ರಾಜ್ಯದಲ್ಲಿರೋದು ಎಸ್ಸಿ-ಎಸ್ಟಿ, ಒಬಿಸಿ ವಿರೋಧಿ ಸರ್ಕಾರ: ಬೊಮ್ಮಾಯಿ
ಬಾಗಲಕೋಟೆ: ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವಿರೋಧಿ ಸರ್ಕಾರ ಇದೆ. ಯಾರ ಮತ ಪಡೆದಿದ್ದಾರೋ ಅವರಿಗೆ ಅನ್ಯಾಯ ಮಾಡುವ ಸರ್ಕಾರ ಇದೆ. ಗಂಗಾಮತಸ್ಥರೇ, ಸುಶಿಕ್ಷಿತರಾದ ನೀವು ಎಲ್ಲಿರುತ್ತೇವೆ, ಅಲ್ಲಿ ಗೆಲುವಿದೆ ಎಂದು ತೋರಿಸಿ. ಆಗ ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಬಮ್ಮಣಗಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಮತಯಾಚನೆ ಮಾಡಿ, ಅವರು ಮಾತನಾಡಿದರು. ಅಂಬಿಗರ ಚೌಡಯ್ಯನವರ ಕುಲಬಾಂಧವರನ್ನು ನೋಡುವುದು ಬಹಳ ಸಂತೋಷವಾಗುತ್ತದೆ. ಅತ್ಯಂತ ಕಠಿಣ ಪರಿಶ್ರಮ ಪಡುವ ಕುಲ ಅದು. ಈ ಸಮುದಾಯ ಮುಂದೆ ಬರಬೇಕು ಎಂದರು.
