ಇಂದಿನ ರಾಶಿ ಭವಿಷ್ಯ (12-06-2026): ಇಂದು ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ತುಲಾ ರಾಶಿಗೆ ಧನಲಾಭ ಹಾಗೂ ವೃಷಭ ರಾಶಿಯವರಿಗೆ ಹೆಚ್ವು ಆರ್ಥಿಕ ಜಾಗ್ರತೆ ಅಗತ್ಯ. ನಿಮ್ಮ ರಾಶಿಯ ಇಂದಿನ ಫಲ, ಶುಭ ಸಂಖ್ಯೆ ಮತ್ತು ಶುಭ ಬಣ್ಣದ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇಷ: ಹೊಸ ಕೆಲಸಗಳಿಗೆ ಶುಭಾರಂಭ ಮಾಡಲು ಉತ್ತಮ ದಿನ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನಗಳಿಗೆ ಮೆಚ್ಚುಗೆ ದೊರೆಯಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.
ವೃಷಭ: ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಆರೋಗ್ಯದ ಕಡೆ ಗಮನ ಹರಿಸಿ.
ಮಿಥುನ: ಸ್ನೇಹಿತರಿಂದ ಸಹಾಯ ದೊರೆಯಲಿದೆ. ಶಿಕ್ಷಣ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಪ್ರಗತಿ ಕಂಡುಬರಬಹುದು. ಶುಭ ಸುದ್ದಿಯ ನಿರೀಕ್ಷೆ ಇದೆ.
ಕಟಕ: ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ತಾಳ್ಮೆಯಿಂದ ವರ್ತಿಸಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ. ಹಿರಿಯರ ಸಲಹೆ ಉಪಯುಕ್ತವಾಗಲಿದೆ.
ಸಿಂಹ: ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ಸಿಗಬಹುದು. ಪ್ರಯಾಣದ ಸಾಧ್ಯತೆ ಇದೆ.
ಕನ್ಯಾ: ಕೆಲಸದ ಒತ್ತಡ ಹೆಚ್ಚಾಗಬಹುದು. ಯೋಜಿತವಾಗಿ ಕಾರ್ಯನಿರ್ವಹಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳಾಗಬಹುದು.
ತುಲಾ: ದಾಂಪತ್ಯ ಮತ್ತು ಕುಟುಂಬ ಜೀವನದಲ್ಲಿ ಸಂತೋಷವಿರುತ್ತದೆ. ಹಣಕಾಸಿನ ವಿಚಾರಗಳಲ್ಲಿ ಲಾಭದ ಸೂಚನೆ ಇದೆ. ಹೊಸ ಪರಿಚಯಗಳು ಉಪಯುಕ್ತವಾಗಬಹುದು.
ವೃಶ್ಚಿಕ: ಅವಸರದ ನಿರ್ಧಾರಗಳನ್ನು ತಪ್ಪಿಸಿ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಕಾಪಾಡಿಕೊಳ್ಳಿ. ಸಂಜೆ ವೇಳೆಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ.
ಧನುಸ್ಸು: ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಸೃಜನಾತ್ಮಕ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಮಕರ: ಮನೆಯ ಹಾಗೂ ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಪ್ರಗತಿ ಕಂಡುಬರಬಹುದು. ಕುಟುಂಬ ಸದಸ್ಯರ ಸಹಕಾರ ಸಿಗಲಿದೆ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ.
ಕುಂಭ: ಸಂವಹನ ಕೌಶಲ್ಯದಿಂದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಬಂಧು-ಬಳಗದವರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಪ್ರಯಾಣ ಯೋಗವಿದೆ.
ಮೀನ: ಆರ್ಥಿಕ ಲಾಭದ ಅವಕಾಶಗಳು ದೊರೆಯಬಹುದು. ಆತ್ಮವಿಶ್ವಾಸದಿಂದ ಮುಂದುವರಿದರೆ ಗುರಿ ಸಾಧನೆ ಸಾಧ್ಯ. ಆರೋಗ್ಯ ಉತ್ತಮವಾಗಿರುತ್ತದೆ.
ಇಂದಿನ ಶುಭ ಬಣ್ಣ: ಹಸಿರು
ಇಂದಿನ ಶುಭ ಸಂಖ್ಯೆ: 5
ಇಂದಿನ ಶುಭ ದಿಕ್ಕು: ಉತ್ತರ
ಶುಭ ದಿನವಾಗಲಿ. 🌺🙏🏻
