ಜನಗಣತಿ: ಏಪ್ರಿಲ್ 1 ರಿಂದ ಸ್ವಯಂ ಮಾಹಿತಿ ಸಲ್ಲಿಸಿ
ಚಿತ್ರದುರ್ಗ: ಭಾರತ ಜನಗಣತಿ ಕಾರ್ಯ ಏ.1 ರಿಂದ 15 ರವರೆಗೆ ಸ್ವಯಂ ಗಣತಿ ನಡೆಯಲಿದ್ದು, ಸಾರ್ವಜನಿಕರು ತಮ್ಮ ಕುಟುಂಬದ ವಿವರಗಳನ್ನು ಆನ್‍ಲೈನ್ ಮೂಲಕ ಸ್ವಯಂ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ವೆಬ್‍ಸೈಟ್ www.se.census.gov.in ಗೆ ಭೇಟಿ ನೀಡಿ ತಮ್ಮ ಕುಟುಂಬದ ವಿವರಗಳನ್ನು ಆನ್‍ಲೈನ್ ಪೋರ್ಟಲ್ ಮೂಲಕ ಭರ್ತಿ ಮಾಡಬಹುದಾಗಿದೆ.
ಸಾರ್ವಜನಿಕರು ನೀಡುವ ಎಲ್ಲಾ ವಿವರಗಳನ್ನು ಅತ್ಯಂತ ಗೌಪ್ಯವಾಗಿ ಇಡಲಾಗುವುದು. ದೇಶದ ಸಮಗ್ರ ಅಭಿವೃದ್ಧಿ ಹಾಗೂ ಭವಿಷ್ಯದ ಯೋಜನೆಗಳ ರೂಪಿಸುವಿಕೆಯಲ್ಲಿ ಜನಗಣತಿಯು ಪ್ರಮುಖ ಪಾತ್ರ ವಹಿಸುವುದರಿಂದ, ನಗರದ ನಾಗರಿಕರು ನಿಗದಿತ ಅವಧಿಯೊಳಗೆ ಆನ್‍ಲೈನ್ ಮೂಲಕ ಮಾಹಿತಿ ನೀಡಿ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಸ್ .ಲಕ್ಷ್ಮಿ ತಿಳಿಸಿದ್ದಾರೆ.
