Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮ

ಇದೀಗ 17 ಏಪ್ರಿಲ್ 2026 (ಶುಕ್ರವಾರ) ರ ವಿಸ್ತೃತ ನಿತ್ಯ ಭವಿಷ್ಯ

ಚಿತ್ರದುರ್ಗ ನಗರದ ಮುಖ್ಯರಸ್ತೆ ಒತ್ತುವರಿ ತೆರವಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕಟ್ಟುನಿಟ್ಟಿನ ಸೂಚನೆ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮ
ರಾಜ್ಯ

ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮ

Times Of Bayaluseeme StaffBy Times Of Bayaluseeme StaffApril 17, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
40th anniversary celebration of Karnataka Lokayukta at Vidhana Soudha, Bengaluru.
Share
WhatsApp Twitter Facebook Telegram

ಬೆಂಗಳೂರು, ಏಪ್ರಿಲ್ 17 :ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆಡಳಿತ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ‘ಕರ್ನಾಟಕ ಲೋಕಾಯುಕ್ತ’ ಸಂಸ್ಥೆಯು ತನ್ನ ಯಶಸ್ವಿ ನಾಲ್ಕು ದಶಕಗಳ ಪಯಣವನ್ನು ಪೂರೈಸಿದ್ದು, ಈ ಅಂಗವಾಗಿ 2026ರ ಏಪ್ರಿಲ್ 18, ಶನಿವಾರದಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

 

ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ. ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಲೋಕಾಯುಕ್ತರಾದ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತರುಗಳಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರ ಘನ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಜರುಗಲಿದೆ.

ಈ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರು ಲೋಕಾಯುಕ್ತ ನಿಯತಕಾಲಿಕೆಯನ್ನು ಬಿಡುಗಡೆ ಮಾಡುವ ಜೊತೆಗೆ ಚುನಾಯಿತ ಪ್ರತಿನಿಧಿಗಳ ಆಸ್ತಿ ಮತ್ತು ಹೊಣೆಗಾರಿಕೆಗಳ ಹೊಸ ಪೋರ್ಟಲ್ ಹಾಗೂ ಆನ್‍ಲೈನ್ ತನಿಖಾ ಮಾಡ್ಯೂಲ್‍ಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರನ್ನು ಸನ್ಮಾನಿಸಲಾಗುವುದು.

ಸಭಾ ಕಾರ್ಯಕ್ರಮದ ನಂತರ ಸಂಜೆ 4:30 ರಿಂದ 6:00 ರವರೆಗೆ ವಿಶೇಷ ವಿಚಾರಗೋಷ್ಠಿಗಳು ನಡೆಯಲಿದ್ದು, ನಂತರ ಭ್ರಷ್ಟಾಚಾರದ ವಿರುದ್ಧದ ಹೋರಾಟ ಕುರಿತು ವಿವಿಧ ಗೋಷ್ಠಿಗಳು ನಡೆಯಲಿವೆ.

ಭ್ರಷ್ಟಾಚಾರ ಮತ್ತು ದುರಾಡಳಿತ ವಿರುದ್ಧ ಹೋರಾಟದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ್, ಲೋಕಾಯುಕ್ತ ಕಾಯ್ದೆಯಡಿ ಕುಂದುಕೊರತೆಗಳ ಪರಿಹಾರ ವಿಷಯದ ಮೇಲೆ ನಿವೃತ್ತ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಹಾಗೂ ಭ್ರಷ್ಟಾಚಾರ ತಡೆಗಟ್ಟುವುದು ಹೇಗೆ? ಎಂಬುದರ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು ವಿಚಾರಗೋಷ್ಠಿ ನಡೆಲಿಸಲಿದ್ದಾರೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ತನ್ನ ಅರ್ಥಪೂರ್ಣ ಹಾಗೂ ಅವಿರತ ಸೇವೆಯ 40 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಸುದೀರ್ಘ ಅವಧಿಯಲ್ಲಿ ಸಂಸ್ಥೆಯು ಹಲವಾರು ಸವಾಲುಗಳನ್ನು ಎದುರಿಸಿದ್ದರೂ ಸಹ, ಸಾರ್ವಜನಿಕ ಸೇವೆಯಲ್ಲಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಆಡಳಿತ ದುರುಪಯೋಗದ ವಿರುದ್ಧದ ಹೋರಾಟದಲ್ಲಿ ಸದಾ ಸ್ಥಿತಪ್ರಜ್ಞವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದೆ.

ಸಮಾಜದಲ್ಲಿ ಭ್ರಷ್ಟಾಚಾರವು ಭಯಾನಕ ರೀತಿಯಲ್ಲಿ ಬೆಳೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂಬ ಟೀಕೆಗಳಿದ್ದರೂ ಸಹ, ಧನಾತ್ಮಕ ಚಿಂತನೆ ಹಾಗೂ ಪರಿಶ್ರಮದಿಂದ ಭಷ್ಟಾಚಾರವನ್ನು ಹತ್ತಿಕ್ಕಬಹುದು ಎಂಬ ವಿಶ್ವಾಸವನ್ನು ಸಂಸ್ಥೆಯು ಮೂಡಿಸಿದೆ. ಜೀವನದ ಹಾದಿಯಲ್ಲಿ ಬರುವ ಕಠಿಣ ಸವಾಲುಗಳನ್ನು ಧೈರ್ಯ ಮತ್ತು ತಾಳ್ಮೆಯಿಂದ ಎದುರಿಸಿದಾಗ ಮಾತ್ರ ಯಶಸ್ಸು ಸಾಧ್ಯ.

ಆಮಿಷಗಳಿಗೆ ಒಳಗಾಗದ, ಅಧಿಕಾರದ ಆಸೆಗೆ ಮಣಿಯದ ಮತ್ತು ದೃಢ ಸಂಕಲ್ಪವುಳ್ಳ ಪ್ರಾಮಾಣಿಕ ವ್ಯಕ್ತಿಗಳ ಅಗತ್ಯತೆ ಇಂದು ಹೆಚ್ಚಿದೆ. ಸಾರ್ವಜನಿಕ ಹಿತಾಸಕ್ತಿಯೇ ಪರಮ ಗುರಿಯಾಗಿಸಿಕೊಂಡು ಕೆಲಸ ಮಾಡುವ ವ್ಯಕ್ತಿಗಳನ್ನು ನಾವು ಪ್ರೋತ್ಸಾಹಿಸಬೇಕಿದೆ. ಎಂತಹದೇ ನಿರಾಸೆ ಎದುರಾದರೂ ಶಾಂತ ಮತ್ತು ಸ್ಥಿರವಾದ ದೃಢತೆಯೊಂದಿಗೆ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮುಂದುವರಿಯಬೇಕು.

ಒಟ್ಟಾರೆಯಾಗಿ, ಪ್ರಾಮಾಣಿಕ ವ್ಯಕ್ತಿಗಳನ್ನು ಬೆಳೆಸುವಲ್ಲಿ ನಾವು ವಿಫಲವಾದರೆ ಅನ್ಯಾಯವು ಗೆದ್ದು, ನ್ಯಾಯವು ಮರೆಯಾಗುವ ಅಪಾಯವಿದೆ ಎಂದು ಸಂಸ್ಥೆಯು ಎಚ್ಚರಿಸಿದೆ. ಸವಾಲುಗಳೇ ವ್ಯಕ್ತಿಯನ್ನು ಪರಿಪೂರ್ಣಗೊಳಿಸುತ್ತವೆ ಎಂಬ ಧ್ಯೇಯವಾಕ್ಯದೊಂದಿಗೆ ಲೋಕಾಯುಕ್ತವು ನಾಲ್ಕು ದಶಕಗಳನ್ನು ದಾಟಿ ಮುಂದಿನ ಹೆಜ್ಜೆಯನ್ನು ಇಡುತ್ತಿದೆ.

40 ವರ್ಷಗಳ ಸಂಭ್ರಮ ಆನ್‍ಲೈನ್ ತನಿಖಾ ಮಾಡ್ಯೂಲ್ ಆಸ್ತಿ ಮತ್ತು ಹೊಣೆಗಾರಿಕೆ ಪೋರ್ಟಲ್ ಕರ್ನಾಟಕ ಆಡಳಿತ ಸುಧಾರಣೆ ಕರ್ನಾಟಕ ಲೋಕಾಯುಕ್ತ ಬಿ.ಎಸ್. ಪಾಟೀಲ್ ಭ್ರಷ್ಟಾಚಾರ ನಿರ್ಮೂಲನೆ ವಿಧಾನಸೌಧ ಕಾರ್ಯಕ್ರಮ ಸಿಜೆಐ ಸೂರ್ಯ ಕಾಂತ್
Follow on Facebook Follow on Instagram
Share. Facebook Twitter WhatsApp Telegram
Previous Articleಇದೀಗ 17 ಏಪ್ರಿಲ್ 2026 (ಶುಕ್ರವಾರ) ರ ವಿಸ್ತೃತ ನಿತ್ಯ ಭವಿಷ್ಯ
Times Of Bayaluseeme Staff
  • Website

Related Posts

ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ: ಸಿಪಿಐ ಸ್ಥಳದಲ್ಲೇ ಸಾವು

April 15, 2026

ಶಿವಮೊಗ್ಗದಲ್ಲಿ ಮತ್ತೊಂದು ದುರಂತ: ನೀರಾನೆ ‘ಹಂಸಿಣಿ’ ಸಾವು

April 14, 2026

ಪಂಚಮಸಾಲಿ ಗುರುಪೀಠದಲ್ಲಿ ಭಾರೀ ಬೆಳವಣಿಗೆ: ವಚನಾನಂದ ಶ್ರೀಗಳ ಉಚ್ಚಾಟನೆ!

April 13, 2026
Add A Comment
Leave A Reply Cancel Reply

Advertisement
Latest Posts

ಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮ

ಇದೀಗ 17 ಏಪ್ರಿಲ್ 2026 (ಶುಕ್ರವಾರ) ರ ವಿಸ್ತೃತ ನಿತ್ಯ ಭವಿಷ್ಯ

ಚಿತ್ರದುರ್ಗ ನಗರದ ಮುಖ್ಯರಸ್ತೆ ಒತ್ತುವರಿ ತೆರವಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕಟ್ಟುನಿಟ್ಟಿನ ಸೂಚನೆ

ಇಸ್ರೇಲ್ ದೇಶದ ದ್ವೇಷದ ಬೆಂಕಿ, ತನ್ನ ತಾನು ಸುಡುವುದಲ್ಲದೆ ಇತರರನ್ನೂ ಸುಡುತ್ತಿದೆ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.