13 ಮೇ 2026 ಬುಧವಾರದ ನಿಮ್ಮ ರಾಶಿ ಫಲ ಇಲ್ಲಿದೆ. ಸಿಂಹ ರಾಶಿಯವರಿಗೆ ಧನ ಲಾಭ, ಮೇಷ ರಾಶಿಯವರಿಗೆ ಹೊಸ ಉದ್ಯೋಗದ ಅವಕಾಶ ಹಾಗೂ ಮಿಥುನ ರಾಶಿಯವರಿಗೆ ಮಿತ್ರರ ಸಹಕಾರ ದೊರೆಯಲಿದೆ. ನಿಮ್ಮ ಇಂದಿನ ಶುಭ ಸಂಖ್ಯೆ, ಬಣ್ಣ ಮತ್ತು ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇಷ – ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದವರ ಜೊತೆ ಸಮಯ ಕಳೆಯುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ.
ವೃಷಭ – ಹಳೆಯ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭದ ಸೂಚನೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.
ಮಿಥುನ – ಸ್ನೇಹಿತರಿಂದ ಸಹಕಾರ ಸಿಗಲಿದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಲು ಅನುಕೂಲಕರ ದಿನ. ಅನಗತ್ಯ ವಾದಗಳಿಂದ ದೂರವಿರಿ.
ಕಟಕ – ಮನಸ್ಸಿನಲ್ಲಿ ಆತಂಕ ಹೆಚ್ಚಾಗಬಹುದು. ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಕಂಡುಬರಬಹುದು. ಧೈರ್ಯ ಮತ್ತು ಸಮಾಧಾನದಿಂದ ನಡೆದುಕೊಳ್ಳಿ
ಸಿಂಹ – ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಲಾಭದ ಸೂಚನೆ ಇದೆ. ಹಿರಿಯರಿಂದ ಮಾರ್ಗದರ್ಶನ ದೊರೆಯಲಿದೆ.
ಕನ್ಯಾ – ಹೊಸ ಪರಿಚಯಗಳು ಉಪಯೋಗಕ್ಕೆ ಬರಬಹುದು. ಪ್ರಯಾಣ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
ತುಲಾ – ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಕೆಲಸದಲ್ಲಿ ಪ್ರಶಂಸೆ ಸಿಗುವ ಸಾಧ್ಯತೆ. ಖರ್ಚಿನ ಮೇಲೆ ನಿಯಂತ್ರಣ ಇರಲಿ.
ವೃಶ್ಚಿಕ – ಅಂದುಕೊಂಡ ಕೆಲಸಗಳು ವಿಳಂಬವಾಗಬಹುದು. ಕೋಪವನ್ನು ನಿಯಂತ್ರಿಸಿದರೆ ಒಳಿತು. ವಿದ್ಯಾರ್ಥಿಗಳಿಗೆ ಶುಭದಿನ.
ಧನುಸ್ಸು – ಆರ್ಥಿಕವಾಗಿ ಲಾಭದ ದಿನ. ಹೊಸ ಕೆಲಸಕ್ಕೆ ಅವಕಾಶಗಳು ಕಾಣಬಹುದು. ಬಂಧು-ಮಿತ್ರರ ಭೇಟಿ ಸಂತೋಷ ತರಲಿದೆ.
ಮಕರ – ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಕುಂಭ – ಹೊಸ ಆಲೋಚನೆಗಳಿಗೆ ಉತ್ತಮ ಸ್ಪಂದನೆ ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ ಸಾಧ್ಯತೆ. ಮನೆಯಲ್ಲಿ ಶುಭಕಾರ್ಯ ಚರ್ಚೆ ನಡೆಯಬಹುದು
ಮೀನ – ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಬಹುದು. ಹಳೆಯ ಸ್ನೇಹಿತರ ಭೇಟಿ ಸಂತೋಷ ತರಲಿದೆ.
- ಇಂದಿನ ಶುಭ ಬಣ್ಣ: ಹಸಿರು
- ಶುಭ ಸಂಖ್ಯೆ: 5
- ಶುಭ ಸಮಯ: ಬೆಳಗ್ಗೆ 9:30 ರಿಂದ 11:30ರವರೆಗೆ.
