Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಎ.ಎಚ್.ಭಾನುಮೂರ್ತಿ ನಿಧನ 

ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಡಿಜಿಟಲ್ ಜಗತ್ತು ಅವಕಾಶಗಳ ಮಹಾಸಾಗರ; ಬಳಕೆಯಲ್ಲಿ ಇರಲಿ ಎಚ್ಚರ
ಚಿತ್ರದುರ್ಗ

ಡಿಜಿಟಲ್ ಜಗತ್ತು ಅವಕಾಶಗಳ ಮಹಾಸಾಗರ; ಬಳಕೆಯಲ್ಲಿ ಇರಲಿ ಎಚ್ಚರ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 1, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಡಿಜಿಟಲ್ ಜಗತ್ತು ಅವಕಾಶಗಳ ಮಹಾಸಾಗರ; ಬಳಕೆಯಲ್ಲಿ ಇರಲಿ ಎಚ್ಚರ

ಟಿಒಬಿ ನ್ಯೂಸ್ ಚಿತ್ರದುರ್ಗ

ತಂತ್ರಜ್ಞಾನವು ಇಂದಿನ ಪೀಳಿಗೆಗೆ ಅಂತ್ಯವಿಲ್ಲದ ಅವಕಾಶಗಳ ಬಾಗಿಲು ತೆರೆದಿದ್ದರೂ, ಅದರ ಬಳಕೆಯಲ್ಲಿ ವಿವೇಕ ಕಳೆದುಕೊಂಡರೆ ಅಪಾಯ ಅನಿವಾರ್ಯ ಎಂದು ಬಿಐಇಟಿ ಸಹಾಯಕ ಪ್ರಾಧ್ಯಾಪಕ ಎಚ್‌.ಸಿ. ಭರತ್‌ ಹೇಳಿದರು.

ನಗರದ ಡಾನ್ ಬೋಸ್ಕೋ ಪದವಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ಕಾಲೇಜು ಟೆಕ್ನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುಗದಲ್ಲಿ ಕ್ಷಣಾರ್ಧದಲ್ಲಿ ಬೇಕಾದ ಮಾಹಿತಿಯನ್ನು ಅಂತರ್ಜಾಲ ಒದಗಿಸುತ್ತಿದೆ. ಆದರೆ ಪ್ರತಿಯೊಂದು ವಿಚಾರಕ್ಕೂ ಅಂತರ್ಜಾಲದ ಮೇಲೆ ಮಾತ್ರ ಅವಲಂಬಿಸದೆ, ಓದುವ, ಆಲೋಚಿಸುವ ಮತ್ತು ವಿಮರ್ಶಾತ್ಮಕವಾಗಿ ಚಿಂತಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣಗಳ ಪ್ರಭಾವ ಆಧುನಿಕ ಜೀವನದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಅವಕಾಶಗಳ ಹೊಸ ದಾರಿಗಳನ್ನು ತೆರೆದರೂ, ಅದರ ಸರಿಯಾದ ಆಯ್ಕೆ ಮತ್ತು ಬಳಕೆ ವ್ಯಕ್ತಿಯ ವಿವೇಚನೆಯಲ್ಲಿ ಇರಬೇಕು. ಡಿಜಿಟಲ್ ಜಗತ್ತನ್ನು ಸುರಕ್ಷಿತ, ಸಕಾರಾತ್ಮಕ ಹಾಗೂ ಅರ್ಥಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಅದು ಜೀವನಕ್ಕೆ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹೇಮಾ ಸುರೇಶ್ ಯರಗುಂಟೆ, ಅಂತರ್ಜಾಲವು ನಮ್ಮ ನಿತ್ಯದ ಸಂವಹನ, ಕಲಿಕೆ ಮತ್ತು ಬೆಳವಣಿಗೆಯ ವಿಧಾನವನ್ನು ಸಂಪೂರ್ಣವಾಗಿ ಬದಲಿಸಿದೆ. ಇದು ವಿಶ್ವದ ಜನರನ್ನು ಪರಸ್ಪರ ಸಂಪರ್ಕಿಸುವುದರ ಜೊತೆಗೆ ಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವ ಸೇತುವೆಯಾಗಿದೆ ಎಂದು ತಿಳಿಸಿದರು.

ಉತ್ತಮ ಮತ್ತು ಹೆಚ್ಚು ಮಾಹಿತಿಯುಕ್ತ ಭವಿಷ್ಯ ನಿರ್ಮಾಣಕ್ಕೆ ತಂತ್ರಜ್ಞಾನ ಪ್ರಮುಖ ಸಾಧನವಾಗಿದ್ದು, ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಫಾ. ಬೆನ್ನಿ ಕ್ರಿಸ್ತುದಾಸ್, ಆಡಳಿತಾಧಿಕಾರಿ ಫಾ. ಫೆಲಿಕ್ಸ್ ಸೆರೋವೋ, ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಎನ್. ಧನಕೋಟಿ, ಉಪನ್ಯಾಸಕಿ ಎಂ.ಎಸ್‌. ಸೌಮ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

chitradurga Digital Don Bosco goverment karanataka ಕರ್ನಾಟಕ ಚಿತ್ರದುರ್ಗ ಚುನಾವಣೆ
Follow on Facebook Follow on Instagram
Share. Facebook Twitter WhatsApp Telegram
Previous Articleಸರ್ಕಾರಿ ನೌಕರರೇ ನಿಮಗೊಂದು ಸಿಹಿ ಸುದ್ದಿ; ಬದಲಾಯ್ತು ಕಚೇರಿ ಸಮಯ, ಕೇವಲ ಐದೂವರೆ ತಾಸು ಕೆಲಸ !
Next Article ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 

April 1, 2026

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

April 1, 2026

ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ

April 1, 2026
Add A Comment
Leave A Reply Cancel Reply

Advertisement
Latest Posts

ಎ.ಎಚ್.ಭಾನುಮೂರ್ತಿ ನಿಧನ 

ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ 

ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ

ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.