ಬೀದರ್: ಮಹಾರಾಷ್ಟ್ರಕ್ಕೆ 83 ಕೇಜಿ ಗಾಂಜಾ ಸಾಗಿಸುವಾಗ ಜಪ್ತಿ, ಸೆರೆ
ಬೀದರ್: ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುತ್ತಿದ್ದ 83 ಕೇಜಿ 670 ಗ್ರಾಂ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಇಗೆಗಳಲ್ಲಿ ಬೀದರ್‌ಜಿಲ್ಲೆ ಮನ್ನಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಂಗೂರ ಗ್ರಾಮ ಸಮೀಪದ ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಈ ಕುರಿತು ಬುಧವಾರ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಮಾ.25ರ ನಸುಕಿನ 1 ಗಂಟೆಗೆ ಇಬ್ಬರು ವ್ಯಕ್ತಿಗಳು ಅನಧಿಕೃತವಾಗಿ ಹೈದ್ರಾಬಾದ್ -ಮುಂಬೈ ಹೆದ್ದಾರಿ ಮಾರ್ಗದ ಮೂಲಕ ಮಹಾರಾಷ್ಟ್ರಕ್ಕೆ ಸಾಗಿಸಲು ಭಂಗೂರ ಹತ್ತಿರ ಸರ್ವಿಸ್ ರಸ್ತೆ ಬದಿಯಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದರು. ಸಾಗಾಣಿಕೆ ಮಾಡಲು ವಾಹನಕ್ಕಾಗಿ ಕಾಯುತ್ತಿರುವ ಬಗ್ಗೆ ಮನ್ನಳ್ಳಿ ಠಾಣೆಯ ಪಿಎಸ್‌ಐ ನಂದಿನಿ ಅವರು ಖಚಿತ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೊಬ್ಬ ಕತ್ತಲಲ್ಲಿ ಓಡಿ ಹೋಗಿದ್ದಾನೆ.
