ಭರಮಸಾಗರದಲ್ಲಿ ಆರ್ಯವೈಶ್ಯ ಸಮಾಜಕ್ಕೆ ಸೌಲಭ್ಯಗಳ ಕುರಿತು ಜಾಗೃತಿ ಸಭೆ
ಚಿತ್ರದುರ್ಗ ಜಿಲ್ಲೆ ಭರಮಸಾಗರದಲ್ಲಿ ಕರ್ನಾಟಕ ಸರ್ಕಾರದ ಆರ್ಯವೈಶ್ಯ ಅಭಿವೃದ್ಧಿ ನಿಗಮದ ವತಿಯಿಂದ ಸಮಾಜದ ಸೌಲಭ್ಯಗಳ ಕುರಿತು ಜಾಗೃತಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷರಾದ ರಾಮ್ ಪ್ರಸಾದ್ ಅವರು, ಕಾಂಗ್ರೆಸ್ ಸರ್ಕಾರವು ಆರ್ಯವೈಶ್ಯ ನಿಗಮದ ಮೂಲಕ ಸಮಾಜಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದ್ದು, ಅವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ನಿಗಮದ ಅಧ್ಯಕ್ಷರಾದ ರಾಮಪ್ರಸಾದ್ ಕೆ.ವಿ., ಆರ್ಯವೈಶ್ಯ ಮಹಾಸಭೆಯ ಸೀ ಮೆಂಬರ್ ವೆಂಕಟೇಶ್ ಎಸ್.ಎಂ.ಎಲ್., ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇವರುಗಳು ಆರ್ಯ ವೈಶ್ಯ ಸಮಾಜದ ಸದಸ್ಯರನ್ನು ಒಗ್ಗೂಡಿಸಿ, ನಿಗಮದಿಂದ ದೊರೆಯುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖ ಮುಖಂಡರಾದ ಬಿ.ಸಿ. ಹರೀಶ್, ಬಿ.ಆರ್. ರಾಮಕೃಷ್ಣ ಶೆಟ್ಟಿ, ಕೆ.ವೈ. ಮೃತ್ಯುಂಜಯ ಶೆಟ್ಟಿ, ಬಿ.ಆರ್. ಶ್ರೀಧರ ಶೆಟ್ಟಿ, ಬಿ.ಜೆ. ಜನಾರ್ಧನ ಶೆಟ್ಟಿ ಸೇರಿದಂತೆ ಅನೇಕ ಯುವ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಸಮಾಜದ ಅಭಿವೃದ್ಧಿಗಾಗಿ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಸಭೆಯಲ್ಲಿ ಒತ್ತಿಹೇಳಲಾಯಿತು.
