Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
ನಿತ್ಯ ಭವಿಷ್ಯ – 02/04/2026 (ಗುರುವಾರ) ಮೇಷ (Aries) ಇಂದು ಕೆಲಸದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಆರ್ಥಿಕವಾಗಿ ಸ್ವಲ್ಪ ಸುಧಾರಣೆ ಕಾಣಬಹುದು. ಕುಟುಂಬದೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ಸಂತೋಷ ಕೊಡಲಿದೆ. ವೃಷಭ (Taurus) ಸಹೋದ್ಯೋಗಿಗಳ ಸಹಕಾರದಿಂದ ಕೆಲಸಗಳು ಸರಾಗವಾಗಿ ಸಾಗುತ್ತವೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ಅನಾವಶ್ಯಕ ಖರ್ಚು ತಪ್ಪಿಸುವುದು ಉತ್ತಮ. ಮಿಥುನ (Gemini) ಹೊಸ ಆಲೋಚನೆಗಳು ನಿಮ್ಮನ್ನು ಮುನ್ನಡೆಸುತ್ತವೆ. ವ್ಯವಹಾರದಲ್ಲಿ ಲಾಭ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಬಹುದು. ಕಟಕ (Cancer) ಕುಟುಂಬದ ವಿಚಾರಗಳಲ್ಲಿ ಸಂತೋಷದ ಸುದ್ದಿ ಕೇಳಬಹುದು. ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ಶಾಂತವಾಗಿರುತ್ತದೆ. ಸಿಂಹ (Leo) ನೀವು ತೆಗೆದುಕೊಳ್ಳುವ ನಿರ್ಧಾರಗಳು ಫಲ ನೀಡುತ್ತವೆ. ಆರ್ಥಿಕವಾಗಿ ಲಾಭದಾಯಕ ದಿನ. ಹಿರಿಯರ ಸಲಹೆ ಉಪಯುಕ್ತವಾಗುತ್ತದೆ. ಕನ್ಯಾ (Virgo) ಕೆಲಸಗಳಲ್ಲಿ ಸ್ವಲ್ಪ ವಿಳಂಬ ಉಂಟಾಗಬಹುದು. ಸಹನೆ ಅಗತ್ಯ. ಆರೋಗ್ಯದ ಕಡೆ ಗಮನ ಕೊಡಿ. ತುಲಾ (Libra) ಸಾಮಾಜಿಕವಾಗಿ ಗೌರವ ಹೆಚ್ಚಾಗುತ್ತದೆ. ಹೊಸ ಪರಿಚಯಗಳು ಪ್ರಯೋಜನಕಾರಿಯಾಗುತ್ತವೆ. ಹಣಕಾಸು ವಿಷಯದಲ್ಲಿ ಜಾಗ್ರತೆ…
ಭರಮಸಾಗರದಲ್ಲಿ ಆರ್ಯವೈಶ್ಯ ಸಮಾಜಕ್ಕೆ ಸೌಲಭ್ಯಗಳ ಕುರಿತು ಜಾಗೃತಿ ಸಭೆ ಚಿತ್ರದುರ್ಗ ಜಿಲ್ಲೆ ಭರಮಸಾಗರದಲ್ಲಿ ಕರ್ನಾಟಕ ಸರ್ಕಾರದ ಆರ್ಯವೈಶ್ಯ ಅಭಿವೃದ್ಧಿ ನಿಗಮದ ವತಿಯಿಂದ ಸಮಾಜದ ಸೌಲಭ್ಯಗಳ ಕುರಿತು ಜಾಗೃತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷರಾದ ರಾಮ್ ಪ್ರಸಾದ್ ಅವರು, ಕಾಂಗ್ರೆಸ್ ಸರ್ಕಾರವು ಆರ್ಯವೈಶ್ಯ ನಿಗಮದ ಮೂಲಕ ಸಮಾಜಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದ್ದು, ಅವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ನಿಗಮದ ಅಧ್ಯಕ್ಷರಾದ ರಾಮಪ್ರಸಾದ್ ಕೆ.ವಿ., ಆರ್ಯವೈಶ್ಯ ಮಹಾಸಭೆಯ ಸೀ ಮೆಂಬರ್ ವೆಂಕಟೇಶ್ ಎಸ್.ಎಂ.ಎಲ್., ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇವರುಗಳು ಆರ್ಯ ವೈಶ್ಯ ಸಮಾಜದ ಸದಸ್ಯರನ್ನು ಒಗ್ಗೂಡಿಸಿ, ನಿಗಮದಿಂದ ದೊರೆಯುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖ ಮುಖಂಡರಾದ ಬಿ.ಸಿ. ಹರೀಶ್, ಬಿ.ಆರ್. ರಾಮಕೃಷ್ಣ ಶೆಟ್ಟಿ, ಕೆ.ವೈ. ಮೃತ್ಯುಂಜಯ ಶೆಟ್ಟಿ, ಬಿ.ಆರ್. ಶ್ರೀಧರ ಶೆಟ್ಟಿ, ಬಿ.ಜೆ. ಜನಾರ್ಧನ ಶೆಟ್ಟಿ ಸೇರಿದಂತೆ ಅನೇಕ ಯುವ ಸಮಿತಿ ಸದಸ್ಯರು ಭಾಗವಹಿಸಿದ್ದರು. ಸಮಾಜದ…
ಮನುಷ್ಯತ್ವ ಮೆರೆದ ಮಂಗ: ಆಹಾರ ಹಾಕುತ್ತಿದ್ದ ವೃದ್ದೆಯ ಶವ ತಬ್ಬಿಕೊಂಡು ಮರುಗಿದ ಮನಕಲಕುವ ಘಟನೆ ರಾಮನಗರ: ಇಂದಿನ ಸ್ವಾರ್ಥಪರ ಸಮಾಜದಲ್ಲಿ ಸಹಾಯ ಮಾಡಿದವರನ್ನೇ ಮರೆತು ಬಿಡುವ ಘಟನೆಗಳು ಹೆಚ್ಚುತ್ತಿರುವಾಗ, ಮಂಗವೊಂದು ತೋರಿದ ಮಾನವೀಯತೆ ಎಲ್ಲರ ಮನಗಳನ್ನು ಸ್ಪರ್ಶಿಸಿದೆ. ಜಿಲ್ಲೆಯ ರಾಯರದೊಡ್ಡಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ನಿವಾಸಿ ಪಾರ್ವತಮ್ಮ (85) ತಮ್ಮ ಮನೆ ಬಳಿ ಆಗಾಗ ಬರುತ್ತಿದ್ದ ಮಂಗಗಳಿಗೆ ನಿಯಮಿತವಾಗಿ ಆಹಾರ ನೀಡುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಸೋಮವಾರ ರಾತ್ರಿ ನಿಧನರಾಗಿದ್ದು, ಅವರ ಮೃತದೇಹವನ್ನು ಮನೆಗೆ ತರಲಾಗುತ್ತಿದ್ದಂತೆ, ಅವರಿಗೆ ಪರಿಚಿತವಾಗಿದ್ದ ಮಂಗವೂ ಅಲ್ಲಿ ಹಾಜರಾಯಿತು. ಮಂಗವು ಪಾರ್ವತಮ್ಮ ಅವರ ಪಾರ್ಥಿವ ಶರೀರವನ್ನು ತಬ್ಬಿಕೊಂಡು, ಮುತ್ತಿಕ್ಕಿ, ಕೆಲ ಹೊತ್ತು ಅಲ್ಲಿಯೇ ಕುಳಿತುಕೊಂಡು ಮರುಗಿದ ದೃಶ್ಯ ಕಂಡು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಣ್ಣೀರಿಟ್ಟರು. ಈ ಘಟನೆ ಮನುಷ್ಯರಿಗಿಂತಲೂ ಪ್ರಾಣಿಗಳಲ್ಲಿರುವ ನಿಷ್ಠೆ, ಕೃತಜ್ಞತೆ ಮತ್ತು ಪ್ರೀತಿ ಎಷ್ಟು ಆಳವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇದನು ಓದಿ ಇದನು ಓದಿ ಮನುಷ್ಯತ್ವ…
ಇಂದಿನ ಚಿನ್ನ ಮತ್ತು ಬೆಳ್ಳಿ ದರ (India – 01 ಏಪ್ರಿಲ್ 2026) 🟡 ಚಿನ್ನ (Gold Rate) 24 ಕ್ಯಾರೆಟ್ (10 ಗ್ರಾಂ): ₹72,800 – ₹73,500 (ಸುಮಾರು) 22 ಕ್ಯಾರೆಟ್ (10 ಗ್ರಾಂ): ₹66,800 – ₹67,500 (ಸುಮಾರು) ⚪ ಬೆಳ್ಳಿ (Silver Rate) 1 ಕೆಜಿ ಬೆಳ್ಳಿ: ₹82,000 – ₹84,000 (ಸುಮಾರು) 📍 ಗಮನಿಸಿ: ನಗರಾನುಸಾರ (ಬೆಂಗಳೂರು, ಚಿತ್ರದುರ್ಗ, ದಾವಣಗೆರೆ ಇತ್ಯಾದಿ) ದರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು ಇದನು ಓದಿ https://timesofbayaluseeme.com/cta-police-2/ https://timesofbayaluseeme.com/digital-survey/
ಎ.ಎಚ್.ಭಾನುಮೂರ್ತಿ ನಿಧನ ಹೊಳಲ್ಕೆರೆ: ತಾಲ್ಲೂಕಿನ ಆಡುನೂರು ಗ್ರಾಮದ ನಿವಾಸಿ, ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಹಾಗೂ ಮಾದಿಗ ಸಮುದಾಯದ ಒಳ ಮೀಸಲಾತಿ ಹೋರಾಟಗಾರರಾದ ಎ.ಎಚ್. ಭಾನುಮೂರ್ತಿ ಬುಧವಾರ ನಿಧನರಾಗಿದ್ದಾರೆ. ಅನಾರೋಗ್ಯ ನಿಮಿತ್ತ ಕಳೆದ ಹತ್ತು ತಿಂಗಳಿಂದ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇವರಿಗೆ ಪತ್ನಿ , ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಮೃತರ ಅಂತಿಮ ಸಂಸ್ಕಾರವನ್ನು ಆಡುನೂರು ಗ್ರಾಮದಲ್ಲಿ ದಿನಾಂಕ ಇಂದು ಮಧ್ಯಾಹ್ನ 3:30 ಗಂಟೆಗೆ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿರುವ ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ,ಕುಟುಂಬಸ್ಥರಿಗೆ ಮೃತರ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ಬಸವಾದಿ ಶರಣರು ಕಾರುಣಿಸಲೆಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಾರ್ಥಿಸಿದ್ದಾರೆ.
ಮರಗಳ ಉಳಿವಿಗೆ ಧರಣಿ ಸತ್ಯಾಗ್ರಹ; ಪರಿಸರ ಪ್ರೇಮಿಗಳಿಗೆ ಸಂಘಟನೆಗಳ ಸಾಥ್ ಟಿಒಬಿ ನ್ಯೂಸ್ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ತೋಟಗಾರಿಕೆ ಇಲಾಖೆಯ ಆವರಣದಲ್ಲಿರುವ ಮರಗಳ ಉಳಿವಿಗಾಗಿ ಏಪ್ರಿಲ್ 6ರಂದು ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ರೈನ್ ಟ್ರಸ್ಟ್ (ರಿ), ಕರ್ನಾಟಕ ಜ್ಞಾನ–ವಿಜ್ಞಾನ ಸಮಿತಿ ಮನವಿಗೆ ಅಖಿಲ ಕರ್ನಾಟಕ ವನ ಕೃಷಿ ಹಾಗೂ ಶ್ರೀಗಂಧ ಬೆಳೆಗಾರರ ಸಂಘ, ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ, ರಿದ್ದಿ ಫೌಂಡೇಶನ್, ಪೂಜಾ ಚಾರಿಟಬಲ್ ಟ್ರಸ್ಟ್, ಹಿರಿಯ ನಾಗರೀಕರ ಸಂಘ, ಕನ್ನಡ ಪರ, ದಲಿತ, ಮಹಿಳಾ ಹಾಗೂ ರೈತ ಸಂಘಟನೆಗಳು ಸೇರಿದಂತೆ ಹಲವಾರು ಸಂಘ–ಸಂಸ್ಥೆಗಳು ಸ್ಪಂದಿಸಿ ಧರಣಿಗೆ ಕೈಜೋಡಿಸಿವೆ. ಪರಿಸರ ಸಂರಕ್ಷಣೆ ಮತ್ತು ಹಸಿರು ವಾತಾವರಣ ಉಳಿಸುವ ಉದ್ದೇಶದಿಂದ ನಡೆಯುವ ಈ ಸತ್ಯಾಗ್ರಹದಲ್ಲಿ ಸುಮಾರು 100ಕ್ಕೂ ಹೆಚ್ಚು ರೈತರು, ವಿದ್ಯಾರ್ಥಿಗಳು, ಮಹಿಳಾ ಸಂಘದ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಪರಿಸರ ಪ್ರೇಮಿ ಡಾ.ಎಚ್.ಕೆ.ಎಸ್.ಸ್ವಾಮಿ ತಿಳಿಸಿದ್ದಾರೆ.
ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ ಟಿಒಬಿ ನ್ಯೂಸ್ ಚಿತ್ರದುರ್ಗ ಬರೋಬ್ಬರಿ 15 ವರ್ಷದ ನಂತರ ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಪ್ರತಿ 10 ವರ್ಷಕ್ಕೊಮ್ಮೆ ನಡೆಯಬೇಕಿದ್ದ ಜನಗಣತಿ 2011ರ ಬಳಿಕ 2026 ಏ.1 ರಿಂದ (2027 ರ ಜನಗಣತಿ) ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಗಣತಿ ಡಿಜಿಟಲ್ ಜನಗಣತಿ ಪ್ರಾರಂಭವಾಗಿದೆ. ಈ ವಿಶೇಷ ಕಾರ್ಯದ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಸಾಕಷ್ಟು ಪ್ರಚಾರ ನಡೆಸಿದೆ. ಏ.1 ರಂದು ಬೆಳಿಗ್ಗೆ 9.15ಕ್ಕೆ ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯ ತೋಟಗಾರಿಕೆ ಇಲಾಖೆ ಕಚೇರಿ ಪಕ್ಕದ ಜಿಲ್ಲಾ ನ್ಯಾಯಾಧೀಶರ ನಿವಾಸದ ಬಳಿ ಜನಗಣತಿ – 2027ರ ಮೊದಲ ಹಂತದ ಮನೆ ಪಟ್ಟಿ ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ಚಾಲನೆ ನೀಡಲಿದ್ದಾರೆ. ಮೊದಲ ಬಾರಿಗೆ ಜನಗಣತಿ ಡಿಜಿಟಲ್ ವಿಧಾನದಲ್ಲಿ ನಡೆಯಲಿದೆ. ಗಣತಿಕಾರರು ಕೂಡ ಮಾಹಿತಿಯನ್ನು ನೇರವಾಗಿ ತಮ್ಮ ಸ್ಮಾರ್ಟ್ ಫೋನ್ ಬಳಸಿ ನೇರವಾಗಿ ಆಪ್ ಲೋಡ್ ಮಾಡುತ್ತಾರೆ. ಸ್ವಯಂ ಗಣತಿಗೂ ಮೊದಲ ಬಾರಿಗೆ…
ಹನಿ ನೀರಿಗೂ ಶುರುವಾಗಿದೆ ಹಾಹಾಕಾರ ; ಕಳೆಯುತ್ತಿದೆ ಭರವಸೆ ಟಿಒಬಿ ನ್ಯೂಸ್ ಚಿತ್ರದುರ್ಗ ನಮ್ಮ ಇಂದಿನ ನೀರಿನ ಮಿತಬಳಕೆ ನಾಳೆಯ ಭವಿಷ್ಯದ ಬದುಕಿಗೆ ಭರವಸೆಯಾಗುತ್ತದೆ ಎಂದು ವೀನಸ್ ಅಕಾಡೆಮಿ ಶೈಕ್ಷಣಿಕ ನಿರ್ದೇಶಕ ಡಾ. ಹೆಚ್.ಎನ್.ಪ್ರದೀಪ್ ಅಭಿಪ್ರಾಯಪಟ್ಟರು. ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೀರಿನ ಮಹತ್ವ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ದಿನವೇ ವಿಶ್ವ ಜಲ ದಿನ. ಇಂದು ಕುಡಿಯುವ ನೀರಿಗೂ ಹಾಹಾಕಾರ ಹೆಚ್ಚಾಗುತ್ತಿದೆ. ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ಇಲ್ಲವಾದಲ್ಲಿ ಶಾಶ್ವತವಾಗಿ ನಮ್ಮ ಅಳಿವು ಶತಸಿದ್ಧ ಎಂದು ತಿಳಿಸಿದರು. ವಿಶೇಷ ಉಪನ್ಯಾಸ ನೀಡಿದ ವೈಜ್ಞಾನಿಕ ಚಿಂತಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ವಿಶೇಷವಾಗಿ ಶಿಕ್ಷಕರಿಗೆ ಈ ರೀತಿಯ ಜ್ಞಾನ ಒದಗಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಶಿಕ್ಷಕರು ಎಲ್ಲಾ ರೀತಿಯ ಹೊಣೆಗಾರಿಕೆಯನ್ನು ನಿಭಾಯಿಸಬಲ್ಲರು. ಆದರೆ ಇಂದು ಶಿಕ್ಷಣ ಕ್ಷೇತ್ರವೂ…
ಡಿಜಿಟಲ್ ಜಗತ್ತು ಅವಕಾಶಗಳ ಮಹಾಸಾಗರ; ಬಳಕೆಯಲ್ಲಿ ಇರಲಿ ಎಚ್ಚರ ಟಿಒಬಿ ನ್ಯೂಸ್ ಚಿತ್ರದುರ್ಗ ತಂತ್ರಜ್ಞಾನವು ಇಂದಿನ ಪೀಳಿಗೆಗೆ ಅಂತ್ಯವಿಲ್ಲದ ಅವಕಾಶಗಳ ಬಾಗಿಲು ತೆರೆದಿದ್ದರೂ, ಅದರ ಬಳಕೆಯಲ್ಲಿ ವಿವೇಕ ಕಳೆದುಕೊಂಡರೆ ಅಪಾಯ ಅನಿವಾರ್ಯ ಎಂದು ಬಿಐಇಟಿ ಸಹಾಯಕ ಪ್ರಾಧ್ಯಾಪಕ ಎಚ್.ಸಿ. ಭರತ್ ಹೇಳಿದರು. ನಗರದ ಡಾನ್ ಬೋಸ್ಕೋ ಪದವಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ಕಾಲೇಜು ಟೆಕ್ನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುಗದಲ್ಲಿ ಕ್ಷಣಾರ್ಧದಲ್ಲಿ ಬೇಕಾದ ಮಾಹಿತಿಯನ್ನು ಅಂತರ್ಜಾಲ ಒದಗಿಸುತ್ತಿದೆ. ಆದರೆ ಪ್ರತಿಯೊಂದು ವಿಚಾರಕ್ಕೂ ಅಂತರ್ಜಾಲದ ಮೇಲೆ ಮಾತ್ರ ಅವಲಂಬಿಸದೆ, ಓದುವ, ಆಲೋಚಿಸುವ ಮತ್ತು ವಿಮರ್ಶಾತ್ಮಕವಾಗಿ ಚಿಂತಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಾಮಾಜಿಕ ಜಾಲತಾಣಗಳ ಪ್ರಭಾವ ಆಧುನಿಕ ಜೀವನದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಅವಕಾಶಗಳ ಹೊಸ ದಾರಿಗಳನ್ನು ತೆರೆದರೂ, ಅದರ ಸರಿಯಾದ ಆಯ್ಕೆ ಮತ್ತು ಬಳಕೆ ವ್ಯಕ್ತಿಯ ವಿವೇಚನೆಯಲ್ಲಿ ಇರಬೇಕು. ಡಿಜಿಟಲ್ ಜಗತ್ತನ್ನು ಸುರಕ್ಷಿತ, ಸಕಾರಾತ್ಮಕ ಹಾಗೂ ಅರ್ಥಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಅದು ಜೀವನಕ್ಕೆ…
ಸರ್ಕಾರಿ ನೌಕರರೇ ನಿಮಗೊಂದು ಸಿಹಿ ಸುದ್ದಿ; ಬದಲಾಯ್ತು ಕಚೇರಿ ಸಮಯ, ಕೇವಲ ಐದೂವರೆ ತಾಸು ಕೆಲಸ ! ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲು, ತಾಪಮಾನ ಇನ್ನಿಲ್ಲದಂತೆ ಏರಿಕೆ ಕಾಣುತ್ತಿದೆ. 9 ಗಂಟೆಯಿಂದ ಶುರುವಾಗುವ ಬಿಸಿಲು 11 ಗಂಟೆ ವೇಳೆಗೆ ಒಂದು ಹಂತ ತಲುಪಿ ಬಿಡುತ್ತಿದೆ. ಇದರಿಂದ ಉದ್ಯೋಗಸ್ಥರು, ಕಾರ್ಮಿಕರು ಹೈರಾಣಾಗಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಈ ಹಿನ್ನಲೆಯಲ್ಲಿ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು 9 ಜಿಲ್ಲೆಗಳ ಕಚೇರಿ ಕೆಲಸದ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳುಗಳವರೆಗೆ ಮಾತ್ರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಕಚೇರಿ ಸಮಯ ನಿಗದಿಗೊಳಿಸಲಾಗಿದೆ. ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಂದರೆ, ಕಲಬುರಗಿ, ಬೀದರ್ , ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಈ ಹೊಸ ವೇಳಾಪಟ್ಟಿ ಜಾರಿಯಲ್ಲಿರಲಿದೆ. ಕಚೇರಿ ಅವಧಿ ಬದಲಾದ ಸಮಯದಲ್ಲೂ…
Subscribe to Updates
Get the latest creative news from FooBar about art, design and business.