ದಕ್ಷಿಣದಿಂದ ದೂರವಾದ್ರ ಜಮೀರ್ ?; ನಡೆಯುತ್ತಾ ಒಳ ತಂತ್ರಗಾರಿಕೆ
ಟಿಒಬಿ ನ್ಯೂಸ್ ಬೆಂಗಳೂರು
ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯುವಂತೆ ಮನವೊಲಿಕೆ ಕಸರತ್ತಿನಿಂದಲೂ ಸಚಿವ ಜಮೀರ್ ಅಹಮದ್ ದೂರ ಉಳಿದರು. ಇದು ರಾಜಕೀಯ ವಲಯದಲ್ಲಿ ಈಗ ಹಲವು ರೀತಿಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ನಾಮ ಪತ್ರ ಸಲ್ಲಿಸುವ ವೇಳೆ ಸಿಎಂ-ಡಿಸಿಎಂ ಹಾಜ ರಿದ್ದರು. ಆದರೆ, ಜಮೀರ್ ಗೈರುಹಾಜರಾಗಿದ್ದರು. ಇನ್ನು ದಾವಣಗೆರೆ ದಕ್ಷಿಣದಲ್ಲಿ ಅತಿಹೆಚ್ಚು 23 ಅಲ್ಪಸಂಖ್ಯಾತರು ನಾಮಪತ್ರ ಸಲ್ಲಿಸಿದ್ದರು.
ಅವರ ಮನವೊಲಿಸಿ, ನಾಮಪತ್ರ ಹಿಂಪಡೆಯುವಂತೆ ಮಾಡಬೇಕು ಎಂದು ಒಂದು ದಿನದ ಹಿಂದಷ್ಟೇ ಕಾಂಗ್ರೆಸ್ ಶಾಸಕಾಂಗ ಪಕ್ಷ ದ ಸಭೆಯಲ್ಲಿ ಅಲ್ಪಸಂಖ್ಯಾತ ನಾಯಕರಿಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಸೂಚಿಸಿದ್ದರು.
ಅದರಂತೆ ಮೇಲ್ಪನೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕ ರಿಜ್ವಾನ್ ಅರ್ಷದ್ ಸೇರಿ ಕೆಲ ನಾಯಕರು ದಾವಣಗೆರೆ ತೆರಳಿ, ಮನವೊಲಿಕೆಗೆ ಕೊನೇ ಕಸರತ್ತು ನಡೆಸಿದರು. ಆದರೆ, ಜಮೀರ್ ದಾವಣಗೆರೆಗೆ ಹೋಗದೇ ಕೇರಳ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ತೆರಳಿದರು.
