ಸಿದ್ದು ಸಿಎಂ ಆಗಿ ಇನ್ನೂ 2 ವರ್ಷ ಇದ್ದಾರೆ: ಡಾ.ಪರಂ
ಈ ಬಗ್ಗೆ ಹೈಕಮಾಂಡಿಂದ ಪ್ರತ್ಯೇಕ ಸ್ಪಷ್ಟಿಕರಣ ಬೇಕಿಲ್ಲ ಸಿದ್ದರಾಮಯರೇ ಸಿಎಂ ಆಗಿ ಇನ್ನೂ 2.5 ವರ್ಷ ಇರುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತ ನಾಡಿ, 2013ರಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಹೈಕ ಮಾಂಡ್ ಘೋಷಿಸಿರಲಿಲ್ಲ. ಆದರೂ 5 ವರ್ಷ ಸಿಎಂ ಆಗಿದ್ದರು ತಾನೇ?. ಈ ಬಾರಿ ಯೂ 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿ ತ್ತು. ಅದರ ಅವಧಿ 2028, ಅದನ್ನ ಮುಗಿಸ ಬೇಕು ತಾನೇ?. ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸೃಷ್ಟಿ ಕರಣ ಕೊಡುವ ಅವಶ್ಯಕತೆ ಇಲ್ಲ ಎನ್ನುವ ಮೂಲಕ ಸಿದ್ದು ಪರ ಬ್ಯಾಟ್ ಬೀಸಿದರು.
ಹೈಕಮಾಂಡ್ ಯಾವ ಗೊಂದಲಗಳನ್ನು
ಸೃಷ್ಟಿ ಮಾಡಿಲ್ಲ. ಹೈಕಮಾಂಡ್ ಯಾವತ್ತಾ ದರೂ ಸಿದ್ದರಾಮಯ್ಯ ಅವಧಿ ಇಷ್ಟು ಎಂದು ಹೇಳಿದ್ಯಾ?. ಬದಲಾವಣೆ ಬಗ್ಗೆ ಮಾತನಾಡಿ ದ್ದಾರಾ?. ಅದರ ಅರ್ಥ ಆ ರೀತಿಯ ಯಾವ ಬೆಳವಣಿಗೆ ಯೂ ಇಲ್ಲ ಎಂಬುದು ಎಂದು
ಅವರು ಸ್ಪಷ್ಟಪಡಿಸಿದರು. ಯಾರು ಏನೇ ಮಾತನಾಡಿದರೂ ಅದು ವೈಯಕ್ತಿಕ ಅಭಿಪ್ರಾಯ ಎಂದರು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ರಾಗಿದ್ದಾರೆ, ಡಿಸಿಎಂ ಆಗಿದ್ದಾರೆ. ಅವರು ನಮ್ಮ ನಾಯಕರು. ಅವರಿಗೆ ಯಾವ ಸಮ ಸೈ ಯೂ ಆಗಿಲ್ಲ. ಸಿಎಂ ವಿಧಾನಸಭೆಯಲ್ಲೇ ಹೇಳಿದ್ದಾರೆ, ನಮ್ಮ ಎಲ್ಲಾ ಶಾಸಕರು ಸಿಎಂ ಸ್ಥಾನಕ್ಕೆ ಅರ್ಹರು ಎಂದು. ಅದರಲ್ಲಿ ನಾನು ಅರ್ಹ, ಇನ್ನೊ ಬ್ಬರು ಅರ್ಹ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದರು
