Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

28/05/2026 ರ ನಿತ್ಯ ಭವಿಷ್ಯ

27/05/2026 ರ ನಿತ್ಯ ಭವಿಷ್ಯ – ಬುಧವಾರ

26/05/2026 ರ ನಿತ್ಯ ಭವಿಷ್ಯ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»ನೀರು, ಭೂಮಿಯಲ್ಲಿನ ಅಪಾಯಕಾರಿ ದೈತ್ಯ: ಯಾವುದು ಗೊತ್ತಾ…
ರಾಜ್ಯ

ನೀರು, ಭೂಮಿಯಲ್ಲಿನ ಅಪಾಯಕಾರಿ ದೈತ್ಯ: ಯಾವುದು ಗೊತ್ತಾ…

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿApril 2, 2026No Comments6 Mins Read
Share WhatsApp Facebook Twitter Threads Telegram
Follow Us
Facebook Instagram
ನೀರು, ಭೂಮಿಯಲ್ಲಿನ ಅಪಾಯಕಾರಿ ದೈತ್ಯ: ಯಾವುದು ಗೊತ್ತಾ...
Share
WhatsApp Twitter Facebook Telegram

ನೀರು, ಭೂಮಿಯಲ್ಲಿನ ಅಪಾಯಕಾರಿ ದೈತ್ಯ: ಯಾವುದು ಗೊತ್ತಾ…

ಶಿವಮೊಗ್ಗ : ಕೆಲ ದಿನದ ಹಿಂದೆ ಶಿವಮೊಗ್ಗದ ತ್ಯಾವರೆ ಕೊಪ್ಪದ ಸಿಂಹಧಾಮದಲ್ಲಿ ಯುವ ಪಶುವೈದ್ಯೆ ಡಾಕ್ಟರ್ ಸಮೀಕ್ಷಾ ರೆಡ್ಡಿ ಮರಿ ಹಾಕಲಿರುವ ನೀರಾನೆಯ ಜ್ವರ ತಪಾಸಣೆಗೆ ರಾತ್ರಿ ತೆರಳಿದಾಗ ಅದು ವ್ಯಗ್ರಗೊಂಡು ತೀವ್ರ ಸ್ವರೂಪದ ದಾಳಿ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವುದು ಅತ್ಯಂತ ದು:ಖಕರ ದುರಂತ ಸಂಗತಿ. ಈ ಅನಿರೀಕ್ಷಿತ ಅವಘಡ ಇಡೀ ರಾಜ್ಯದಲ್ಲಿ ಸಂಚಲನ ಹುಟ್ಟಿಸಿದೆ. ಈ ನೀರಾನೆಗಳು ಇಷ್ಟೇಕೆ ವ್ಯಗ್ರ ಎಂಬುದನ್ನು ತಿಳಿದುಕೊಳ್ಳಲು ಅವುಗಳ ಜೀವ ಚರಿತ್ರೆಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ.

ಪ್ರಾಚೀನ ಚರಿತ್ರೆ: ನೀರುನಾಯಿ, ನೀರಾನೆ, ನೀರು ಕುದುರೆ ಎಂದೆಲ್ಲಾ ಕರೆಯಲ್ಪಡುವ ಈ ಜೀವಿಯ ಉಗಮ ಸುಮಾರು 55 ಮಿಲಿಯನ್ ವರ್ಷಗಳ ಹಿಂದೆ, ಆಫ್ರಿಕಾದಲ್ಲಿ ಆಯಿತು. ಇಲ್ಲಿ ಆನೆಗಳು, ಹೈರಾಕ್ಸ್‌ಗಳು, ಹುಲ್ಲೆಗಳು ಮತ್ತು ತಿಮಿಂಗಿಲಗಳು ಇತ್ಯಾದಿ ಅನೇಕ ಸ್ತನಿಗಳ ವಿಭಿನ್ನ ವಿಕಸನದ ಮಾರ್ಗದ ಜೊತೆ ಹಿಪ್ಪೊಗಳು ಸಹ ಅವುಗಳ ಜೀವನಯಾತ್ರೆ ಪ್ರಾರಂಭಿಸಿದವು. ಜೀವ ವಿಕಾಸಯಾತ್ರೆಯ ಪ್ರಾರಂಭಿಕ ಹಂತದಲ್ಲಿ ಇವುಗಳನ್ನು ಆಂಥ್ರಾಕೋಥೆರ್ ಎಂದು ಕರೆಯಲಾಗಿದ್ದು ಇವು ಸಣ್ಣ ಗಾತ್ರದ ಗೊರಸುಳ್ಳ ಜೀವಿಯ ಉಗಮವೂ ಸಹ ಆಗುತ್ತಿತ್ತು. ಇವೇ ಕ್ರಮೇಣ ವಿಕಸನದಲ್ಲಿ ಸಾಗಿ ದೊಡ್ಡ ಕಾಲು, ಗಡಸಾದ ಮುಖ, ಭರ ಶರೀರ, ನದಿ ದಂಡೆಗಳು ಮತ್ತು ಜೌಗು ಪ್ರದೇಶಗಳ ಮೇಲಿನ ಒಲವು ಹೊಂದಿದ ಹಿಪ್ಪೊಗಳಾಗಿ ಪರಿವರ್ತಿತವಾದವು.

ಡಾಲ್ಫಿನ್‌ಗಳ ಹತ್ತಿರದ ಸಂಬಂಧಿಗಳು : ಅತ್ಯಂತ ರೋಚಕವಾದ ವಿಷಯವೊಂದು ಇಬುಗಳನ್ನು ಅಧ್ಯಯನ ಮಾಡುವಾಗ ತಿಳಿದು ಬಂದಿದ್ದು ಎಂದರೆ ಹಿಪಪಾಟಮಸ್‌ಗಳು ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳ ಹತ್ತಿರದ ಸಂಬಂಧಿಗಳು ಎಂಬುದು. ಇದು ಕಲ್ಪನೆಯ ಕಥೆಯಲ್ಲ. ಆಣ್ವಿಕ ತಳಿಶಾಸ್ತ್ರ, ಪಳೆಯುಳಿಕೆ ರೂಪವಿಜ್ಞಾನ, ಕಿವಿ ಮೂಳೆ ರಚನೆ, ಕಣಕಾಲು ಮೂಳೆಗಳು, ಕೊಬ್ಬಿನ ಚಯಾಪಚಯ ಇವುಗಳನ್ನು ಮಾಡ್ಇದಾಗ ಇದು ತಿಳಿದು ಬಂದಿತು. ಕೋಟ್ಯಾಂತರ ವರ್ಷಗಳ ವಿಕಾನದ ಹಾದಿಯಲ್ಲಿ ಮಿಂಗಿಲಗಳ ಪೂರ್ವಜರುಗಳು ಸಮುದ್ರ ಸೇರಲು ಕ್ರಮೇಣ ರೂಪಾಂತರಗೊಂಡು ಭೂಮಿಯನ್ನು ತೊರೆದರು ಮತ್ತು ಆದರೆ ಹಿಪ್ಪೋಗಳ ಪೂರ್ವಜರು ಸಿಹಿನೀರಿನ ಬಳಿ ಉಳಿದುಕೊಂಡರು.

ಹಿಪಪಾಟಮಸ್‌ನ ಇತಿಹಾಸ: ಸುಮಾರು 20 ಮಿಲಿಯನ್ ವರ್ಷಗಳ ಹಿಂದೆ ಹಿಪ್ಪೊಗಳ ಪೂರ್ವಜ ಆಂಥ್ರಾಕೊಥೆರೆಸ್‌ಗಳು ನಿಧಾನವಾಗಿ ಚಲಿಸುವ ನದಿಗಳಲ್ಲಿ ಜೀವನಕ್ಕಾಗಿ ಆಹಾರ ಅರಸುತ್ತಾ ಕ್ರಮೇಣ ವಂಶಾವಳಿ ಬೆಳೆಸಿಕೊಂಡು ನೈಜವಾದ ಈ ಕಾಲದ ಹಿಪ್ಪೋಗಳಾಗಿದ್ದವು. 7 ಮಿಲಿಯನ್ ವರ್ಷಗಳ ಹಿಂದೆ, ಹಿಪಪಾಟಮಸ್ ಕುಲವು ಆಫ್ರಿಕಾದಲ್ಲಿ ಹೊರಹೊಮ್ಮಿತು. ಇದರ ವೈಜ್ಞಾನಿಕ ಹೆಸರು ಹಿಪ್ಪೋಪೊಟಮಸ್ ಆಂಫಿಬಿಯಸ್.

ದೈನಿಕ ಚರ್ಯೆ: ಹಿಪಪಾಟಮಸ್ ಅರೆ-ಜಲವಾಸಿ, ಸುಮಾರು 5 ರಿಂದ 30 ಹೆಣ್ಣು ಮತ್ತು ತಾರುಣ್ಯದ ಹಿಪಪಾಟಮಸ್‌ಗಳು ನದಿ ಮತ್ತು ಕೆರೆಗಳ ಬಳಿ ಬೀಡು ಬಿಟ್ಟಿರುತ್ತದೆ ಮತ್ತು ಆ ಪ್ರದೇಶಗಳಲ್ಲಿ ಗೂಳಿಗಳು ಹಿಪ್ಪೊಗಳು ಅಧಿಪತ್ಯ ನಡೆಸುತ್ತಿರುತ್ತವೆ. ಈ ಗೂಳಿಗಳು ತಮ್ಮದೇ ಆದ ವಲಯವನ್ನು ನಿರ್ಮಿಸಿಕೊಂಡು ಮತ್ತೊಂದು ಗಂಡ ಹಿಪ್ಪೊ ಬಂದರೆ ಕಾದಾಡುತ್ತವೆ. ಪ್ರತಿಸ್ಪರ್ಧಿ ಗಂಡು ಹಿಪ್ಪೊಗಳನ್ನು ಎಚ್ಚರಿಸಲು, ಅವು ತಮ್ಮ ದೊಡ್ಡ ಬಾಯಿಗಳನ್ನು ತೆರೆದು ಆಕಳಿಸಿ ತಮ್ಮ ಉದ್ದವಾದ, ಬಾಗಿದ ಕೋರೆಹಲ್ಲುಗಳನ್ನು ಪ್ರದರ್ಶಿಸುತ್ತವೆ. ಅವು ನೀರಿನಲ್ಲಿ ಜೋರಾಗಿ ಗೊಣಗುವಂತ ಶಬ್ಧವನ್ನು ಹೊರಡಿಸುತ್ತವೆ ಮತ್ತು ಆಕ್ರಮಣಕಾರಿಯಾಗಿ ನೀರನ್ನು ಸಿಡಿಸುತ್ತವೆ. ದಿನದ ೧೬ ಗಂಟೆಯನ್ನು ಇವು ನೀರಿನಲ್ಲಿಯೇ ಕಳೆಯುತ್ತವೆ. ಇದರಿಂದ ಕೆಲವೊಮ್ಮೆ ಆಳವಾದ ಗಾಯವಾಗುತ್ತವೆ. ಹಗಲು ಹೊತ್ತು ನೀರು ಅಥವಾ ಮಣ್ಣಿನಲ್ಲಿ ಇರುತ್ತಾ ಅವು ಶಾಂತವಾಗಿರುತ್ತವೆ. ಸಂಮುಚ್ಚಂಜೆಯಲ್ಲಿ ಹುಲ್ಲು ಮೇಯುವುದಕ್ಕೆ ಹೊರಬರುತ್ತವೆ. ವಿಶ್ರಾಂತಿ ತೆಗೆದುಕೊಳ್ಳುತ್ತಿರಬೇಕಾದರೆ ಮಾತ್ರ ಹಿಪಪಾಟಮಸ್‌ಗಳು ಒಂದಕ್ಕೊಂದು ಸೇರಿ ಗುಂಪು ಮಾಡಿಕೊಂಡಿರುತ್ತವೆ. ಆದರೆ ಮೇಯುವಾಗ ಅವು ಒಂದು ಪ್ರದೇಶಕ್ಕೆ ಸೀಮಿತವಾಗಿರದೇ ಒಂಟಿಯಾಗಿ ಮೇಯಲು ಹೋಗಿಬಿಡುತ್ತವೆ. ಇವುಗಳ ಜೀವಿತಾವಧಿ ೩೦-೪೦ ವರ್ಷ. ನೀರಿನಲ್ಲಿ ಇವು ಸುಮಾರು ೫-೧೦ ನಿಮಿಷ ತಲೆಯನ್ನು ಮುಳುಗಿಸಿಕೊಂಡು ಇರಬಲ್ಲವು.

ಶರೀರ ವಿನ್ಯಾಸ: ಹಿಪಾಪಟಮಸ್ಗಳು ತನ್ನ ಪೀಪಾಯಿ ಆಕಾರದ ಮುಂಡ, ಅಗಾಧ ಗಾತ್ರದ ಬಾಯಿ ಮತ್ತು ಹಲ್ಲುಗಳು, ಹೆಚ್ಚು-ಕಡಿಮೆ ಕೂದಲೇ ಇಲ್ಲದ ಶರೀರ, ಮೋಟು ಮೋಟಾದ ಕಾಲುಗಳು ಮತ್ತು ಭಯಂಕರ ಗಾತ್ರದಿಂದಾಗಿ ಗುರುತಿಸಲ್ಪಡುತ್ತದೆ. ಭೂಮಂಡಲದ ಮೂರನೆಯ ಅತೀ ದೊಡ್ದ ಸಸ್ತನಿಗಳಾದ ಇವು 1½ ಯಿಂದ 3 ಟನ್‌ಗಳು ತೂಗುತ್ತಿದ್ದು ಇಷ್ಟು ಭಾರ ಮತ್ತು ಗಿಡ್ಡ ಕಾಲುಗಳಿದ್ದರೂ ಸಹ ಇದು ಓಟದಲ್ಲಿ ( ೧೯ ಕಿಮಿ/ಗಂಟೆ) ಮನುಷ್ಯನನ್ನು ಮೀರಿಸುತ್ತದೆ. ಒಟ್ಟು 36 ಹಲ್ಲುಗಳ ದಂತ ಸೂತ್ರವನ್ನು ಹೊಂದಿರುವ ಹಿಪ್ಪೊಗಳು ಅತ್ಯಂತ ಪ್ರಬಲವಾದ ಕೋರೆದಂತಗಳನ್ನು ಕೆಳದವಡೆಯಲ್ಲಿ ಹೊಂದಿರುತ್ತವೆ.

ಹಿಪಪಾಟಮಸ್ ಚಿಕ್ಕದಾದ, ಕಂಬದಂತಹ ಕಾಲುಗಳನ್ನು ಹೊಂದಿದ್ದು, ನಾಲ್ಕು ಕಾಲ್ಬೆರಳುಗಳನ್ನು ಹೊಂದಿದ್ದು, ನದಿಪಾತ್ರಗಳಲ್ಲಿ ನಡೆಯಲು ಮತ್ತು ತೂಕವನ್ನು ಹೊರಲು ಅವಶ್ಯವಾಗಿದೆ. ಇದರ ಕಣ್ಣುಗಳು ರಕ್ಷಣಾತ್ಮಕ ಪೊರೆ ಹೊಂದಿದ್ದು ಕಿವಿಗಳು ಮತ್ತು ಮೂಗಿನ ಹೊಳ್ಳೆಗಳು ಮೇಲ್ಬಾಗದಲ್ಲಿದೆ. ಆದರೆ ದೊಡ್ಡ ಬಾಯಿ 150° ವರೆಗೆ ತೆರೆದುಕೊಳ್ಳಬಹುದು ಮತ್ತು ಇದರ ದಪ್ಪ ಚರ್ಮವು (5–6 ಸೆಂ.ಮೀ), ವಿರಳ ಕೂದಲುಗಳನ್ನು ಹೊಂದಿದ್ದು ಚರ್ಮವು ರಕ್ತ ಬೆವರು ಎಂಬ ವಿಶಿಷ್ಟ ಬೆವರನ್ನು ಸ್ರವಿಸುತ್ತದೆ. ಶರೀರದ ತಾಪಮಾನ ಕಾದುಕೊಳ್ಳಲು ಇದಕ್ಕೆ ಆಗಾಗ್ಗೆ ನೀರಿನಲ್ಲಿ ಮುಳುಗುವಿಕೆಯ ಅಗತ್ಯವಿರುತ್ತದೆ.

ಎಷ್ಟಿವೆ?: ಪ್ರಪಂಚದಲ್ಲಿ ಇವುಗಳ ಸಂಖ್ಯೆ ಸುಮಾರು ೧.೨೫ ರಿಂದ ೧.೫೦ ಲಕ್ಷವಿರಬಹುದು. ಆಫ್ರಿಕಾ ಖಂಡದ ಅನೇಕ ದೇಶಗಳಲ್ಲಿ ಇವು ವ್ಯಾಪಕವಾಗಿವೆ. ಆದರೆ ಇವುಗಳ ಮಾಂಸ ಮತ್ತು ದವಡೆ ಹಲ್ಲುಗಳಿಗೆ ತುಂಬಾ ಬೇಡಿಕೆ ಇರುವುದರಿಂದ ಇವುಗಳನ್ನು ಬೇಟೆಯಾಡುವುದರಿಂದ ಇವೂ ಸಹ ವಿನಾಶದಂಚಿಗೆ ತೆರಳುತ್ತಿವೆ. ಭಾರತದಲ್ಲಿ ನೈಸರ್ಗಿಕವಾಗಿ ಜೀವಿಸುವ ಹಿಪ್ಪೊಗಳು ಇಲ್ಲ. ಇವುಗಳನ್ನು ಕೇವಲ ಪ್ರಾಣಿ ಸಂಗ್ರಹಾಲಯಗಳಲ್ಲಿ ಮಾತ್ರ ನೋಡಬಹುದು. ರಾಜ್ಯದ ಅನೇಕ ಮ್ರಗಾಲಯಗಳಲ್ಲಿ ಪ್ರವಾಸಿಗರ ಆಕರ್ಷಣೆ ಮಾಡಲು ಆಫ್ರಿಕಾದಂತ ದೇಶಗಳಿಂದ ತರಿಸಲಾಗುತ್ತದೆ ಅಥವಾ ದೊಡ್ಡ ಮ್ರಗಾಲಯಗಳಲ್ಲಿ ಇವುಗಳ ಸಂಖ್ಯೆ ಜಾಸ್ತಿಯಾದರೆ ಇತರ ಮ್ರಗಾಲಯಗಳಿಗೆ ಕಳಿಸಲಾಗುತ್ತದೆ.

ಆಹಾರ ಪದ್ಧತಿ: ಅವು ರಾತ್ರಿಯಲ್ಲಿ ನೀರಿನ ಕೊಳವನ್ನು ಬಿಟ್ಟು ನಾಲ್ಕರಿಂದ ಐದು ಗಂಟೆಗಳ ಕಾಲ ಮೇಯುತ್ತವೆ. ಎಂಟು ಕಿಲೋಮೀಟರ್ (ಐದು ಮೈಲಿ) ಪ್ರದೇಶವನ್ನು ಆಹಾರಕ್ಕಾಗಿ ಇವು ಕ್ರಮಿಸುತ್ತವೆ. ಈ ಸಮಯದಲ್ಲಿ ಅವು ಸುಮಾರು 40 ಕಿಲೋಗ್ರಾಂಗಳಷ್ಟು ಆಹಾರವನ್ನು ತಿನ್ನುತ್ತವೆ. ೧.೫- ೨ ಟನ್ ತೂಗುವ ಇವುಗಳ ಆಹಾರ ಸೇವನೆ ಬಹಳ ಕಡಿಮೆ ಎನ್ನಬಹುದು. ಅವುಗಳ ಜಡ ಜೀವನದಿಂದಾಗಿ ಇದಕ್ಕೆ ಹೆಚ್ಚಿನ ಶಕ್ತಿಯ ಉತ್ಪಾದನೆಯ ಅಗತ್ಯವಿರುವುದಿಲ್ಲ. ರಾತ್ರಿ ಮೆಂದು ಬೆಳಗಿನ ಜಾವ ಕೊಳಗಳಿಗೆ ಹಿಂದುರಿಗಿ ಇಡೀ ದಿನ ಸೋಮಾರಿ ಜೀವನ ನಡೆಸುತ್ತವೆ. ಇದು ಸಸ್ಯಾಹಾರಿಯಾದರೂ ಸಹ ಮೆಲುಕು ಚೀಲ ಹೊಂದಿಲ್ಲ. ಆದರೆ ಇದರ ಕರುಳಿನಲ್ಲಿ ಸೂಕ್ಷ್ಮಾಣುಗಳ ಸಹಾಯದಿಂದ ಕುದುರೆ, ಆನೆ, ಮೊಲಗಳ ರೀತಿಯ ಜೀರ್ಣಕ್ರಿಯೆ ನಡೆಯುತ್ತದೆ. ಮಲವಿಸರ್ಜನೆಯ ಸಮಯದಲ್ಲಿ, ಅದು ವೇಗವಾಗಿ ತನ್ನ ಬಾಲವನ್ನು ತಿರುಗಿಸುತ್ತಾ ಬಲವಾಗಿ ಅಗಾಧವಾದ ಶಕ್ತಿಯೊಂದಿಗೆ ಮಲವನ್ನ ವಿಸರ್ಜಿಸುತ್ತದೆ. ಇದರ ಉದ್ದೇಶ ಮಲವು ಜಾಸ್ತಿ ವಿಶಾಲ ಪ್ರದೇಶದ ಹರಡಿದಲ್ಲಿ ಸಂವಹನಕ್ಕಾಗಿ ಅದರ ಪ್ರದೇಶ ಗುರುತಿಸುವಿಕೆಗೆ ಸಹಕಾರಿ.

ವಂಶಾಭಿವೃದ್ಧಿ: ಹಿಪಪಾಟಮಸ್‌ಗಳು ನಿಧಾನವಾಗಿ ಬೆಳೆಯುತ್ತವೆ ಮತ್ತು ಅವುಗಳ ದೇಹವು ಸಂತಾನೋತ್ಪತ್ತಿಗೆ ಸಿದ್ಧವಾಗಲು ಹೆಣ್ಣು ಹಿಪಪಾಟಮಸ್‌ಗಳು ಐದರಿಂದ ಆರು ವರ್ಷಗಳನ್ನು ತೆಗೆದುಕೊಂಡರೆ ಗಂಡುಗಳು ಮಾತ್ರ ಏಳರಿಂದ ಹದಿನೈದು ವರ್ಷಗಳ ನಡುವೆ, ಅವು ಒಂದು ಪ್ರದೇಶವನ್ನು ರಕ್ಷಿಸಿಕೊಳ್ಳುವಷ್ಟು ಬಲಶಾಲಿಯಾದಾಗ ಪ್ರಬುದ್ಧವಾಗುತ್ತವೆ. ಪ್ರೌಢ ಹೆಣ್ಣು ಸರಿಸುಮಾರು ಪ್ರತಿ 35 ದಿನಗಳಿಗೊಮ್ಮೆ ಬೆದೆಗೆ ಬರುತ್ತದೆ ಮತ್ತು ಈ ಅವಧಿಯಲ್ಲಿ ಅವು ನದಿ ಪ್ರದೇಶದ ಪ್ರಬಲ ಗಂಡಿನ ಸಮೀಪ ಬರುತ್ತದೆ. ಅವುಗಳ ಸಂಯೋಗವು ಬಹುತೇಕ ಸಂಪೂರ್ಣವಾಗಿ ನೀರಿನಲ್ಲಿ ಸಂಭವಿಸುತ್ತದೆ. ಸಂತಾನೋತ್ಪತ್ತಿಯು ಗಂಡುಗಳಲ್ಲಿ ಆಂತರಿಕ ವೃಷಣಗಳೊಂದಿಗೆ ಮತ್ತು ಹೆಣ್ಣುಗಳಲ್ಲಿ ಎರಡು ಸ್ತನ ಗ್ರಂಥಿಗಳಿಂದ ಬೆಂಬಲಿತವಾದ ನೀರಿನ ಅಡಿಯಲ್ಲಿ ಕರುಹಾಕುವಿಕೆ ಮತ್ತು ಹಾಲುಣಿಸುವಿಕೆಯೊಂದಿಗೆ ಜಲಚರವಾಗಿದೆ. ಇವುಗಳ ಗರ್ಭಾವಧಿ ೮ ತಿಂಗಳು ಮತ್ತು ಒಮ್ಮೆ ಇದು ಒಮ್ಮೆ ಒಂದು ಮರಿಯನ್ನು ಮಾತ್ರ ಈಯುತ್ತದೆ. ತಾನೋತ್ಪತ್ತಿ ಮತ್ತು ಪ್ರಸವ ಎರಡೂ ನೀರಿನಲ್ಲೇ ಸಂಭವಿಸುತ್ತದೆ. ಜನನದ ಸಮಯ ಬಂದಾಗ, ಅದು ನದಿಯ ಶಾಂತ, ಆಳವಿಲ್ಲದ ಭಾಗವನ್ನು ಅಥವಾ ಸಂರಕ್ಷಿತ ದಂಡೆಯನ್ನು ಹುಡುಕುತ್ತದೆ. ನವಜಾತ ಮರಿ (ಕರು) 25 ರಿಂದ 50 ಕಿಲೋಗ್ರಾಂಗಳಷ್ಟು ತೂಗುತ್ತದೆ. ತಾಯಿ ಹಿಪ್ಪೊ ಮರಿಗಳಿದ್ದಾಗ ತೀವ್ರ ಆಕ್ರಮಣಕಾರಿಯಾಗಿರುತ್ತಿದ್ದು ಮರಿಗಳಿಗೆ ಈಜುವುದು, ಆತ್ಮ ರಕ್ಷಣೆ ಮಾಡಿಕೊಳ್ಳುವುದು, ಆಹಾರ ಹುಡುಕುವುದು ಇತ್ಯಾದಿಗಳನ್ನು ಕಲಿಸುತ್ತದೆ.

ರೋಗಗಳು: ಹಿಪಪಾಟಮಸ್‌ಗಳು ಸಾಮಾನ್ಯವಾಗಿ ಆಂಥ್ರಾಕ್ಸ್, ಕ್ಷಯರೋಗ, ಲೆಪ್ಟೊಸ್ಪೈರೋಸಿಸ್, ಪರಾವಲಂಬಿ ಸೋಂಕುಗಳು, ಕ್ಲೋಸ್ಟ್ರಿಡಿಯಲ್ ಸೋಂಕುಗಳು ಮತ್ತು ಚರ್ಮ ಅಥವಾ ಹಲ್ಲಿನ ಅಸ್ವಸ್ಥತೆಗಳಂತಹ ಕಾಯಿಲೆಗಳಿಂದ ಬಳಲುತ್ತವೆ. ಇವು ಮುಖ್ಯವಾಗಿ ನಿರಂತರ ಕಲುಷಿತ ನೀರಿಗೆ ಒಡ್ಡಿಕೊಳ್ಳುವುದು, ಸೋಂಕಿತ ಪ್ರಾಣಿಗಳೊಂದಿಗಿನ ಸಂಪರ್ಕ ಮತ್ತು ಕಳಪೆ ಸ್ವಚ್ಚತಾ ಪರಿಸರ ಪರಿಸ್ಥಿತಿಗಳಿಂದ ಉಂಟಾಗುತ್ತವೆ.

ಅತ್ಯಂತ ಆಕ್ರಮಣಕಾರಿಗಳು : ಪ್ರತಿ ವರ್ಷ ಪ್ರಪಂಚದಲ್ಲಿ ೫೦೦-೧೦೦೦ ಜನ ಇವುಗಳ ಆಕ್ರಮಣಕ್ಕೆ ಸಿಕ್ಕಿ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಒಮ್ಮೊಮ್ಮೆ ಇವು ಇವುಗಳ ಅತಿಯಾದ ಆಕ್ರಮಣಕಾರಿ ನಡವಳಿಕೆಯಿಂದಾಗಿ ಇವುಗಳನ್ನು ಅಪಾಯಕಾರಿ ಪ್ರಾಣಿಗಳೆಂದು ಪರಿಗಣಿಸಲಾಗುತ್ತದೆ. ಕರು ಹೊಂದಿರುವ ತಾಯಿ ಆಫ್ರಿಕಾದ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಒಂದು. ಪ್ರತಿ ಚದರ ಇಂಚಿನ ಮೇಲೆ ೧೮೦೦ ಪೌಂಡ್ಸ್‍ನಷ್ಟು ಭಾರ ಹಾಕುವ ಶಕ್ತಿಯ ಬಲಶಾಲಿ ದವಡೆ ಇವುಗಳದಾಗಿದ್ದು ಭೂಮಿಯಲ್ಲಿನ ಸ್ತನಿಗಳಲ್ಲಿ ಇದು ಅತ್ಯಂತ ಹೆಚ್ಚು. ಈ ಕಚ್ಚುವ ಶಕ್ತಿ ಮನುಷ್ಯನಿಗೆ 120–160, ತೋಳ ೪೦೦, ಚಿರತೆಗಳಲ್ಲಿ 475, ಸಿಂಹ ೬೫೦, ಹುಲಿ ೧೦೦೦, ಸೀಳುನಾಯಿ ೧೧೦೦, ಕರಡಿ ೧೨೦೦ ಇದ್ದರೆ ಮೊಸಳೆಗೆ ಅತ್ಯಂತ ಜಾಸ್ತಿ ೩೭೦೦ ಇರುತ್ತದೆ. ಇದರ ಬಾಯಿ ಇತರ ಜೀವಿಗಳಿಗಿಂತ ಅತ್ಯಂತ ಅಗಲವಾಗಿರುವುದರಿಂದ ಒಮ್ಮೆ ಇದರ ಬಾಯಲ್ಲಿ ಸಿಕ್ಕಿ ಹಾಕಿಕೊಂಡ ಪ್ರಾಣಿ ಅಥವಾ ಮನುಷ್ಯ ಬದುಕಿ ಉಳಿಯುವುದು ಬಲು ಕಷ್ಟ. ಮರಿ ಹಾಕುವ ೧೦-೧೫ ದಿನ ಮೊದಲು ಮತ್ತು ಮರಿಗಳು ಪ್ರೌಡಾವಸ್ಥೆಗೆ ಬರುವರೆಗೂ ಸಹ ತಾಯಿ ಹಿಪ್ಪೊಗಳು ಅತ್ಯಂತ ಆಕ್ರಮಣಶೀಲವಾಗಿರುತ್ತವೆ. ಇವುಗಳಾ ಬಲವಾದ ದವಡೆ, ಬಲಶಾಲ ಮತ್ತ ಉದ್ದದ ಹಲ್ಲುಗಳು ಹಿಪಾಪಟಮಸ್ ಪ್ರಪಂಚದ ಅತೀ ದೊಡ್ದ ಅನಿರೀಕ್ಷಿತ ಆಕ್ರಮಣಕಾರಿ ಜೀವಿಗಳಾಗಿರುವುದರಿಂದ ಮನುಷ್ಯನ ಹಿಂದೆ ಬಿದ್ದಿತೆಂದರೆ ಆತ ಓಡಿ ತಪ್ಪಿಸಿಕೊಳ್ಳಲು ಅಸಾಧ್ಯ.
ಇತರ ಮಾಂಸಾಹಾರಿ ಪ್ರಾಣಿಗಳು ಆಹಾರಕ್ಕಾಗ ಮತ್ತು ಆತ್ಮರಕ್ಷಣೆಗೆ ಆಕ್ರಮಣ ಮಾಡಿದರೆ ಸಂಪೂರ್ಣ ಸಸ್ಯಾಹಾರಿಗಳಾಗಿರುವ ಹಿಪ್ಪೊಗಳು ತಮ್ಮ ವಲಯ ಪರಿಧಿ ಕಾಪಾಡಿಕೊಳ್ಳಲು ಬೋಟುಗಳು ಮತ್ತು ಮೀನುಗಾರರ ಮೇಲೆ ಒಮ್ಮೆಯೇ ಆಕ್ರಮಣ ಮಾಡಿದ ಅನೇಕ ನಿದರ್ಶನಗಳಿವೆ. ಇವುಗಳ ಆಕ್ರಮಣ ಅತ್ಯಂತ ಅನಿರೀಕ್ಷಿತ ಮತ್ತು ಮಾರಣಾಂತಿಕವಾಗಿರುತ್ತದೆ. ಅತ್ಯಂತ ಶಾಂತವಾಗಿ ಕಾಣುವ ಹಿಪ್ಪೊಗಳು ಕೆಲವೇ ಸೆಕೆಂಡುಗಳಲ್ಲಿ ಆಕ್ರಮಣಾಕಾರಿಯಾಗಿ ಪರಿವರ್ತನೆಗಳ್ಳುತ್ತವೆ. ಅನಿರೀಕ್ಷಿತ ಆಕ್ರಮಣ ಇವುಗಳ ಒಂದು ಸ್ವಾಭಾವಿಕ ಸ್ವಭಾವ.
ಅತ್ಯಂತ ಬಾಯಿ ಅಗಲವಾಗಿ ತೆರೆದಿರುವುದು (ಇದನ್ನು ಸೋಮಾರಿ ಆಕಳಿಕೆ ಎಂದು ತಪ್ಪು ಭಾವಿಸುವುದಿದೆ), ಗಂಟಲಿನಿಂದ ವಿಚಿತ್ರ ಶಬ್ಧ ಹೊರಡಿಸುವುದು, ನೀರಿನಲ್ಲಿ ಮೇಲಿಂದ ಮೇಲೆ ಮುಳುಗಿ ಏಳುವುದು, ಒಂದೇ ಸಮನೇ ನೇರವಾಗಿ ದಿಟ್ಟಿಸಿ ನೋಡುವುದು ಇವೆಲ್ಲಾ ಆಕ್ರಮಣ ಪೂರ್ವದ ಲಕ್ಷಣಗಳು. ಇವನ್ನು ಗಮನಿಸದಿದ್ದರೆ ಸಾವು ಖಚಿತ.

ರಕ್ಷಣಾ ತಂತ್ರ : ಕಡಿಮೆ ಬೆಳಕು, ಸಂಜೆ ಮತ್ತು ರಾತ್ರಿ ಇವುಗಳ ಸಮೀಪ ಹೋಗಲೇಬಾರದು, ಹಿಪ್ಪೋ ಮತ್ತು ನೀರಿನ ನಡುವೆ ಎಂದಿಗೂ ನಿಲ್ಲಬಾರದು, ನೆಲದಲ್ಲಿ ಬೆನ್ನಟ್ಟಿದರೆ ಅಂಕುಡೊಂಕಾಗಿ ಓಡಿ ತಪ್ಪಿಸಿಕೊಳ್ಳಬೇಕು. ಹಿಪ್ಪೊಗಳು ಅವುಗಳ ಭಾರವಾದ ದೇಹದ ಕಾರಣ ಒಮ್ಮೆಯೇ ತಿರುಗಲು ಕಷ್ಟಪಡುತ್ತವೆ. ಅಟ್ಟಿಸಿಕೊಂಡು ಬಂಡಲ್ಲಿ ಅಡೆತಡೆಗಳು, ಏರಿಗಳು (ಬಂಡೆಗಳು, ಮರಗಳು), ಮರ ಹತ್ತುವುದು ಇತ್ಯಾದಿಗಳಿಂದ ತಪ್ಪಿಸಿಕೊಳ್ಳಬಹುದು. ರಾತ್ರಿ ಅವುಗಳ ಕಣ್ಣು ಅಥವಾ ಮುಖದ ಮೇಲೆ ಬೆಳಕು ಬಿದ್ದರೆ ಅವು ಅತ್ಯಂತ ವ್ಯಗ್ರಗೊಳ್ಳುತ್ತವೆ. ಈ ವಿಷಯ ಇವುಗಳಿಗೆ ಆಹಾರ ಹಾಕುವವರಿಗೆ, ಇವುಗಳ ಪ್ರದೇಶ ಸ್ವಚ್ಚ ಮಾಡುವವರಿಗೆ ಚೆನ್ನಾಗಿ ತಿಳಿಸಿರುವುದು ಮತ್ತು ಇದರ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಏಕೆ ಇವುಗಳು ನಮ್ಮಲ್ಲಿವೆ?

ಇವು ಕಡಿಮೆ ಆಹಾರ ಸೇವಿಸಿ ಆಗಾದ ಶರೀರ ಗಾತ್ರ ಬೆಳೆಸಿಕೊಳ್ಳುವುದರಿಂದ ಮತ್ತು ಸುಲಭ ನಿರ್ವಹಣೆಯ ಕಾರಣ ನಮ್ಮ ದೇಶದ ಅನೇಕ ಮ್ರಗಾಲಯಗಳಲ್ಲಿ ಇವುಗಳನ್ನು ಸಾಕಲಾಗುತ್ತಿದೆ. ಅದೆಷ್ಟೇ ಆಕ್ರಮಣಕಾರಿಗಳಾದರೂ ಸಹ ಇವು ಸಸ್ಯಾಹಾರಿ ಪ್ರಾಣಿಗಳು. ಎಲ್ಲಾ ಪ್ರಾಣಿಗಳಂತೆ ಹಿಪ್ಪೋ ಸಹ ನಾಶದತ್ತ ಸಾಗುವ ಒಂದು ಪ್ರಾಣಿ. ಇದನ್ನು ಅದರ ನೈಸರ್ಗಿಕ ಜೀವಜಾಲದಲ್ಲಿಯೇ ಬಿಡಬೇಕೇ ಹೊರತು ಮ್ರಗಾಲಯಗಳಂತ ಜನನಿಬಿಡ ಪ್ರದೇಶಗಳಲ್ಲಿ ಜನಾಕರ್ಷಣೆಗೆಂದು ತಂದು ಸಾಕಿದರೆ ಅವುಗಳ ಸ್ವಾತಂತ್ರ್ಯಕ್ಕೂ ಸಹ ಬಹಳ ಧಕ್ಕೆ ಮತ್ತು ಕೆಲವೊಮ್ಮೆ ಮನುಷ್ಯ ಜೀವಕ್ಕೂ ಸಹ ಅಪಾಯಕಾರಿ.

ಮಾಹಿತಿ
ಡಾ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204

danjer shivmoga Water ಅಪಾಯಕಾರಿ ದೈತ್ಯ ನೀರು ಶಿವಮೊಗ್ಗ
Follow on Facebook Follow on Instagram
Share. Facebook Twitter WhatsApp Telegram
Previous Articleವಾರ್ತಾ ಇಲಾಖೆಗೆ ಹಿರಿಯ ಸಹಾಯಕ ನಿರ್ದೇಶಕರ ಆಗಮನ; ಎಂ.ಜುಂಜಣ್ಣ ಅಧಿಕಾರ ಸ್ವೀಕಾರ
Next Article ಅಧ್ಯಾತ್ಮ ರಶ್ಮಿ -1
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ಭಟ್ಕಳದಲ್ಲಿ ಕಪ್ಪೆಚಿಪ್ಪು ಸಂಗ್ರಹಕ್ಕೆ ತೆರಳಿದ್ದಾಗ ಭೀಕರ ದುರಂತ: ವೆಂಕಟಾಪುರ ನದಿಯಲ್ಲಿ ಮುಳುಗಿ 10 ಮಂದಿ ಸಾವು

May 24, 2026

ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಏರಿಕೆ? ವಾಹನ ಸವಾರರಿಗೆ ಶಾಕ್ ನೀಡಲು ಸಜ್ಜಾದ ತೈಲ ಕಂಪನಿಗಳು!

May 24, 2026

ಪಿಂಚಣಿ ನಿಲ್ಲಿಸಿ ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್‌ಗೆ ಯಾವ ಯೋಗ್ಯತೆ ಇದೆ?: ಆರ್‌.ಅಶೋಕ ಆಕ್ರೋಶ

May 16, 2026
Add A Comment
Leave A Reply Cancel Reply

Advertisement
Latest Posts

28/05/2026 ರ ನಿತ್ಯ ಭವಿಷ್ಯ

27/05/2026 ರ ನಿತ್ಯ ಭವಿಷ್ಯ – ಬುಧವಾರ

26/05/2026 ರ ನಿತ್ಯ ಭವಿಷ್ಯ

ಬಳ್ಳಾರಿ ಜನರೇ ಗಮನಿಸಿ: ಮೇ 26 ರಂದು ನಗರದ ಈ ಭಾಗಗಳಲ್ಲಿ 7 ಗಂಟೆ ವಿದ್ಯುತ್ ಕಡಿತ!

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.