ಮನುಷ್ಯತ್ವ ಮೆರೆದ ಮಂಗ: ಆಹಾರ ಹಾಕುತ್ತಿದ್ದ ವೃದ್ದೆಯ ಶವ ತಬ್ಬಿಕೊಂಡು ಮರುಗಿದ ಮನಕಲಕುವ ಘಟನೆ
ರಾಮನಗರ: ಇಂದಿನ ಸ್ವಾರ್ಥಪರ ಸಮಾಜದಲ್ಲಿ ಸಹಾಯ ಮಾಡಿದವರನ್ನೇ ಮರೆತು ಬಿಡುವ ಘಟನೆಗಳು ಹೆಚ್ಚುತ್ತಿರುವಾಗ, ಮಂಗವೊಂದು ತೋರಿದ ಮಾನವೀಯತೆ ಎಲ್ಲರ ಮನಗಳನ್ನು ಸ್ಪರ್ಶಿಸಿದೆ.
ಜಿಲ್ಲೆಯ ರಾಯರದೊಡ್ಡಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ನಿವಾಸಿ ಪಾರ್ವತಮ್ಮ (85) ತಮ್ಮ ಮನೆ ಬಳಿ ಆಗಾಗ ಬರುತ್ತಿದ್ದ ಮಂಗಗಳಿಗೆ ನಿಯಮಿತವಾಗಿ ಆಹಾರ ನೀಡುತ್ತಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಸೋಮವಾರ ರಾತ್ರಿ ನಿಧನರಾಗಿದ್ದು, ಅವರ ಮೃತದೇಹವನ್ನು ಮನೆಗೆ ತರಲಾಗುತ್ತಿದ್ದಂತೆ, ಅವರಿಗೆ ಪರಿಚಿತವಾಗಿದ್ದ ಮಂಗವೂ ಅಲ್ಲಿ ಹಾಜರಾಯಿತು.
ಮಂಗವು ಪಾರ್ವತಮ್ಮ ಅವರ ಪಾರ್ಥಿವ ಶರೀರವನ್ನು ತಬ್ಬಿಕೊಂಡು, ಮುತ್ತಿಕ್ಕಿ, ಕೆಲ ಹೊತ್ತು ಅಲ್ಲಿಯೇ ಕುಳಿತುಕೊಂಡು ಮರುಗಿದ ದೃಶ್ಯ ಕಂಡು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಣ್ಣೀರಿಟ್ಟರು.
ಈ ಘಟನೆ ಮನುಷ್ಯರಿಗಿಂತಲೂ ಪ್ರಾಣಿಗಳಲ್ಲಿರುವ ನಿಷ್ಠೆ, ಕೃತಜ್ಞತೆ ಮತ್ತು ಪ್ರೀತಿ ಎಷ್ಟು ಆಳವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇದನು ಓದಿ
ಇದನು ಓದಿ
ಮನುಷ್ಯತ್ವ ಮೆರೆದ ಮಂಗ: ಆಹಾರ ಹಾಕುತ್ತಿದ್ದ ವೃದ್ದೆಯ ಶವ ತಬ್ಬಿಕೊಂಡು ಮರುಗಿದ ಮನಕಲಕುವ ಘಟನೆ
https://timesofbayaluseeme.com/humanity/
ನಿತ್ಯ ಭವಿಷ್ಯ – 01/04/2026
https://timesofbayaluseeme.com/1-4-26-daily-astrologer/
