Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಡಾ. ಕರಿಯಪ್ಪ ಮಾಳಿಗೆ ಅವರ ಸ್ನೇಹ-ನಂಬಿಕೆ ಅನನ್ಯ: ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ಶ್ಲಾಘನೆ

ನಿತ್ಯ ಭವಿಷ್ಯ – 30/03/2026 (ಸೋಮವಾರ)

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಕ್ರೈಂ»ಪ್ರೀ-ವೆಡ್ಡಿಂಗ್ ಶೂಟ್‌ಗೆ ವೇಳೆ ದಾಳಿ: ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ
ಕ್ರೈಂ

ಪ್ರೀ-ವೆಡ್ಡಿಂಗ್ ಶೂಟ್‌ಗೆ ವೇಳೆ ದಾಳಿ: ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 28, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಪ್ರೀ-ವೆಡ್ಡಿಂಗ್ ಶೂಟ್‌ಗೆ ವೇಳೆ ದಾಳಿ: ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ

ಟಿಒಬಿ ನ್ಯೂಸ್ ಸಕಲೇಶಪುರ

ಪ್ರಸಿದ್ಧ ಪ್ರವಾಸಿ ತಾಣವಾದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಬಳಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ದಾಳಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾ ಉಪಕರಣಗಳನ್ನು ಧ್ವಂಸಗೊಳಿಸಲಾಗಿದ್ದು, ಚಿನ್ನದ ಸರ ಕಳವು ಆರೋಪವೂ ಕೇಳಿಬಂದಿದೆ.

ಹಾಸನದ ಫೋಟೋಗ್ರಾಫರ್ ನವೀನಂದನ್ ಕೆ.ಎಸ್. (21) ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಸಹೋದ್ಯೋಗಿ ಚೇತನ್ ಹಾಗೂ ಮದುವೆಯಾಗಲಿರುವ ಜೋಡಿಯೊಂದಿಗೆ ಬೆಳಿಗ್ಗೆ 7:30ಕ್ಕೆ ಸ್ಥಳಕ್ಕೆ ತೆರಳಿದ್ದರು. ಸುಮಾರು 8 ಗಂಟೆ ವೇಳೆಗೆ ಬೆಂಗಳೂರಿನ ಮತ್ತೊಂದು ಫೋಟೋಗ್ರಫಿ ತಂಡ ಅಲ್ಲಿಗೆ ಆಗಮಿಸಿದ್ದು, ಈ ವೇಳೆ ಸ್ಥಳೀಯ ವ್ಯಕ್ತಿ ಅಭಿ ಜಗಳಕ್ಕೆ ಮುಂದಾಗಿದ್ದಾನೆ. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಗುಂಪು ದಾಳಿ, ಲೂಟಿ ಆರೋಪ

ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಭಿ ತನ್ನ 7-8 ಮಂದಿ ಸಹಚರರೊಂದಿಗೆ ಎರಡು ಕಾರುಗಳಲ್ಲಿ ಸ್ಥಳಕ್ಕೆ ಬಂದು ಫೋಟೋಗ್ರಾಫರ್‌ಗಳ ಮೇಲೆ ದಾಳಿ ನಡೆಸಿದ ಆರೋಪ ಇದೆ. ಮರದ ದೊಣ್ಣೆ ಮತ್ತು ಕಲ್ಲುಗಳನ್ನು ಬಳಸಿ ಹಲ್ಲೆ ನಡೆಸಿ, ನವೀನಂದನ್ ಅವರ ಕುತ್ತಿಗೆಗೆ ಕೈ ಹಾಕಿ ಉಸಿರುಗಟ್ಟಿಸಲು ಯತ್ನಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಜೊತೆಗೆ ಅವರ ಚಿನ್ನದ ಸರ ಕಿತ್ತುಕೊಂಡಿರುವುದಾಗಿ ಆರೋಪಿಸಲಾಗಿದೆ.

ದಾಳಿಯಲ್ಲಿ ಸುಮಾರು ₹5 ಲಕ್ಷ ಮೌಲ್ಯದ ಕ್ಯಾಮೆರಾ ಮತ್ತು ಲೆನ್ಸ್‌ಗಳನ್ನು ಪುಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗೆ ದಾಖಲಾತಿ, ಪ್ರಕರಣ ದಾಖಲು

ಗಾಯಗೊಂಡ ಫೋಟೋಗ್ರಾಫರ್‌ಗಳು ಸಕಲೇಶಪುರ ಸರ್ಕಾರಿ ಆಸ್ಪತ್ರೆ ಹಾಗೂ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಂಟು ಮಂದಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಶೋಧ ಕಾರ್ಯ

ಪ್ರಕರಣ ಸಂಬಂಧ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪ್ರವಾಸಿ ತಾಣಗಳಲ್ಲಿ ಫೋಟೋಶೂಟ್ ಮಾಡುವವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಛಾಯಾಗ್ರಾಹಕರು ಆಗ್ರಹಿಸಿದ್ದಾರೆ.

Attack chikamagaluru Pre wedding
Follow on Facebook Follow on Instagram
Share. Facebook Twitter WhatsApp Telegram
Previous Articleನಿತ್ಯ ಭವಿಷ್ಯ 28/03/2026 (ಶನಿವಾರ) 
Next Article ರಜೆ ದಿನಗಳಲ್ಲೂ ಸಬ್‌ ರಿಜಿಸ್ಟ್ರಾರ್ ಕಚೇರಿಗಳು ಓಪನ್
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಉಗ್ರ ದಾವೂದ್ ಹೆಸರಿದ್ದ ಬಸ್ ಚಿಕ್ಕಮಗಳೂರು ಪೊಲೀಸ್ ವಶಕ್ಕೆ

March 27, 2026

ಅಂದು ನಕ್ಕವರಿಗೆ ಇಂದು ಟಾಂಗ್ ; ಅಚ್ಚರಿ ಮೂಡಿಸಿದ ಮಲ್ಯ ಟ್ವೀಟ್

March 27, 2026

ಹಣ, ಆಭರಣಕ್ಕಾಗಿ ಅಜ್ಜಿ ಕೊಂದ ಮೊಮ್ಮಗನಿಗೆ ಸಿಕ್ಕಿದ್ದು ನಕಲಿ ಚಿನ್ನ

March 26, 2026
Add A Comment
Leave A Reply Cancel Reply

Advertisement
Latest Posts

ಡಾ. ಕರಿಯಪ್ಪ ಮಾಳಿಗೆ ಅವರ ಸ್ನೇಹ-ನಂಬಿಕೆ ಅನನ್ಯ: ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ಶ್ಲಾಘನೆ

ನಿತ್ಯ ಭವಿಷ್ಯ – 30/03/2026 (ಸೋಮವಾರ)

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.