ರಶ್ಮಿಕಾ ಮಂದಣ್ಣಗೆ ತಮ್ಮ ಮನೆ ಉಡುಗೊರೆಯಾಗಿ ನೀಡಿದ ತಂದೆ
ವಿರಾಜಪೇಟೆ: ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ
ಅವರಿಗೆ ಅವರ ತಂದೆ ಮದನ್ ಮಂದಣ್ಣ ಅವರು ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ್ದಾರೆ. ಕೊಡಗು ಮೂಲದ ಚಲನಚಿತ್ರ ನಟಿ ರಶ್ಮಿಕಾ ಅವರು ಇತ್ತೀಚಿಗಷ್ಟೇ ನಟ ವಿಜಯ ದೇವರಕೊಂಡ ಅವರನ್ನು ವರಿಸಿದ್ದರು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂ ಕಿನ ಕುಕ್ಕೂರು ಗ್ರಾಮದ ನಿವಾಸಿ, ವಿರಾಜ ಪೇಟೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮದನ್ ಮತ್ತು ಪತ್ನಿ ಸುಮನ್ ಮಂದಣ್ಣ ಅವರ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ 142/1 ಮತ್ತು 142/2 ಐಷಾರಾಮಿ (ಸೆರಿನಿಟಿ) ಮನೆಯನ್ನು ವಿರಾಜಪೇಟೆ ಉಪನೋಂದಣಿ ಕಚೇರಿಯಲ್ಲಿ ಮಗಳು ರಶ್ಮಿಕಾ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ
