವಲನದ ಮೇಲೆ ನಿರಂತರ ನಿಗಾ ಇಡಬೇಕು ಎಂದು ತಿಳಿಸಿದರು.

ಲಿಂಗ ಪತ್ತೆ ಹಚ್ಚುವ ಜಾಲದ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಸರ್ಕಾರದಿಂದ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸದಸ್ಯೆ ಗಾಯತ್ರಿ ಶಿವರಾಂ ಅಭಿಪ್ರಾಯಪಟ್ಟರು.

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಪಿಸಿಪಿಎನ್ ಡಿಟಿ ಕಾಯ್ದೆಯನ್ನು ಜಿಲ್ಲೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಪ್ರಚುರ ಪಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿವೆಯೇ ಮತ್ತು ಅಗತ್ಯ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುತ್ತಿವೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕು. ಎಲ್ಲಿ ಅತಿ ಹೆಚ್ಚು ಸ್ಕ್ಯಾನಿಂಗ್‍ಗಳು ನಡೆಯುತ್ತಿವೆಯೋ ಅಂತಹ ಕೇಂದ್ರಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡು ಅನಿರೀಕ್ಷಿತ ತಪಾಸಣೆ ನಡೆಸಬೇಕು ಎಂದು ಸಮಿತಿ ಸದಸ್ಯ ಉಮೇಶ್ ಸಲಹೆ ನೀಡಿದರು.

ರಾಜ್ಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾದ ವಿಶೇಷ ಸಾಫ್ಟ್‍ವೇರ್ ಮೂಲಕ ಕಳೆದ ಮೂರು ವರ್ಷಗಳ ದತ್ತಾಂಶವನ್ನು ವಿಶ್ಲೇಷಿಸಲಾಗುತ್ತಿದೆ. ಈ ತಂತ್ರಜ್ಞಾನವು ಅಕ್ರಮ ಸ್ಕ್ಯಾನಿಂಗ್ ನಡೆಯುವ ಸಾಧ್ಯತೆ ಇರುವ ರೆಡ್ ಮಾರ್ಕ್ ಪ್ರದೇಶಗಳನ್ನು ಗುರುತಿಸಲಿದ್ದು, ಅಂತಹ ಕೇಂದ್ರಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಿಸಿಪಿಎನ್‍ಡಿಟಿ ಪರಿಶೀಲನಾ ಮತ್ತು ತಪಾಸಣಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಡಿ.ರೇಖಾ, ಸದಸ್ಯರಾದ ಡಾ.ಕೆ.ಜಿ.ಸತ್ಯನಾರಾಯಣ, ಕೆ.ಮೀನಾಕ್ಷಿ, ಪಿಸಿಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ಎಸ್.ಸೌಮ್ಯ, ಸದಸ್ಯರಾದ ಮಕ್ಕಳ ತಜ್ಞ ಡಾ.ದೇವರಾಜ್, ಸತ್ಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ನ ಡಾ.ಸತ್ಯನಾರಾಯಣ, ವಕೀಲ ಎಂ.ಉಮೇಶ್, ಸಮಾಜ ಕಾರ್ಯಕರ್ತೆ ಗಾಯತ್ರಿ ಶಿವರಾಂ ಇದ್ದರು.

===========

Follow on Facebook Follow on Instagram
Share. Facebook Twitter WhatsApp Telegram
Previous Articleನಿಮಗೆ ನಿವೇಶನ ಬೇಕೆ? ಕೂಡಲೇ ಅರ್ಜಿ ಸಲ್ಲಿಸಿ
Next Article ಅಗ್ನಿಬನ್ನಿರಾಯ ಜಯಂತಿ; ಲಾಲ್‍ಬಾಗ್ ನಿರ್ಮಾಣದಲ್ಲಿ ತಿಗಳ ಸಮುದಾಯದ ಪಾತ್ರ ಅನನ್ಯ 
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಮೋಟಾರು ವಾಹನ ನೋಂದಣಿ ತೆರಿಗೆ ಇಳಿಸುವ ಬಿಲ್‌ ಅಂಗೀಕಾರ

March 27, 2026

ದಕ್ಷಿಣದಿಂದ ದೂರವಾದ್ರ ಜಮೀರ್ ?; ನಡೆಯುತ್ತಾ ಒಳ ತಂತ್ರಗಾರಿಕೆ

March 27, 2026

ಸಮರ್ಥ್ ಪಟ್ಟಾಭಿಷೇಕಕ್ಕೆ ‘ಕೈ’ ಪಟ್ಟು;  ಶುರುವಾಯ್ತು ಮೇಜರ್ ಸರ್ಜರಿ

March 27, 2026
Add A Comment
Leave A Reply Cancel Reply

Advertisement
Latest Posts

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.