ಆಯತಪ್ಪಿ ಬಾವಿಗೆ ಬಿದ್ದರೂ 3 ದಿನ ಪಂಪ್ ಮೇಲೆ ಕೂತು ಬದುಕಿದವೃದ!
ಉಡುಪಿ: ಆಯತಪ್ಪಿ ಬಾವಿಗೆ ಬಿದ್ದಿದ್ದವೃದ್ಧರೊಬ್ಬರು 3 ದಿನ ಪಂಪ್ ಮೇಲೆ ಕೂತು ಜೀವ ಉಳಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಶ್ರೀನಿವಾಸ ಆಚಾರ್ಯ (63) ಸಾವನ್ನು ಗೆದ್ದು ಬಂದವರು. ನಿರ್ಜನ ಪ್ರದೇಶದ ಮನೆಯಲ್ಲಿ ಒಂಟಿಯಾಗಿ 3. ವಾಸವಿದ್ದ ಅವರು, ತೋಟಕ್ಕೆ ನೀರುಣಿಸಲು ಹೋದಾಗ ಆಯತಪ್ಪಿ ಬಾವಿಗೆ ಬಿದ್ದಿದ್ದರು. 30 ಅಡಿಯ ಬಾವಿಯಲ್ಲಿ ಸಾಕಷ್ಟು ನೀರಿತ್ತು. ಆಗ ಅದರಲ್ಲಿದ್ದ ಸಬ್ ಮರ್ಸಿಬಲ್ ಪಂಪಿನ ಮೇಲೆ ಕುಳಿತು ಮೇಲೆತ್ತುವಂತೆ ಕೂಗಿದರೂ, ಯಾರಿಗೂ ಕೇಳಲಿಲ್ಲ. ಗ್ಯಾಸ್ ಏಜೆನ್ಸಿಯವರು ಸಿಲಿಂಡರ್‌ನೀಡಲು ಬಂದಾಗ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ತೋಟದಲ್ಲಿ ಹುಡುಕಿದಾಗ ಆಚಾರ್ಯರು ಪಂಪಿನ ಮೇಲೆ ಕೂತಿರೋದು ಕಂಡುಬಂತು. ಅಗ್ನಿಶಾಮಕ ದಳ ಸಿಬ್ಬಂದಿ ಕರೆಸಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.
