Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
ದಾವಣಗೆರೆಯಲ್ಲಿ ಮಾದಿಗ ಮುಖಂಡರ ಮಹತ್ವದ ಸಭೆ ; ಸಚಿವರು, ಮಾಜಿ ಸಚಿವರು ಭಾಗಿ ಟಿಒಬಿ ನ್ಯೂಸ್ ದಾವಣಗೆರೆ ಮಾದಿಗ ಸಮುದಾಯದ ಮುಖಂಡರ ಮಹತ್ವದ ಸಭೆಯನ್ನು ಮಾರ್ಚ್ 31ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಮಾಜಿ ಸಚಿವ ಹೆಚ್.ಆಂಜನೇಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರು ಹಾಗೂ ಸಮುದಾಯದ ಹಿರಿಯ ಮುಖಂಡರಾದ ಕೆ.ಹೆಚ್. ಮುನಿಯಪ್ಪ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಆಗಮಿಸಲಿದ್ದಾರೆ. ಸಮುದಾಯದ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲು ಕರೆಯಲಾಗಿರುವ ಈ ಸಭೆಯಲ್ಲಿ ಮಾದಿಗ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದ್ದಾರೆ.
ಅಹಿಂಸಾ ತತ್ವದಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ಸಾಧ್ಯ; ಭಗವಾನ್ ಮಹಾವೀರ ಜಯಂತಿ ಟಿಒಬಿ ನ್ಯೂಸ್ ಚಿತ್ರದುರ್ಗ ಭಗವಾನ್ ಮಹಾವೀರರು ಸಾರಿದ ಅಹಿಂಸೆ ಮತ್ತು ಶಾಂತಿಯ ತತ್ವಗಳನ್ನು ಪಾಲಿಸುವುದರಿಂದ ಮಾತ್ರ ಇಂದಿನ ಯುದ್ಧದ ಭೀತಿಯ ನಡುವೆ ಜಗತ್ತಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಜಗತ್ತಿನಾದ್ಯಂತ ಯುದ್ಧದ ವಾತಾವರಣ ಮತ್ತು ಅದರ ಭೀಕರ ಪರಿಣಾಮಗಳನ್ನು ನಾವು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಹಾವೀರರು ಬೋಧಿಸಿದ ನೀನು ಬದುಕು, ಇತರರನ್ನೂ ಬದುಕಲು ಬಿಡು ಎಂಬ ತತ್ವ ಜಗತ್ತಿಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದ ಅವರು, ಸ್ವಾರ್ಥಕ್ಕಾಗಿ ಪರಸ್ಪರ ಹಿಂಸೆಯಲ್ಲಿ ತೊಡಗಿರುವ ಇಂದಿನ ಕಾಲಘಟ್ಟದಲ್ಲಿ ಸಹಬಾಳ್ವೆಯ ಅಗತ್ಯವಿದೆ ಎಂದರು. ಮಹಾವೀರರ ತತ್ವಗಳು ಮಹಾತ್ಮ ಗಾಂಧೀಜಿ…
ಜನಗಣತಿ: ಏಪ್ರಿಲ್ 1 ರಿಂದ ಸ್ವಯಂ ಮಾಹಿತಿ ಸಲ್ಲಿಸಿ ಚಿತ್ರದುರ್ಗ: ಭಾರತ ಜನಗಣತಿ ಕಾರ್ಯ ಏ.1 ರಿಂದ 15 ರವರೆಗೆ ಸ್ವಯಂ ಗಣತಿ ನಡೆಯಲಿದ್ದು, ಸಾರ್ವಜನಿಕರು ತಮ್ಮ ಕುಟುಂಬದ ವಿವರಗಳನ್ನು ಆನ್‍ಲೈನ್ ಮೂಲಕ ಸ್ವಯಂ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ವೆಬ್‍ಸೈಟ್ www.se.census.gov.in ಗೆ ಭೇಟಿ ನೀಡಿ ತಮ್ಮ ಕುಟುಂಬದ ವಿವರಗಳನ್ನು ಆನ್‍ಲೈನ್ ಪೋರ್ಟಲ್ ಮೂಲಕ ಭರ್ತಿ ಮಾಡಬಹುದಾಗಿದೆ. ಸಾರ್ವಜನಿಕರು ನೀಡುವ ಎಲ್ಲಾ ವಿವರಗಳನ್ನು ಅತ್ಯಂತ ಗೌಪ್ಯವಾಗಿ ಇಡಲಾಗುವುದು. ದೇಶದ ಸಮಗ್ರ ಅಭಿವೃದ್ಧಿ ಹಾಗೂ ಭವಿಷ್ಯದ ಯೋಜನೆಗಳ ರೂಪಿಸುವಿಕೆಯಲ್ಲಿ ಜನಗಣತಿಯು ಪ್ರಮುಖ ಪಾತ್ರ ವಹಿಸುವುದರಿಂದ, ನಗರದ ನಾಗರಿಕರು ನಿಗದಿತ ಅವಧಿಯೊಳಗೆ ಆನ್‍ಲೈನ್ ಮೂಲಕ ಮಾಹಿತಿ ನೀಡಿ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಸ್ .ಲಕ್ಷ್ಮಿ ತಿಳಿಸಿದ್ದಾರೆ.
ಮಹಿಳೆಯರ ಖಾತೆಗೆ ಶೀಘ್ರ ಹಣ ಜಮೆ; ಮನೆಗೆ ಗೃಹಲಕ್ಷ್ಮಿ ಟಿಒಬಿ ನ್ಯೂಸ್ ಚಿತ್ರದುರ್ಗ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ 29ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಮುಂದಿನ ಎರಡ್ಮೂರು ದಿನಗಳಲ್ಲಿ ಜಿಲ್ಲೆಯ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಒಟ್ಟು 3,88,341 ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದ್ದು, ಈ ಕಂತಿಗಾಗಿ ಸರ್ಕಾರ ಒಟ್ಟು ರೂ.77,66,82,000 ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ. ಕುಟುಂಬದ ಮುಖ್ಯ ಮಹಿಳೆಗೆ ಪ್ರತಿ ತಿಂಗಳು ರೂ.2000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಈ ಯೋಜನೆ ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಆರ್ಥಿಕ ಭದ್ರತೆಯ ಬೆಳಕು ತಂದಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಮಹಿಳೆಯರನ್ನು…
ಪೋಷಕರೇ ನಿಮಗೊಂದು ಸಿಹಿ ಸುದ್ದಿ; ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಶುಲ್ಕ ಸಂಪೂರ್ಣ ವಿನಾಯಿತಿ ಟಿಒಬಿ ನ್ಯೂಸ್ ಬೆಂಗಳೂರು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ನಿಟ್ಟೆ ವಿಶ್ವವಿದ್ಯಾಲಯವು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸಂಪೂರ್ಣ ಬೋಧನಾ ಶುಲ್ಕ ವಿನಾಯಿತಿ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳು ಉಚಿತವಾಗಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುವ ಅವಕಾಶ ಹೊಂದಿದ್ದಾರೆ. 2025ರ NIRF ರ‍್ಯಾಂಕಿಂಗ್‌ನಲ್ಲಿ 80ನೇ ಸ್ಥಾನ ಪಡೆದಿರುವ ನಿಟ್ಟೆ ವಿಶ್ವವಿದ್ಯಾಲಯವು ಮಂಗಳೂರು, ನಿಟ್ಟೆ ಹಾಗೂ ಬೆಂಗಳೂರು ಸೇರಿ ಮೂರು ಸುಸಜ್ಜಿತ ಕ್ಯಾಂಪಸ್‌ಗಳನ್ನು ಹೊಂದಿದೆ. ಮೆಡಿಕಲ್, ಡೆಂಟಲ್, ಫಾರ್ಮಸಿ, ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಹಾಸ್ಪಿಟಾಲಿಟಿ ಮತ್ತು ಮೀಡಿಯಾ ಸೇರಿದಂತೆ 160ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಇಲ್ಲಿ ಒದಗಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ, ಶಿಸ್ತಿನ ವಾತಾವರಣ, ನೈತಿಕ ಮೌಲ್ಯಗಳು, ಆಧುನಿಕ ಪ್ರಯೋಗಾಲಯಗಳು, ಸಮೃದ್ಧ ಗ್ರಂಥಾಲಯ, ಉತ್ತಮ ಹಾಸ್ಟೆಲ್ ಹಾಗೂ ಕ್ರೀಡಾ ಸೌಲಭ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿವೆ. ನಿಟ್ಟೆಯ NMAM ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMAMIT)ಯಲ್ಲಿ ಪ್ರಮುಖ ಜಾಗತಿಕ ಕಂಪನಿಗಳ ಸಹಯೋಗದೊಂದಿಗೆ…
ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥನೆ; 48ನೇ ದಿನದ ಮಂಡಲ ಪೂಜೆ ಟಿಒಬಿ ನ್ಯೂಸ್ ಚಳ್ಳಕೆರೆ ತಾಲೂಕಿನ ನರಹರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಗುರು ಕರಿಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 31 ಮಂಗಳವಾರ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ವೀರಭದ್ರಸ್ವಾಮಿ ತಿಳಿಸಿದ್ದಾರೆ. ಸೋಮವಾರ ದೇವಸ್ಥಾನ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನರಹರಿನಗರದ ಸದ್ಭಕ್ತರು ಹಾಗೂ ಶ್ರೀಗುರು ಕರಿಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್‌ನ ಸಹಕಾರದಿಂದ ದೇವಸ್ಥಾನ ನಿರ್ಮಾಣಗೊಂಡು 48 ದಿನಗಳು ಪೂರೈಸಿರುವ ಹಿನ್ನೆಲೆಯಲ್ಲಿ ವಿಶೇಷ ಮಂಡಲ ಪೂಜೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನವಗ್ರಹ ಪೂಜೆ, ಅಷ್ಟಲಕ್ಷ್ಮಿ ಪೂಜೆ, ಪಾರ್ವತಿ-ಪರಮೇಶ್ವರ ಪೂಜೆ, ವಿಘ್ನೇಶ್ವರ ಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಲೋಕಕಲ್ಯಾಣ, ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು. ದೇವಸ್ಥಾನ ಸಮಿತಿ ಸದಸ್ಯ ಕೆಂಚವೀರನಹಳ್ಳಿ ಎನ್. ಮಲ್ಲೇಶ್ ಮಾಹಿತಿ ನೀಡಿ, ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ವಿಶೇಷ…
ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ ಖ್ಯಾತ ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ ಸಂಭವಿಸಿದೆ. ಅವರ ತಾಯಿ ನಿಧನರಾದ ಸುದ್ದಿ ತಿಳಿದು ಚಿತ್ರರಂಗದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ. ಮಾತೃವಿಯೋಗದಿಂದ ದುಃಖಿತಗೊಂಡಿರುವ ಪ್ರಕಾಶ್ ರಾಜ್ ಕುಟುಂಬದವರಿಗೆ ಅನೇಕ ಗಣ್ಯರು, ಸಿನಿ ತಾರೆಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ತಮ್ಮ ಅಭಿನಯ ಹಾಗೂ ಸಾಮಾಜಿಕ ಚಿಂತನೆಗಳ ಮೂಲಕ ಹೆಸರಾಗಿರುವ ಪ್ರಕಾಶ್ ರಾಜ್ ಅವರಿಗೆ ಈ ದುಃಖದ ಸಮಯದಲ್ಲಿ ಎಲ್ಲೆಡೆಯಿಂದ ಸಮಾಧಾನ ಸಂದೇಶಗಳು ಹರಿದುಬರುತ್ತಿವೆ. ಕುಟುಂಬದ ಮೂಲಗಳಿಂದ ತಿಳಿದುಬಂದಂತೆ, ಅಂತ್ಯಕ್ರಿಯೆಗಳು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಲಿವೆ
ನಟ ರಾಕ್ಷಸ ಡಾಲಿ ಧನಂಜಯ್ ಖುದ್ದು ತನ್ನ ಫ್ಯಾನ್ಸ್ ಗೆ ಹೊಸ ಸುದ್ದಿ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೊಸ ವಿಷಯ ಹಂಚಿಕೊಂಡಿದ್ದಾರೆ. ಟಿಒಬಿ ನ್ಯೂಸ್ ಬೆಂಗಳೂರು ಓವರ್ ಟು ಡಾಲಿ… ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು!! ಒಬ್ಬರಿಂದ ಚಿತ್ರಕಥೆ ಕೇಳುವುದು ಬಹಳ ಪ್ರಯಾಸದ ಕೆಲಸ. ಆದರೆ ನಮ್ಮ ಕೆಲಸವೇ ಕಥೆ ಕೇಳುವುದು. ಆದಷ್ಟು ಕೇಳುವುದನ್ನು ತಡೆದು, ‘ಓದುವೆ, ಬೌಂಡ್ ಸ್ಕ್ರಿಪ್ಟ್ ಕೊಟ್ಟು ಹೋಗಿ’ ಅಂತ ಕೇಳ್ತಿನಿ. ಓದೋ ಪ್ರಯತ್ನ ಮಾಡ್ತಿನಿ. ಓದಿಸಿಕೊಳ್ಳೋದು ಚಿತ್ರಕಥೆಯ ತಾಕತ್ತು. ಹಾಗೆ ಓದುತ್ತಲೇ ನಕ್ಕು ನಗಿಸಿದ್ದು, ಕಣ್ತುಂಬಿಸಿದ್ದು, “ಬಡವ ರಾಸ್ಕಲ್” , “ಟಗರುಪಲ್ಯ” ಹಾಗೂ ಇನ್ನು ಬಿಡುಗಡೆಯಾಬೇಕಿರುವ ಪೂರ್ಣಚಂದ್ರ ನಟನೆಯ, ಅವಿನಾಶ್ ಬಲೆಕ್ಕಳ ನಿರ್ದೇಶನದ “ಹೆಗ್ಗಣ ಮುದ್ದು”. ಈ ಮಧ್ಯೆ ಗೆಳೆಯ ಪೂರ್ಣ ಒಂದು ಕಥೆಯ ಮೇಲೆ ಕೆಲಸ ಮಾಡುತ್ತಿರುವುದು ಆಗಾಗ ಕಣ್ಣಿಗೆ ಬೀಳುತ್ತಿತ್ತು. ‘ಈ ಕಥೆ ಕೇಳು’ ಅಂತ ಹೇಳ್ತಾ ಇದ್ರೂ, ನನ್ನ ಕೆಲಸದ…
🏏 ಚಿತ್ರದುರ್ಗದಲ್ಲಿ ಕ್ರಿಕೆಟ್ ಪ್ರತಿಭೆಗಳ ಆಯ್ಕೆ ಶಿಬಿರ ಚಿತ್ರದುರ್ಗ, ಮಾ.30: ಗ್ರಾಮಾಂತರ ಪ್ರದೇಶದ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ತುಮಕೂರು ವಲಯದ ಆಶ್ರಯದಲ್ಲಿ ಜಿಲ್ಲೆಯ ಮಟ್ಟದಲ್ಲಿ ಕ್ರಿಕೆಟ್ ತರಬೇತಿ ಶಿಬಿರ ಹಾಗೂ ಆಟಗಾರರ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚಿತ್ರದುರ್ಗ ಅಕಾಡಮಿ ಟರ್ಫ್ ಗ್ರೌಂಡ್ ನಲ್ಲಿ ಬೆಳಗ್ಗೆ 9 ಗಂಟೆಗೆ ಆಯ್ಕೆ ನಡೆಯಲಿದೆ. ಆಸಕ್ತ ಆಟಗಾರರು ಕ್ರಿಕೆಟ್ ಸಮವಸ್ತ್ರ, ವಯಸ್ಸಿನ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಹಾಗೂ ಕಿಟ್‌ಗಳೊಂದಿಗೆ ಭಾಗವಹಿಸಲು ಸೂಚಿಸಲಾಗಿದೆ. ಆಯ್ಕೆ ವೇಳಾಪಟ್ಟಿ: ಏಪ್ರಿಲ್ 1: 14 ವರ್ಷದೊಳಗಿನವರು ಏಪ್ರಿಲ್ 7: 16 ವರ್ಷದೊಳಗಿನವರು ಏಪ್ರಿಲ್ 8: 19 ವರ್ಷದೊಳಗಿನವರು ಮಹಿಳೆ ಹಾಗೂ ಬಾಲಕಿಯರಿಗೂ ಪ್ರತ್ಯೇಕವಾಗಿ ಜಿಲ್ಲಾ ತಂಡಕ್ಕೆ ಆಯ್ಕೆ ನಡೆಯಲಿದೆ. ಆಯ್ಕೆಯಾದ ತಂಡಗಳು ದಾವಣಗೆರೆ, ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗಳ ವಿರುದ್ಧ ಅಂತರ್ ಜಿಲ್ಲಾ ಪಂದ್ಯಗಳನ್ನು ಆಡಲಿವೆ. ಈ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಮುಂದಿನ…
ಡಾ. ಕರಿಯಪ್ಪ ಮಾಳಿಗೆ ಅವರ ಸ್ನೇಹ-ನಂಬಿಕೆ ಅನನ್ಯ: ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ಶ್ಲಾಘನೆ ಚಿತ್ರದುರ್ಗ: “ಡಾ. ಜೆ. ಕರಿಯಪ್ಪ ಮಾಳಿಗೆ ಅವರು ಕೇವಲ ಒಬ್ಬ ಪ್ರಾಧ್ಯಾಪಕರಷ್ಟೇ ಅಲ್ಲ, ಅವರೊಬ್ಬ ಪ್ರೀತಿ ಮತ್ತು ನಂಬಿಕೆಯ ಸಾಕಾರಮೂರ್ತಿ. ಅವರೊಂದಿಗೆ ಕಳೆದ 15 ವರ್ಷಗಳ ಒಡನಾಟದಲ್ಲಿ ನಾನು ಕಂಡುಕೊಂಡ ಸತ್ಯವೇನೆಂದರೆ, ಅವರು ಯಾರನ್ನು ನಂಬುತ್ತಾರೋ ಅವರ ಮೇಲೆ ಅಪಾರವಾದ ಸ್ನೇಹವನ್ನು ತೋರುತ್ತಾರೆ” ಎಂದು ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಪಕ್ಕದ ಕ್ರೀಡಾ ಭವನದಲ್ಲಿ ಭಾನುವಾರ ಪತ್ರಕರ್ತರ ಬಳಗ ಮತ್ತು ‘ಆಶಯ’ ವತಿಯಿಂದ ಆಯೋಜಿಸಿದ್ದ “ಡಾ. ಜೆ. ಕರಿಯಪ್ಪ ಮಾಳಿಗೆ: ನಡೆ-ನುಡಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಳಿಗೆ ಅವರ ಪತ್ರಿಕಾ ಒಡನಾಟವನ್ನು ಸ್ಮರಿಸಿದ ಗೋವಿಂದಪ್ಪ ಅವರು, “ನಾನು ಕನ್ನಡ ಪ್ರಭ ಪತ್ರಿಕೆಯಲ್ಲಿದ್ದಾಗ ವಿಶೇಷ ಪುರವಣಿಗಳಿಗೆ ಲೇಖನ ಕೇಳಿದ ಕೂಡಲೇ ಮಾಳಿಗೆ ಅವರು ಸ್ಪಂದಿಸುತ್ತಿದ್ದರು. ವಿಜಯವಾಣಿ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಸೇರಿದಂತೆ ಹತ್ತು ಹಲವಾರು ಪತ್ರಿಕೆಗಳಿಗೆ ಅವರು ನಿರಂತರವಾಗಿ ಲೇಖನಗಳನ್ನು ಬರೆದಿದ್ದಾರೆ. ಆಕಾಶವಾಣಿಯಂತಹ…
Subscribe to Updates
Get the latest creative news from FooBar about art, design and business.